ಮುಂಬೈ ಟ್ರೈನ್‌ನಲ್ಲಿ ಭಾರತ ಕ್ರಿಕೆಟಿಗ ಶಾರ್ದೂಲ್‌ ಠಾಕೂರ್‌! 

Team Udayavani, Mar 4, 2018, 6:45 AM IST

Shardul-Thakur,-Mumbai-Trai.jpg

ಮುಂಬೈ: ಭಾರತ ಕ್ರಿಕೆಟ್‌ ತಂಡವೆಂದರೆ ದೇವರುಗಳೇ ತುಂಬಿರುವ ಜಾಗ. ಒಮ್ಮೆ ತಂಡದಲ್ಲಿ ಪಡೆದರೂ ಸಾಕು ಅನ್ನುವಷ್ಟು ಪ್ರತಿಭಾವಂತರಿಂದ ತುಂಬಿ ತುಳುಕುತ್ತಿದೆ ತಂಡ. ಅಂತಹದ್ದರಲ್ಲಿ ತಂಡಕ್ಕೆ ಆಯ್ಕೆಯಾಗಿ ಭರ್ಜರಿ ಯಶಸ್ಸನ್ನೂ ಕಂಡರೆ ಆತನ ವರ್ತನೆ ಹೇಗಿರಬಹುದು? ಆದರೆ ಮುಂಬೈ ವೇಗಿ ಶಾರ್ದೂಲ್‌ ಠಾಕೂರ್‌ ಹಾಗಿಲ್ಲವೇ ಇಲ್ಲ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಮುಗಿದ ಟಿ20 ಸರಣಿಯಲ್ಲಿ ವೇಗದ ಬೌಲಿಂಗ್‌ ಮೂಲಕ ಮಿಂಚಿ ಭಾರೀ ಭರವಸೆ ಮೂಡಿಸಿದ ಅವರು ಮುಂಬೈ ನಿಲ್ದಾಣಕ್ಕೆ ಬಂದಿಳಿದ ನಂತರ ಮನೆಗೆ ತೆರಳಿದ್ದು ಅಲ್ಲಿನ ಸ್ಥಳೀಯ ಟ್ರೈನ್‌ ಮೂಲಕ!

ಸದಾ ಜನರಿಂದ ತುಂಬಿ ತುಳುಕುವ ಮುಂಬೈ ಟ್ರೈನ್‌ಗಳು ವಿಶ್ವಪ್ರಸಿದ್ಧ! ಅದೇ ಟ್ರೈನ್‌ನಲ್ಲಿ ಶಾರ್ದೂಲ್‌ ಠಾಕೂರ್‌ ವರ್ಷಗಟ್ಟಲೆ ಅಭ್ಯಾಸಕ್ಕಾಗಿ ಅಲೆದಾಡಿದ್ದಾರೆ. ಪಾಲರ್‌ನಲ್ಲಿರುವ ತಮ್ಮ ಮನೆಯಿಂದ ಮುಂಬೈನಲ್ಲಿರುವ ವಾಂಖೇಡೆ ಮೈದಾನಕ್ಕೆ ಪ್ರಯಾಣಿಸಿದ್ದಾರೆ. ಅವರು ವಿಶ್ವಪ್ರಸಿದ್ಧರಾದ ನಂತರವೂ ಈ ಅಭ್ಯಾಸ ಬಿಟ್ಟಿಲ್ಲ. ನಾನ್ಯಾವತ್ತೂ ಯಶಸ್ಸಿನ ಪಿತ್ಥ ತಲೆಗೇರಿಸಿಕೊಳ್ಳುವುದಿಲ್ಲ, ನೆಲದಲ್ಲೇ ಇರುತ್ತೀನಿ ಎಂದು ಹೇಳಿದ್ದಾರೆ.

ಹಾಗಾದರೆ ಶಾರ್ದೂಲ್‌ ಪ್ರಯಾಣ ಹೇಗಿತ್ತು ಎಂಬುದು ನಿಮ್ಮ ಕುತೂಹಲವಾಗಿದ್ದರೆ… ಅದನ್ನು ಅವರ ಮಾತಿನಲ್ಲೇ ಕೇಳಿ. ನಾನು ಅಂಧೇರಿಯಲ್ಲಿ ಟ್ರೈನ್‌ ಹತ್ತಿದೆ. ಕೆಲವರು ನನ್ನನ್ನೇ ನೋಡುತ್ತಿದ್ದರು. ನಾನು ಶಾರ್ದೂಲ್‌ ಹೌದೇ ಎಂದು ಪರೀಕ್ಷಿಸುತ್ತಿದ್ದರು. ಕೆಲ ಹುಡುಗರು ಗೂಗಲ್‌ನಲ್ಲಿ ನನ್ನ ಚಿತ್ರವನ್ನು ವೀಕ್ಷಿಸಿ ಖಚಿತಪಡಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದರು. ಖಚಿತವಾದ ನಂತರ ಅಲ್ಲಿದ್ದವರೆಲ್ಲ ಸೆಲ್ಫಿಗಾಗಿ ಮುಗಿಬಿದ್ದರು. ದಯವಿಟ್ಟು ಪಾಲರ್‌ ಬರುವವರೆಗೆ ಕಾಯಿರಿ ಎಂದು ನಾನು ವಿನಂತಿಸಿಕೊಂಡೆ. ಅನಂತರ ಎಲ್ಲರೊಂದಿಗೂ ಸೆಲ್ಫಿಗೆ ತೆಗೆಸಿಕೊಂಡೆ ಎಂದು ಅವರು ಹೇಳಿಕೊಂಡಿದ್ದಾರೆ.

ಕೆಲವು ಹಳೆಯ ಪ್ರಯಾಣಿಕರು ನಾನು ವರ್ಷಗಟ್ಟಲೆ ಇದೇ ಟ್ರೈನ್‌ನಲ್ಲಿ ಓಡಾಡುತ್ತಿದ್ದುದನ್ನು ನೆನಪಿಸಿಕೊಂಡರು. ಇನ್ನು ಕೆಲವರು ನಾನು ಅವರೊಂದಿಗೆ ಈಗಲೂ ಪ್ರಯಾಣಿಸುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರು. ಅದೇನೆ ಇರಲಿ ನನ್ನ ಕಾಲುಗಳು ಈಗಲೂ ನೆಲದ ಮೇಲಿವೆ. ನಾನು ಯಾವುದನ್ನೂ ಸುಲಭವಾಗಿ ಪಡೆದುಕೊಳ್ಳಲಿಲ್ಲ. ಅದಕ್ಕಾಗಿ ಬಹಳ ಶ್ರಮ ಹಾಕಿದ್ದೇನೆ ಎಂದು ಶಾರ್ದೂಲ್‌ ಹೇಳಿಕೊಂಡಿದ್ದಾರೆ.

ಹಿಂದೆ ತನ್ನನ್ನು ಅಣಕಿಸುತ್ತಿರುವವರನ್ನೂ ಶಾದೂìಲ್‌ ನೆನಪಿಸಿಕೊಂಡರು. ನೀನು ಯಾಕೆ ಅಷ್ಟು ದೂರದಿಂದ ಬಂದು ಭಾರತ ತಂಡದ ಪರ ಆಡುತ್ತೇನೆಂದು ಒದ್ದಾಡುತ್ತೀಯಾ. ಸಮಯ ಯಾಕೆ ಹಾಳು ಮಾಡಿಕೊಳ್ತೀಯಾ ಎಂದು ಪ್ರಶ್ನಿಸಿದ್ದರು. ಆಗ ನನಗೆ ಏನು ಮಾಡಬೇಕೆಂದು ಗೊತ್ತಿತ್ತು. ಕ್ರಿಕೆಟ್‌ಗಾಗಿಯೇ ನನ್ನ ಜೀವನವನ್ನು ಒಪ್ಪಿಸಿಕೊಂಡಿದ್ದೇನೆಂದು ಠಾಕೂರ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

8

UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗೆ ಮತದಾನ ಮಾಡಿದ ಪತ್ನಿ…

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqqwewq

Must win ಡೆಲ್ಲಿ ಪ್ಲೇ ಆಫ್ ಆಸೆ ಜೀವಂತ: ರಾಜಸ್ಥಾನ್‌ ರಾಯಲ್ಸ್‌ ಸವಾಲು

CSK (2)

CSK; ಬಸ್‌ ಕಂಡಕ್ಟರ್‌ಗಳಿಗೆ ಚೆನ್ನೈ ಕಿಂಗ್ಸ್‌ನಿಂದ 8 ಸಾವಿರ ಅಗತ್ಯ ಗಿಫ್ಟ್ !

1-sss

Central government ಒಪ್ಪಿದರೆ ಪಾಕ್‌ಗೆ ಭಾರತ ಕ್ರಿಕೆಟ್‌ ತಂಡ: ರಾಜೀವ್‌ ಶುಕ್ಲ

1-wewqewqe

T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್‌ ಗೆಲುವು: 4-0 ಮುನ್ನಡೆ

PCB

Pakistan ಟಿ20 ವಿಶ್ವಕಪ್‌ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್‌ ಬಹುಮಾನ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

8

UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗೆ ಮತದಾನ ಮಾಡಿದ ಪತ್ನಿ…

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.