ಸಚಿವರಿಂದ ಟಾಸ್ ಹಾಕಿ ಉಪನ್ಯಾಸಕರ ನೇಮಕ!
Team Udayavani, Feb 14, 2018, 11:53 AM IST
ಶಿಕ್ಷಕರನ್ನು ಎಲ್ಲಾದರೂ ಟಾಸ್ ಹಾಕಿ ಆಯ್ಕೆ ಮಾಡಿದ್ದನ್ನು ಕೇಳಿದ್ದೀರಾ? ಪಂಜಾಬ್ನಲ್ಲಿ ಇಂಥದ್ದೊಂದು ಅಚ್ಚರಿ ನಡೆದಿದೆ. ಇಲ್ಲಿನ ಸಚಿವರೊಬ್ಬರು ನಾಣ್ಯ ಚಿಮ್ಮಿಸಿ ಉಪನ್ಯಾಸಕರ ನೇಮಕ ಮಾಡಿದ್ದಾರೆ. ಇದೀಗ ಭಾರೀ ವಿವಾದ ಸೃಷ್ಟಿಸಿದ್ದು, ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಪಂಜಾಬ್ ತಾಂತ್ರಿಕ ಶಿಕ್ಷಣ ಸಚಿವ ಚರಣಜಿತ್ ಸಿಂಗ್ ಚನ್ನಿ ಅವರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗಕ್ಕೆ ಇಬ್ಬರು ಉಪನ್ಯಾಸಕರನು ° ನಾಣ್ಯ ಚಿಮ್ಮಿಸಿ ಆರಿಸುವ ಮೂಲಕ ನೇಮಕ ಮಾಡಿದ್ದಾರೆ. ನೇಮಕಾತಿಗಾಗಿ ಇಂಥ ವಿಲಕ್ಷಣ ಕ್ರಮ ಅನುಸರಿಸಿದವರಲ್ಲಿ ಇವರೇ ಮೊದಲಿಗರು.
ಪಿಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 37 ಮಂದಿ ಉಪನ್ಯಾಸಕರನ್ನು ಸರ್ಕಾರಿ ತಾಂತ್ರಿಕ ಕಾಲೇಜುಗಳಿಗೆ ನೇಮಕ ಮಾಡಬೇಕಿತ್ತು. ಎಲ್ಲರಿಗೂ ಅವರು ಕೇಳಿದ ಕಾಲೇಜುಗಳಿಗೆ ನೇಮಕ ಮಾಡಲಾಯಿತು. ಆದರೆ ಇಬ್ಬರು ಮಾತ್ರ ಪಟಿಯಾಲಾ ಪಾಲಿಟೆಕ್ನಿಕ್ ಕಾಲೇಜಿಗೇ ನೇಮಕಾತಿ ಮಾಡುವಂತೆ ಒತ್ತಾಯಿಸಿದರು. ಈ ಸಮಸ್ಯೆ ಬಗೆಹರಿಸಲು ಸಚಿವ ಚನ್ನಿ, ಟಾಸ್ ಹಾಕಿ ನೇಮಕ ಮಾಡಿ ಇಕ್ಕ ಟ್ಟಿಗೆ ಸಿಲುಕಿದ್ದಾರೆ.