ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಸಂಘಗಳ ಕೊಡುಗೆ ಅಪಾರ 


Team Udayavani, Feb 4, 2018, 12:21 PM IST

4-Feb-11.jpg

ಸುಳ್ಯ : ಜಿಲ್ಲೆಯ ಆರ್ಥಿಕ ಬೆಳವಣಿಗೆಯಲ್ಲಿ ರಾಷ್ಟ್ರೀಕೃತ ಬ್ಯಾಂಕಿಗಿಂತಲೂ, ಸಹಕಾರ ಸಂಘಗಳ ಕೊಡುಗೆ ಅಪಾರ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಮಂಡೆಕೋಲು ಹಿ.ಪ್ರಾ.
ಶಾಲಾ ಆವರಣದಲ್ಲಿ ಶನಿವಾರ ಕೃಷಿ ಮೇಳ ಮತ್ತು ವಸ್ತುಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ ಅವರು, ಸರಕಾರದ ಆಶಯಕ್ಕೆ ತಕ್ಕಂತೆ ಸಹಕಾರಿ ಸಂಘಗಳು ಕೃಷಿಕರ ಅಭ್ಯುದಯಕ್ಕೆ ಕೊಡುಗೆ ನೀಡಿದ್ದು, ಜಿಲ್ಲೆಯ ರೈತರ ಹಿತವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕೃಷಿ ಕ್ಷೇತ್ರದ ಪ್ರಗತಿಯಿಂದ ದೇಶದ ಪ್ರಗತಿಗೂ ಅನುಕೂಲವಾಗುತ್ತದೆ ಎಂದರು.

ಕೃಷಿಯಿಂದ ನಷ್ಟ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ನಾನು ಕೃಷಿ ಹಿನ್ನೆಲೆಯಿಂದಲೇ ಬಂದವನು. ಯಾರು ಕೃಷಿ ತೋಟಕ್ಕೆ ಇಳಿಯುವುದಿಲ್ಲವೋ, ಅವರಿಗೆ ಅದರಿಂದ ಲಾಭ ಸಿಗದು. ಸ್ವಂತ ದುಡಿಮೆಯಿದ್ದರೆ ಕೃಷಿಯಲ್ಲೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ. ಕೃಷಿಕ ತ್ಯಾಗಜೀವಿಯಾದರೆ ಸಾಧಕನಾಗಬಹುದು. ನೆಟ್ಟ ಗಿಡ ಫಸಲು ಬರಬೇಕಾದರೆ ಆತ ಶ್ರಮಿಸಬೇಕು. ಭಾರತ ಕೃಷಿ ಸಂಸ್ಕೃತಿ ನಾಡು. ಇಲ್ಲಿನ ಜನರಿಗೆ ಕೃಷಿ ಸಂಸ್ಕೃತಿಯ ಜತೆಗೆ ಭಾವನಾತ್ಮಕ ಸಂಬಂಧವಿದೆ ಎಂದರು.

ಕೃಷಿಕರ ಪರ ಇರುವ ಸಹಕಾರ ಸಂಘಗಳು ಬೆಂಬಲ ಬೆಲೆ ನೀಡುವ ಮುಖಾಂತರ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಯುವ ಪೀಳಿಗೆ ನಗರ ಕೇಂದ್ರಿಕೃತ ಉದ್ಯೋಗದ ಆಸೆಯೊಂದಿಗೆ ಕೃಷಿ ಕಾಯಕದತ್ತಲೂ ಮನಸ್ಸು ಮಾಡಬೇಕು. ಇಲ್ಲದಿದ್ದರೆ ಗ್ರಾಮಗಳು ವೃದ್ಧಾಶ್ರಮಗಳಾಗುವ ಅಪಾಯವಿದೆ ಎಂದು ನುಡಿದರು.

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಉದ್ಘಾಟಿಸಿ, ಗ್ರಾಮಾಭಿವೃದ್ಧಿಯಲ್ಲಿ ಕೃಷಿ ಸಮುದಾಯದ ಕೊಡುಗೆ ಅಪಾರ. ಸಹಕಾರ ಸಂಘಗಳು ಕೃಷಿ ಕ್ಷೇತ್ರವನ್ನು ಸುಧಾರಿಸುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿದ್ದು, ಅದು ಇನ್ನಷ್ಟು ಪಸರಿಸಲಿ ಎಂದರು.

ಸಭಾಧ್ಯಕ್ಷತೆ ವಹಿಸಿದ ಎಸ್‌. ಅಂಗಾರ ಮಾತನಾಡಿ, ಭವಿಷ್ಯದ ಹಿತವನ್ನು ದೃಷ್ಟಿಯಲ್ಲಿರಿಸಿಕೊಂಡ ನೀತಿಯಿಂದ ದೇಶಕ್ಕೆ ಅನುಕೂಲ. ಅಂತಹ ದೃಷ್ಟಿಕೋನದ ಪರಿಣಾಮ ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳು ಬೆಳೆದು ನಿಂತು, ಶತ ಸಂಭ್ರಮದಲ್ಲಿವೆ. ಅದು ತಳಮಟ್ಟದ ಜನರ ಜೀವನ ಸುಧಾರಣೆಗೆ ಕಾರಣವಾಗುತ್ತಿದೆ ಎಂದರು.

ಟಾಪ್ ನ್ಯೂಸ್

kl rahul

KL Rahul; ಮಾಲಕರ ತರಾಟೆಯ ಬಳಿಕ ಲಕ್ನೋ ತಂಡದ ನಾಯಕತ್ವ ತೊರೆದ ರಾಹುಲ್?

Explosion At Fireworks Factory Near Sivakasi

Sivakasi ಪಟಾಕಿ ಘಟಕದಲ್ಲಿ ಸ್ಪೋಟ; ಐವರು ಮಹಿಳೆಯರು ಸೇರಿ 8 ಮಂದಿ ಸಾವು

1-wewqewq

LS poll ಅಭಿವೃದ್ಧಿಗಾಗಿ ಮತ ಮತ್ತು ‘ಜಿಹಾದ್‌ಗೆ ಮತ ಹಾಕಿ’ ನಡುವಿನ ಸ್ಪರ್ಧೆ: ಶಾ

3

ಇಲ್ಲಿದೆ ʼKhatron Ke Khiladi 14ʼ ನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಪಟ್ಟಿ..

BJP Symbol

Pitroda’s remarks; ದೆಹಲಿ ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿ ಪ್ರತಿಭಟನೆ

1—–sd-sa-dsa

Pain; ‘ಅಸಹನೀಯ ಬೆನ್ನು ನೋವು’:ಸೊಂಟದ ಬೆಲ್ಟ್ ತೋರಿಸಿದ ತೇಜಸ್ವಿ ಯಾದವ್

Mumbai Indians ತಂಡದಲ್ಲಿ ಒಳ ಜಗಳ..; ರೋಹಿತ್, ಬುಮ್ರಾ, ಸೂರ್ಯ ಪ್ರತ್ಯೇಕ ಸಭೆ

Mumbai Indians ತಂಡದಲ್ಲಿ ಒಳ ಜಗಳ..; ರೋಹಿತ್, ಬುಮ್ರಾ, ಸೂರ್ಯ ಪ್ರತ್ಯೇಕ ಸಭೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಬೆಳ್ತಂಗಡಿಯಲ್ಲಿ ಬಸ್‌-ಟ್ಯಾಂಕರ್‌ ಅಪಘಾತ: ತಪ್ಪಿದ ಭಾರೀ ಅನಾಹುತ, 20 ಮಂದಿಗೆ ಗಾಯ

6-sslc-result

SSLC Result: ಬೆಳ್ತಂಗಡಿಯ ಚಿನ್ಮಯ್ ಜಿ.ಕೆ. (624) ರಾಜ್ಯಕ್ಕೆ ದ್ವಿತೀಯ

3-1

K. Vasantha Bangera: ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

Puttur ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದವರಿಗೆ ಧರ್ಮದೇಟು..!

ರಾಜ್ಯ ರಾಜಕಾರಣದಲ್ಲಿ ನಿಸ್ವಾರ್ಥ ಜನ ಸೇವಕ ಕೆ. ವಸಂತ ಬಂಗೇರ

ರಾಜ್ಯ ರಾಜಕಾರಣದಲ್ಲಿ ನಿಸ್ವಾರ್ಥ ಜನ ಸೇವಕ ಕೆ. ವಸಂತ ಬಂಗೇರ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Cricket Betting: ಆ್ಯಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌; ಪ್ರಕರಣ ದಾಖಲು

Cricket Betting: ಆ್ಯಪ್‌ನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌; ಪ್ರಕರಣ ದಾಖಲು

kl rahul

KL Rahul; ಮಾಲಕರ ತರಾಟೆಯ ಬಳಿಕ ಲಕ್ನೋ ತಂಡದ ನಾಯಕತ್ವ ತೊರೆದ ರಾಹುಲ್?

1–wewewe

Bengaluru; ಉದ್ಯೋಗ ಅರಸಿ ಬಂದಿದ್ದ ಕಲಬುರಗಿಯ ಯುವಕ ಆತ್ಮಹತ್ಯೆ

4

ಬೆಳ್ತಂಗಡಿಯಲ್ಲಿ ಬಸ್‌-ಟ್ಯಾಂಕರ್‌ ಅಪಘಾತ: ತಪ್ಪಿದ ಭಾರೀ ಅನಾಹುತ, 20 ಮಂದಿಗೆ ಗಾಯ

Explosion At Fireworks Factory Near Sivakasi

Sivakasi ಪಟಾಕಿ ಘಟಕದಲ್ಲಿ ಸ್ಪೋಟ; ಐವರು ಮಹಿಳೆಯರು ಸೇರಿ 8 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.