ಮೊದಲ ಬಾರಿಗೆ 35,000 ದಾಟಿದ ಮುಂಬಯಿ ಶೇರು ವಿಕ್ರಮ
Team Udayavani, Jan 17, 2018, 4:41 PM IST
ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 310.77 ಅಂಕಗಳ ಭರ್ಜರಿ ಏರಿಕೆಯನ್ನು ಸಾಧಿಸಿ ಇದೇ ಮೊದಲ ಬಾರಿಗೆ 35,081.82 ಅಂಕಗಳ ಮಟ್ಟವನ್ನು ದಾಟುವ ಮೂಲಕ ಇಂದು ಬುಧವಾರದ ವಹಿವಾಟನ್ನು ತುಂಬು ಹುಮ್ಮಸ್ಸಿನೊಂದಿಗೆ ಕೊನೆಗೊಳಿಸಿತು. ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಶೇರುಗಳ ಭರಾಟೆಯ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಸೆನ್ಸೆಕ್ಸ್, ನಿಫ್ಟಿ ಹೊಸ ಸಾರ್ವಕಾಲಿಕ ಎತ್ತರವನ್ನು ಕಂಡವು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 88.10 ಅಂಕಗಳ ಏರಿಕೆಯನ್ನು ದಾಖಲಿಸಿ 10,788.55 ಅಂಕಗಳ ಸಾರ್ವಕಾಲಿಕ ಎತ್ತರದ ಮಟ್ಟವನ್ನು ತಲುಪಿತು.
ಕಳೆದ ಡಿ.26ರಂದು ಸೆನ್ಸೆಕ್ಸ್ 34,000 ಅಂಕಗಳ ಮಟ್ಟ ದಾಟಿದ ಬಳಿಕ ಸರಿಯಾಗಿ 17 ದಿನಗಳ ವಹಿವಾಟಿನಲ್ಲಿ 35,000 ಅಂಕಗಳ ಹೊಸ ದಾಖಲೆಯ ಎತ್ತರವನ್ನು ತಲುಪಿದೆ.
ಇಂದು 3,044 ಶೇರುಗಳು ವಹಿವಾಟಿಗೆ ಒಳಪಟ್ಟವು; 1,456 ಶೇರುಗಳು ಮುನ್ನಡೆ ಸಾಧಿಸಿದವು; 1,437 ಶೇರುಗಳ ಹಿನ್ನಡೆಗೆ ಗುರಿಯಾದವು; 151 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ
Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್ ಕ್ಲಾಸ್
Horoscope: ಹಿತಶತ್ರುಗಳು ಮತ್ತು ಸ್ವಾರ್ಥಿಗಳ ಬಗ್ಗೆ ಎಚ್ಚರವಿರಲಿ
Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ
Election Result: ಟ್ರೆಂಡ್ ಗೊತ್ತಾದರೂ ಫಲಿತಾಂಶ ಘೋಷಣೆ ವಿಳಂಬ ಸಾಧ್ಯತೆ