ರಾಜ್ಯದ ನೀರಾವರಿ ಯೋಜನೆಗೆ ಲಕ್ಷ ಕೋಟಿ ಅನುದಾನ


Team Udayavani, Jan 24, 2018, 12:55 PM IST

m5-rajya.jpg

ಹುಣಸೂರು: ಉತ್ತರ ಪ್ರದೇಶದಲ್ಲಿ ನಿರ್ನಾಮವಾಗಿರುವ ಕಾಂಗ್ರೆಸ್‌, ಅಲ್ಲಿ ದಿಗ್ವಿಜಯ ಸಾಧಿಸಿ ಹೊಸ ದಾಖಲೆ ಮಾಡಿರುವ ಆದಿತ್ಯನಾಥರ ಬಗ್ಗೆ ಸಿದ್ದರಾಮಯ್ಯರ ಟೀಕೆ ನಗೆ ಪಾಟಿಲಾಗಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ  ತಿಳಿಸಿದರು.

ನಗರದ ಮುನೇಶ್ವರಕಾವಲ್‌ ಮೈದಾನದಲ್ಲಿ ಬಿಜೆಪಿಯ 216ನೇ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮುಂದೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ, ನಮ್ಮ ಅವಧಿಯಲ್ಲಿ ನೀರಾವರಿ ಯೋಜನೆಗೆ ಒಂದು ಲಕ್ಷ ಕೋಟಿ ಅನುದಾನ ಮೀಸಲಿಡುತ್ತೇನೆ, ನಿಮ್ಮ ಬೆಂಬಲ ನಮ್ಮ ಪಕ್ಷದ ಮೇಲೆ ಅಚಲವಾಗಿರಲಿ,

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ದಿನವೇ ರೈತರು, ಮಹಿಳೆಯರು, ಸರ್ವಜನರು  ಸುಭಿಕ್ಷೆಯಿಂದಿರುವಂತೆ ಕಾರ್ಯಕ್ರಮ ರೂಪಿಸುತ್ತೇವೆ,  ಸ್ವತ್ಛ, ಧಕ್ಷ, ಪ್ರಾಮಾಣಿಕ ಆಡಳಿತ ನೀಡುತ್ತೇವೆ, ಮುಂದೆ ಈ ನಾಡಿಗೆ ನೀಡುವ ಕೊಡುಗೆಯನ್ನು ಫೆಬ್ರವರಿ 4 ರಂದು ಬೆಂಗಳೂರಿನಲ್ಲಿ ನಡೆಯುವ ರ್ಯಾಲಿಯಲ್ಲಿ ಮೋದಿಯವರ ಸಮ್ಮುಖದಲ್ಲಿ ಘೋಷಿಸಲಾಗುವುದೆಂದರು.

ಕೇಸ್‌ ವಾಪಾಸ್‌: ಹುಣಸೂರಲ್ಲಿ ಈ ಬಾರಿ ಹನುಮಜಯಂತಿ ಆಚರಿಸಿ, ಮುಂದೆ ನಮ್ಮದೇ ಸ‌ರ್ಕಾರ ಅಧಿಕಾರಕ್ಕೆ ಬಂದು ಅಪೇಕ್ಷಿಸಿದ ಮಾರ್ಗದಲ್ಲೇ ವೈಭವದ ಮೆರವಣಿಗೆ ನಡೆಯುವಂತೆ ನೋಡಿಕೊಳೆ¤àವೆ, ಕೇಸ್‌ ಹಾಕಿರುವುದನ್ನು ಹಿಂಪಡೆಯುತ್ತೇವೆಂದು ಯಡಿಯೂರಪ್ಪ ಭರವಸೆ ಇತ್ತರು.

ಕೇಂದ್ರಮಂತ್ರಿ ಫಾರ್ಮಾನು: ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಕಾಂಗ್ರೆಸ್‌ನ ದೇಶದ ಕೊನೆಯ ಮುಖ್ಯಮಂತ್ರಿ ಎನಿಸಿಕೊಳ್ಳುವ ಸಿದ್ದರಾಮಯ್ಯರಿಗೆ ವಿದಾಯ ಹೇಳಬೇಕಿದೆ. ಮುಂದೆ ಸುಶಾಸನ ಸರಕಾರ ಬರಲಿದೆ ಎಂದು ಆಶಾಭಾವನೆ  ವ್ಯಕ್ತಪಡಿಸಿ, ಮುಂಬರುವ ಹನುಮ ಜಯಂತಿಯಲ್ಲಿ ಕನಿಷ್ಟ 50 ಸಾವಿರ ಹಿಂದೂಗಳು ಭಾಗವಹಿಸಬೇಕೆಂದು ಫಾರ್ಮಾನು ಹೊರಡಿಸಿದರು.

ಬಿಜೆಪಿಯಿಂದ ದೇವರಾಜು ಆಡಳಿತ: ಸಂಸದ ಪ್ರತಾಪ ಸಿಂಹ ಮಾತನಾಡಿ, ನಿದ್ರೆ ಮಾಡುವ ಸಿದ್ದರಾಮಯ್ಯ ಜಾತ್ರೆ ಮೈಸೂರಿನಲ್ಲಿ ಮುಗಿದ ಅಧ್ಯಾಯ, ರಾಜ್ಯಕ್ಕೆ ತಟ್ಟಿರುವ ಶಾಪ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮೂಲಕ ವಿಮೋಚನೆಗೊಳ್ಳಲಿದೆ, ಎಲ್ಲರನ್ನೂ ಏಕ ವಚನದಲ್ಲೇ ಸಂಬೋಧಿಸುವ ಮುಖ್ಯಮಂತ್ರಿಗಳು ಯಾರಿಗಾದರೂ ಮರ್ಯಾದೆಕೊಟ್ಟಿರುವ ಒಂದೇ ಒಂದು ಸಾಕ್ಷಿ ಇದ್ದರೆ ತೋರಿಸಲೆಂದು ಸವಾಲು ಹಾಕಿ, ಮುಂದೆ ದೇವರಾಜ ಅರಸರು ನಡೆಸುತ್ತಿದ್ದ ಆಡಳಿತ ಮತ್ತೆ ನಮ್ಮ ಮೂಲಕ ಮರುಕಳಿಸಲಿದೆ.

ಎಸ್‌.ಪಿ.ವಿರುದ್ಧ ಆಕ್ರೋಶ: ಸಂಸದ ಪ್ರತಾಪಸಿಂಹ ಈದ್‌ ಮಿಲಾದನ್ನು ಯಶಸ್ವಿಯಾಗಿ ಆಚರಿಸಲು ಅವಕಾಶ ಕೊಡುವ ಎಸ್‌ಪಿ ಅವರು 2500 ಪೊಲೀಸರನ್ನು ನಿಯೋಜಿಸಿ ಹಿಂದೂಗಳ ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನೀಡಬಹುದಾಗಿತ್ತಾದರೂ ಅವಕಾಶಕೊಡದೇ ವಿನಾಕಾರಣ ಬಂಧಿಸಿ ಕಿರುಕುಳ ನೀಡಿದ್ದಲ್ಲದೆ, ತಮ್ಮ ಹತಾಶೆ ಪ್ರದರ್ಶಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸಿದರು. 27 ರಂದು ನಡೆಯುವ ಹನುಮ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರೆಂದು ಇದೇ ವೇಳೆ ಕೋರಿದರು.

ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿ ಬಿ.ಜೆ.ಪುಟ್ಟಸ್ವಾಮಿ, ಮಾಜಿ ಸಂಸದೆ ತೇಜಸ್ವಿನಿ, ಜಿಲ್ಲಾಧ್ಯಕ್ಷ ಕೋಟೆಶಿವಣ್ಣ, ತಾಲೂಕು ಅಧ್ಯಕ್ಷ ಯೋಗಾನಂದಕುಮಾರ್‌, ಮುಖಂಡರಾದ ಅಪ್ಪಣ್ಣ, ರಘು, ರಮೇಶಕುಮಾರ್‌ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಮಂತ್ರಿ ಸುರೇಶ ಕುಮಾರ್‌, ರೀನಾಪ್ರಕಾಶ್‌, ನಾಗರಾಜಮಲ್ಲಾಡಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಹದೇವಸ್ವಾಮಿ, ವಸಂತಕುಮಾರಗೌಡ, ಹನಗೋಡುಮಂಜುನಾಥ್‌, ರಾಜೇಂದ್ರ, ಚಂದ್ರಶೇಖರ್‌, ಸುಬ್ಬರಾವ್‌ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಪೂರ್ಣಕುಂಭ ಸ್ವಾಗತ: ಹುಣಸೂರಿಗಾಗಮಿಸಿದ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ರ್ಯಾಲಿಯನ್ನು ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಸ್ವಾಗತ ಹಾಗೂ ನೂರಾರು ಕಾರ್ಯಕರ್ತರು ಘೋಷಣೆ ಕೂಗುತ್ತಾ ವೇದಿಕೆಗೆ ಕರೆತಂದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.