ರೈಲಿನಡಿ ಬೀಳುತ್ತಿದ್ದ ಬಾಲಕನ ರಕ್ಷಿಸಿ ಸಾಹಸ ಮೆರೆದ ಪೊಲೀಸ್
Team Udayavani, Feb 5, 2018, 12:31 PM IST
ಮುಂಬಯಿ: ಇಲ್ಲಿನ ನಾಯ್ಗಾಂವ್ ರೈಲು ನಿಲ್ದಾಣದಲ್ಲಿ ಆರ್ಪಿಎಫ್ ಪೊಲೀಸ್ ಸಿಬಂದಿಯೋರ್ವರು ತನ್ನ ಪ್ರಾಣವನ್ನು ಪಣಕ್ಕಿಟ್ಟು ರೈಲಿನಡಿ ಬೀಳುತ್ತಿದ್ದ ಬಾಲಕನ್ನು ರಕ್ಷಿಸಿ ಸಾಹಸ ಮೆರೆದ ರೋಮಾಂಚನಕಾರಿ ಘಟನೆ ಫೆಬ್ರವರಿ 2 ರಂದು ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗಿದ್ದು ವಿಡಿಯೋ ವೀಕ್ಷಿಸಿ..
ತಾಯಿಯೊಂದಿಗೆ ಬಂದಿದ್ದ 7 ವರ್ಷದ ಬಾಲಕ ಫ್ಲ್ಯಾಟ್ ಫಾರ್ಮ್ನಿಂದ ರೈಲು ಏರುವಾಗ ರೈಲು ಚಲಿಸಿದ್ದು,ಈ ವೇಳೆ ಕೆಳಗೆ ಬಿದ್ದ ಬಾಲಕ ರೈಲು ಮತ್ತು ಫ್ಲ್ಯಾಟ್ ಫಾರ್ಮ್ ನಡುವೆ ಸಿಕ್ಕಿ ಹಾಕಿಕೊಂಡು ಪ್ರಾಣಾಪಾಯಕ್ಕೆ ಸಿಲುಕಿದ್ದಾನೆ . ಈ ವೇಳೆ ಆರ್ಪಿಎಫ್ ಸುನೀಲ್ ನಾಪಾ ರಕ್ಷಣೆ ನಡೆಸಿದ್ದಾರೆ. ಕೂಡಲೆ ಸ್ಥಳದಲ್ಲಿದ್ದವರು ನೆರವಿಗೆ ದೌಡಾಯಿಸಿದ್ದಾರೆ.