ನಾಗರಹೊಳೆಯಲ್ಲಿ ಹುಲಿಗಣತಿ ಅಂತ್ಯ

Team Udayavani, Jan 15, 2018, 4:30 PM IST

mys-.jpg

ಹುಣಸೂರು: ಆರು ದಿನಗಳ ಕಾಲ ನಾಗರಹೊಳೆ ರಾಷ್ಟ್ರೀಯ ಉದ್ಯಾನ ದಲ್ಲಿ ನಡೆದ ರಾಷ್ಟ್ರೀಯ ಹುಲಿಗಣತಿ ಅಂತ್ಯಗೊಂಡಿತು. ವನ್ಯಜೀವಿ ಆಸಕ್ತ ಸ್ವಯಂಸೇವಕರು ಹಾಗೂ ಪೊನ್ನಂ ಪೇಟೆ ಅರಣ್ಯ ತರಬೇತಿ ಕಾಲೇಜಿನ
ವಿದ್ಯಾರ್ಥಿಗಳು ಗಣತತಿ ವೇಳೆ ಹುಲಿಕಂಡ ಖುಷಿಯಲ್ಲಿ ವಾಪಸ್‌ ಆದರು.

ಮೊದಲ ಮೂರುದಿನ ಮಾಂಸಹಾರಿ, ನಂತರದ ಮೂರು ದಿನ ಸಸ್ಯಹಾರಿ ಪ್ರಾಣಿಗಳ ಗಣತಿ ಹಾಗೂ ಉದ್ಯಾನದಲ್ಲಿ ವನ್ಯಜೀವಿಗಳ ಆಹಾರ ಹಾಗೂ ಜೀವ ವೈವಿಧ್ಯತೆ ಮತ್ತು ಉದ್ಯಾನದ ಪರಿಸರ, ಸ್ಥಿತಿಗತಿ ಬಗ್ಗೆ ಗಣತಿ ನಡೆಸಿ, ವೆಜ್ಞಾನಿಕವಾಗಿ ದಾಖಲು ಮಾಡಿರುವ ಎಲ್ಲ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಿದ್ದಾರೆ. 

ಗಣತಿ ವಿವರ ದಾಖಲು: ಕಡಿಮೆ ಪ್ರದೇಶದಲ್ಲಿ ಹೆಚ್ಚು ಹುಲಿ ಸಾಂದ್ರತೆ ಇರುವ ನಾಗರಹೊಳೆ ಉದ್ಯಾನದಲ್ಲಿ
ಒಟ್ಟಾರೆ ಗಣತಿಯಲ್ಲಿ 15ಕ್ಕೂ ಹೆಚ್ಚು ಹುಲಿ, ಮೂರು ಚಿರತೆ ಸೇರಿದಂತೆ ಸಾಕಷ್ಟು ಆನೆ, ಜಿಂಕೆ, ಸಾಂಬಾರ್‌
ಜಿಂಕೆ, ಕಾಡೆಮ್ಮೆ, ಕಾಡುಕುರಿ, ಕಾಡುಹಂದಿ, ಮುಳ್ಳುಹಂದಿ, ಕಾಡು ಕೋಳಿ, ಉಡ, ಪಕ್ಷಿಗಳು ಸೇರಿದಂತೆ ಉದ್ಯಾನದಲ್ಲಿನ ವನ್ಯಜೀವಿಗಳನ್ನು ಕಂಡಿದ್ದಾರೆ. ಇವೆಲ್ಲದರ ಜೊತೆಗೆ ಗಣತಿ ದಾರರು ಪ್ರಾಣಿಗಳಿಗೆ ಕಾಡಿನೊಳಗೆ ಲಭ್ಯವಿರುವ ಹುಲ್ಲು, ವಿವಿಧ ಜಾತಿಯ ಮರಗಳ ವಿವರ ದಾಖಲಿಸಿದರು.

ಇತ್ತ ಮೈಸೂರು, ಕೊಡಗು, ಕೇರಳದ ಮಧಮಲೆ, ತಮಿಳುನಾಡಿನ ವೈನಾಡುಗಡಿ ಭಾಗದವರೆಗೆ ಪಶ್ಚಿಮಘಟ್ಟಗಳ (ಬ್ರಹ್ಮಗಿರಿ) ಸಾಲಿನಲ್ಲಿ ಸೇರಿ ಹಸಿರು ಹಾಸು ಹೊಕ್ಕಾಗಿರುವ ಈ ವಿಶ್ವ ವಿಖ್ಯಾತ ನಾಗರಹೊಳೆ (ರಾಜೀವ್‌ ಗಾಂಧಿ) ರಾಷ್ಟ್ರೀಯ ಉದ್ಯಾನವನದ 643 ಚದರ ಕಿ.ಮೀ ವ್ಯಾಪ್ತಿಯ 8 ವಲಯಗಳಲ್ಲಿ ಕೊಡಗು ಜಿಲ್ಲೆಗೆ ಸೇರಿದ ಆನೆಚೌಕೂರು, ಕಲ್ಲಹಳ್ಳ, ವೀರನಹೊಸಹಳ್ಳಿ, ನಾಗರ ಹೊಳೆ, ಡಿ.ಬಿ.ಕುಪ್ಪೆ, ಅಂತರಸಂತೆ, ಮೇಟಿಕುಪ್ಪೆಗಳಲ್ಲಿ ಹುಣಸೂರು ವಲಯಗಳನ್ನಾಗಿ ವಿಂಗಡಿಸಿದ್ದು, ನಾಗರಹೊಳೆ ಉದ್ಯಾನದ ನುಗು ಜಲಾಶಯ, ಕಬಿನಿ ಹಿನ್ನೀರು ಪ್ರದೇಶದ ದಟ್ಟ ಕಾಡಿರುವ ಡಿ,ಬಿ,ಕುಪ್ಪೆ, ಮೇಟಿಕುಪ್ಪೆ, ಅಂತರ ಸಂತೆಯಲ್ಲಿ ಮತ್ತು ಹೆಚ್ಚಾಗಿ ಹುಲಿಗಳು ಕಾಣಿಸಿದೆ, ಕಲ್ಲಹಳ್ಳ ವಲಯದಲ್ಲಿ ರಸ್ತೆ ಬದಿಯೇ ಹುಲಿ ಕಾಣಿಸಿಕೊಂಡಿದ್ದರೆ, ಹುಣಸೂರು ವಲಯದಲ್ಲಿ ಎರಡು, ವೀರನಹೊಸಹಳ್ಳಿಯಲ್ಲಿ ಒಂದು ಮಾತ್ರ ಗಣತಿ ವೇಳೆ ಗೋಚರಿಸಿದೆ. ಹಲವು ಸ್ವಯಂ ಸೇವಕರು ಹಾಗೂ ಸಿಬ್ಬಂದಿಗಳು ಮತ್ತು ವನ್ಯಜೀವಿ ಛಾಯಾ ಚಿತ್ರಗ್ರಾಹಕರು ನೇರವಾಗಿ ಕಂಡ ಪ್ರಾಣಿಗಳನ್ನು ಸೆರೆ ಹಿಡಿದಿದ್ದಾರೆ.

ಉದ್ಯಾನದ 8 ವಲಯಗಳಲ್ಲೂ ಆಯಾ ವಲಯದ ವಲಯ ಅರಣ್ಯಾಕಾರಿಗಳ ಮೇಲುಸ್ತು ವಾರಿಯಲ್ಲಿ ಗಣತಿ ಕಾರ್ಯ ನಡೆದಿದೆ. ಆಯಾ ವಿಭಾಗದ ಎಸಿಎಫ್ಗಳಾದ ಪ್ರಸನ್ನಕುಮಾರ್‌,ಆಂಥೋಣಿ ಪೌಲ್‌, ಪೂವಯ್ಯ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ವ್ಯವಸ್ಥಿತ ಗಣತಿಗೆ ಹಾಗೂ ಆಗಮಿಸಿದ್ದವರಿಗೆ ಸೌಕರ್ಯ ಒದಗಿಸಲು ಶ್ರಮಹಾಕಿದರು. 

„ ಸಂಪತ್‌ ಕುಮಾರ್‌

ಟಾಪ್ ನ್ಯೂಸ್

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.