ಸೈಂಟ್‌ ಪಾವ್ಲ್‌ಸ್‌ ಕ್ಯಾಥೋಲಿಕ್‌ ಅಸೋಸಿಯೇಶನ್‌ ಅಮೃತ ಮಹೋತ್ಸವ


Team Udayavani, Dec 14, 2017, 4:40 PM IST

13-Mum01.jpg

ಮುಂಬಯಿ: ಇಂದು ಸಾರ್ವಜನಿಕ ವಲಯದ ಸೇವಾ ನಡಿಗೆ ಬಲು ಕಷ್ಟಕರ. ಆದರೂ ಈ ಸಂಸ್ಥೆ 75ರ ಮುನ್ನಡೆಯಲ್ಲಿ ಸಾಗುತ್ತಿರುವುದು ಅಭಿನಂದನೀಯ. ಪ್ರಾಮಾಣಿಕ ಮತ್ತು ಶ್ರಮದ ಗಳಿಕೆ ಎಂದೂ ಶಾಶ್ವತವಾಗಿರುತ್ತದೆ. ಇದಕ್ಕೆ ಈ ವಾರ್ಷಿಕೋತ್ಸವವೇ ಸಾಕ್ಷಿಯಾಗಿದೆ. ಬದಲಾವಣೆಯಲ್ಲಿ ಕಾಲಘಟ್ಟದಲ್ಲಿ ನಾವು ಬದಲಾಗಿ ಮುನ್ನಡೆಯುವ ಅಗತ್ಯವಿದೆ. ಆದರೆ ಎಂದಿಗೂ ನಮ್ಮ ಪರಂಪರೆ, ಸಂಸ್ಕೃತಿ ಮರೆಯದೆ ಅದರ ಪರಿಪಾಲನೆ ನಮ್ಮ ಆದ್ಯ ಕರ್ತವ್ಯ ಆಗಬೇಕು. ಆವಾಗಲೇ ನಮ್ಮ ಬದುಕು ಸಫಲತೆ ಕಾಣುವುದು  ಎಂದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಉನ್ನತಾಧಿಕಾರಿ ವಲೇರಿಯನ್‌ ಡೆಸಾ ನುಡಿದರು.

ಫೋರ್ಟ್‌  ಲಯನ್‌ಗೆàಟ್‌ನಲ್ಲಿ ಸುಮಾರು ಏಳೂವರೆ ದಶಕಗಳಿಂದ ಸೇವಾನಿರತ ಸೈಂಟ್‌ ಪಾವ್ಲ್‌ಸ್‌  ಕ್ಯಾಥೋಲಿಕ್‌ ಅಸೋಸಿಯೇಶನ್‌ ಮುಂಬಯಿ ಸಂಸ್ಥೆಯ ಅಸೋಸಿಯೇಶನ್‌ನ ಸೈಂಟ್‌ ಪಾವ್ಲ್‌ ಸಭಾಗೃಹದ‌ಲ್ಲಿ ನಡೆದ 75ನೇ ಸಂಸ್ಥಾಪನಾ ದಿನಾಚರಣೆ ಮತ್ತು ವಾರ್ಷಿಕೋತ್ಸವ ಸಂಭ್ರಮದಲ್ಲಿ ಅಮೃತ ಮಹೋತ್ಸವ ಆಚರಣೆಗೆ ಚಾಲನೆಯನ್ನಿತ್ತು “ಸೈಂಟ್‌ ಪಾವ್ಲ್‌ ಅಮೃತ ಮಹೋತ್ಸವ’ ಸ್ಮರಣ ಸಂಚಿಕೆಯ ಮುಖಪುಟವನ್ನು  ಅನಾವರಣಗೊಳಿಸಿ ವಲೇರಿಯನ್‌ ಮಾತನಾಡಿದರು.

ಅತಿಥಿ  ಅಭ್ಯಾಗತರಾಗಿ ಮಜಾYಂವ್‌ ಡಾಕ್‌ ಲಿಮಿಟೆಡ್‌ ಸಂಸ್ಥೆಯಸಹಾಯಕ ಮಹಾ ಪ್ರಬಂಧಕ ಅಲೊ#àನ್ಸ್‌ ಮಸ್ಕರೇನ್ಹಸ್‌, ಉದ್ಯಮಿಗಳಾದ ಸ್ಟೀವನ್‌ ಡಿಮೆಲ್ಲೋ, ಡೆನಿಸ್‌ ಕಾರ್ದೋಜಾ,  ಹಿರಿಯ ಕವಿ, ಲೇಖಕ ವಿ. ಡಿಸಿಲ್ವಾ ಕಾಂಜೂರುಮಾರ್ಗ್‌, ಅಸೋಸಿಯೇಶನ್‌ನ ಹಿರಿಯ ಸದಸ್ಯ ಥೋಮಸ್‌ ನೊರೋನ್ಹಾ,  ಉಪಸ್ಥಿತರಿದ್ದು ಸಂದಭೊìàಚಿತವಾಗಿ ಮಾತನಾಡಿ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್‌ ಹಬ್ಬದ ಶುಭಾಶಯ ಕೋರಿದರು.

ಸಬಿನಾ ಡಿಮೆಲ್ಲೋ ಮತ್ತು ಎಲಿಜಾ ಮಾರ್ಟಿಸ್‌ ಅವರು ಅಧ್ಯಕ್ಷ  ಸ್ಟೇನಿ ಫೆರ್ನಾಂಡಿಸ್‌ ಮತ್ತು ಪದಾಧಿಕಾರಿಗಳೊಂದಿಗೆ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನಿತ್ತು ಶುಭಹಾರೈಸಿದರು. ಗೌರವ ಕಾರ್ಯದರ್ಶಿ ಸ್ವಾಗತಿಸಿ ರಿಚಾರ್ಡ್‌ ಡಿ’ಸೋಜಾ ಸಂಸ್ಥೆಯ ಎಪ್ಪತ್ತೆ$çದರ ಸಾಮಾಜಿಕ ಸೇವಾ ಸಾಧನೆ, ಚಟುವಟಿಕೆ ತಿಳಿಸಿ ನಾವೆಲ್ಲರೂ ವಿಭಿನ್ನ ಪರಿವಾರದಿಂದ ಬಂದವರು. ಆದ್ದರಿಂದ ನಮ್ಮ ಮನೋಭಾವ, ಆಚಾರ ವಿಚಾರ, ನಡೆನುಡಿಗಳೂ ಭಿನ್ನವಾಗಿರುತ್ತವೆ. ಆದರೆ ಇಂತಹ ತಾರತಮ್ಯಗಳು ಸೈಂಟ್‌ ಪಾವ್‌É ಸಂಸ್ಥೆಯಲ್ಲಿ ಉದ್ಭವಿಸಿಲ್ಲ. ಆದ್ದರಿಂದ ಸಂಸ್ಥೆಯು ಎಲ್ಲರ ಪ್ರೀತ್ಯಾಧಾರಗಳಿಗೆ ಪಾತ್ರವಾಗಿ ಪ್ರತಿಷ್ಠಿತ ಸಂಸ್ಥೆಯಾಗಿ ಇಷ್ಟೆತ್ತರಕ್ಕೆ ಬೆಳೆದು ನಿಂತಿದೆ ಎಂದರು.

ವಾರ್ಷಿಕೋತ್ಸವದ ನಿಮಿತ್ತ ಬೆಳಗ್ಗೆ ಕೊಲಬಾದ ವುಡ್‌ಹೌಸ್‌ ಹೊಲಿನೇಮ್‌ ಕಾಥೆದ್ರಾಲ್‌ನಲ್ಲಿ ಸಂಭ್ರಮಿಕ ಅಭಿವಂದನಾ ಪೂಜೆ ನಡೆಸಲಾಗಿದ್ದು, ರೆ| ಫಾ| ರಿಚಾರ್ಡ್‌ ಡಿಸೋಜಾ ತ್ರಾಸಿ ಕೊಂಕಣಿಯಲ್ಲಿ ಪೂಜೆ ನೆರವೇರಿಸಿ ಅನುಗ್ರಹಿಸಿ, ನಾವು ಬರೇ ದಿನಾಚರಣೆ, ಹಬ್ಬಹರಿದಿನಗಳನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ನಾವು ಯಾರನ್ನು ಗೌರವಿಸುತ್ತೇವೆಯೋ ಅವರ ಜೀವನ ಶೈಲಿಯನ್ನು ನಮ್ಮಲ್ಲಿ ಅಳವಡಿಸಿ ಬಾಳಬೇಕು. ಆವಾಗಲೇ ಉತ್ಸವಗಳು ಅರ್ಥಪೂರ್ಣ ಆಗುತ್ತವೆ ಎಂದರು.

ಗೌರವ ಕೋಶಾಧಿಕಾರಿ ಮೈಕಲ್‌ ಲೊಬೋ, ಜೊತೆ ಕಾರ್ಯದರ್ಶಿ ಆ್ಯಂಟನಿ ನಜ್ರೆàತ್‌, ಜೊತೆ ಕೋಶಾಧಿಕಾರಿ ಸುನೀಲ್‌ ತಾವ್ರೋ ವೇದಿಕೆಯಲ್ಲಿ ಆಸೀನರಾಗಿದ್ದು, ಅಧ್ಯಕ್ಷ ಸ್ಟೇನಿ ಫೆರ್ನಾಂಡಿಸ್‌ ಅವರು ಅತಿಥಿಗಳು, ಉಪಸ್ಥಿತ ಹಿರಿಯ ಸದಸ್ಯರುಗಳಿಗೆ ಪುಷಗುಚ್ಚಗಳನ್ನಿತ್ತು ಗೌರವಿಸಿದರು. ವಿವಿಯನ್‌ ಮಚಾದೋ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಸಾದ್‌ ನಜ್ರೆàತ್‌ ವಂದಿಸಿದರು. ಪ್ರವೀಣ್‌ ಅಲ್ಮೇಡ ಸಾಂತಾಕ್ಲೋಸ್‌ ಮೂಲಕ ನೆರೆದ ಸರ್ವರನ್ನು ರಂಜಿಸಿದರು.

ಟಾಪ್ ನ್ಯೂಸ್

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.