LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

Team Udayavani, May 7, 2024, 9:58 AM IST

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

ಶಿಕಾರಿಪುರ:  ರಾಜ್ಯದಲ್ಲಿ 25ರಿಂದ26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಆಡಳಿತಸೌಧದಲ್ಲಿರುವ 137ನೇ ಮತಗಟ್ಟೆ ಕೇಂದ್ರಕ್ಕೆ ಮಂಗಳವಾರ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಇಂದು ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಎರಡೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ನರೇಂದ್ರ ಮೋದಿ ಪ್ರಧಾನಿ ಮಾಡಲು ರಾಜ್ಯದಿಂದ 25ರಿಂದ26 ಸ್ಥಾನ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ‌ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ‌ಜಾತಿ ವಿಷಯ ಬರಲ್ಲ. ಮೋದಿ ಪ್ರಧಾನಮಂತ್ರಿ ಆಗಬೇಕು ಎಂಬುದು ಜನರ ಉದ್ದೇಶವಾಗಿದೆ. ದೇಶದಲ್ಲಿಯೇ ಪ್ರಧಾನಿ ನರೇಂದ್ರಮೋದಿ ಅವರ ಜೊತೆ ಕಾರ್ಯಕರ್ತರು ಇದ್ದಾರೆ ಹಾಗೂ ಅವರ ಕೈ ಬಲಪಡಿಸುತ್ತಾರೆ. ಕಳೆದ ಲೋಕಸಭೆ ಚುನಾವಣೆ 25 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು,ಈ ಬಾರಿ ಗೆದ್ದಿರುವ ಎಲ್ಲಾ ಕ್ಷೇತ್ರಗಳನ್ನು ಉಳಿಸಿ ಕೊಳ್ಳುತ್ತೇವೆ. ಹೊಸ ಇತಿಹಾಸ ನಿರ್ಮಿಸುತ್ತೇವೆ. ಜನರ ಉತ್ಸಾಹ ಬಿಜೆಪಿ ‌ಪರ ಇದೆ

28 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ,ಫಲಿತಾಂಶ ಬಿಜೆಪಿ ಪರವಾಗಿ ಬರುತ್ತದೆ. ಕಾಂಗ್ರೆಸ್ ಗೆ ಅಚ್ಚರಿ ಫಲಿತಾಂಶ ಬರಲಿದೆ ಎಂದರು.

ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆ ಆಧಾರದ ಮೇಲೆ 20 ಸ್ಥಾನ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಜೂನ್ 4 ರಂದು ಕಾಂಗ್ರೆಸ್ ಗೆ ಆಘಾತ ಆಗಲಿದೆ.

ಚುನಾವಣಾ ‌ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ಕಾಣದ ಕೈಗಳು ಪೆನ್ ಡ್ರೈವ್ ಪ್ರಕರಣ ಹಿಂದೆ ಇದೆ. ಸಿಬಿಐ ತನಿಖೆಗೆ ಅವಕಾಶ ನೀಡಬೇಕು. ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಲೆ ಈ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ. ತುಂಬಾ ಒಳ್ಳೆಯ ಅಂತರದಲ್ಲಿ ಈ ಬಾರಿ ಮತದಾರರು ನನಗೆ ಆಶೀರ್ವಾದ ಮಾಡಲಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಚುನಾವಣೆ ಎರಡು ಕುಟುಂಬಗಳ ಮಧ್ಯೆ ನಡೆಯುವ ಚುನಾವಣೆ ಅಲ್ಲ. ಎರಡು ಸಿದ್ದಾಂತಗಳ ಮಧ್ಯೆ ನಡೆಯುವ ಚುನಾವಣೆಯಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಜನ ಬೇಸತ್ತಿದ್ದಾರೆ. ಯೋಜನೆ ಪಡೆಯಲು ಹಲವು ನಿಯಮಗಳನ್ನು ಹಾಕಿದ್ದಾರೆ. ಗ್ಯಾರಂಟಿ ಯೋಜನೆಗೆ ನಮ್ಮ ಜೇಬಿನಿಂದ ಹಣ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು.

ಟಾಪ್ ನ್ಯೂಸ್

Sakaleshpura: ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ಕಾಣಿಸಿಕೊಂಡ ನಾಗರಹಾವು.. ಗಾಬರಿಗೊಂಡ ಮನೆಮಂದಿ

Sakaleshpura: ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ಕಾಣಿಸಿಕೊಂಡ ನಾಗರಹಾವು.. ಗಾಬರಿಗೊಂಡ ಮನೆಮಂದಿ

ಪಕ್ಷ ವಿರೋಧಿ ಚಟುವಟಿಕೆ: 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

Udupi: ಪಕ್ಷ ವಿರೋಧಿ ಚಟುವಟಿಕೆ… 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

3-uppunda

Uppunda: ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು

2-shivamogga

Shivamogga: ಸಮಾಜ ಕಲ್ಯಾಣ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಆರಗ

17

Road Mishap: ಅಮೆರಿಕದಲ್ಲಿ ರಸ್ತೆ ಅಪಘಾತ; ತೆಲಂಗಾಣ ಮೂಲದ ಯುವತಿ ಸ್ಥಳದಲ್ಲೇ ಸಾವು

Panaji: ಯಾವುದೇ ಆಂಗ್ಲ ಪ್ರಾಥಮಿಕ ಶಾಲೆಗೆ ಅವಕಾಶ ನೀಡಬಾರದು… ಕೊಂಕಣಿ ಭಾಷಾ ಮಂಡಳಿ ಆಗ್ರಹ

Panaji: ಯಾವುದೇ ಆಂಗ್ಲ ಪ್ರಾಥಮಿಕ ಶಾಲೆಗೆ ಅವಕಾಶ ನೀಡಬಾರದು… ಕೊಂಕಣಿ ಭಾಷಾ ಮಂಡಳಿ ಆಗ್ರಹ

1-kalburgi

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ;ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sakaleshpura: ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ಕಾಣಿಸಿಕೊಂಡ ನಾಗರಹಾವು.. ಗಾಬರಿಗೊಂಡ ಮನೆಮಂದಿ

Sakaleshpura: ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ಕಾಣಿಸಿಕೊಂಡ ನಾಗರಹಾವು.. ಗಾಬರಿಗೊಂಡ ಮನೆಮಂದಿ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Hubballi: ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು… ನಿರಂಜನ ಹಿರೇಮಠ ಹೇಳಿಕೆ

Hubballi: ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು… ನಿರಂಜನ ಹಿರೇಮಠ ಹೇಳಿಕೆ

Shivamogga: ವಾಲ್ಮೀಕಿ ನಿಗಮದ ಮಂತ್ರಿಯನ್ನು ಕೂಡಲೇ ವಜಾಗೊಳಿಸಿ; ಕೆ.ಬಿ ಪ್ರಸನ್ನ ಆಗ್ರಹ

Shivamogga: ವಾಲ್ಮೀಕಿ ನಿಗಮದ ಮಂತ್ರಿಯನ್ನು ಕೂಡಲೇ ವಜಾಗೊಳಿಸಿ; ಕೆ.ಬಿ ಪ್ರಸನ್ನ ಆಗ್ರಹ

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Sakaleshpura: ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ಕಾಣಿಸಿಕೊಂಡ ನಾಗರಹಾವು.. ಗಾಬರಿಗೊಂಡ ಮನೆಮಂದಿ

Sakaleshpura: ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ಕಾಣಿಸಿಕೊಂಡ ನಾಗರಹಾವು.. ಗಾಬರಿಗೊಂಡ ಮನೆಮಂದಿ

5-temple

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ಮಹಾ ಚಂಡಿಕಾಯಾಗ ಮಹಾ ಮಂತ್ರಕ್ಷತೆ ಸಂಪನ್ನ

4-kmc

KMC ಸಂತಾನೋತ್ಪತ್ತಿ ಔಷಧ,ಶಸ್ತ್ರಚಿಕಿತ್ಸೆ ವಿಭಾಗ: ಐವಿಎಫ್, ಫರ್ಟಿಲಿಟಿ ಕೇಂದ್ರಗಳಲ್ಲಿ ಒಂದು

ಪಕ್ಷ ವಿರೋಧಿ ಚಟುವಟಿಕೆ: 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

Udupi: ಪಕ್ಷ ವಿರೋಧಿ ಚಟುವಟಿಕೆ… 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್

3-uppunda

Uppunda: ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.