ಐಸಿಸಿ ವಿಶ್ವ ಇಲೆವೆನ್ ಕ್ರಿಕೆಟ್ ತಂಡಕ್ಕೆ ಮಾರ್ಗನ್ ನಾಯಕ
Team Udayavani, Mar 24, 2018, 6:00 AM IST
ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಮೇ 31ರಂದು ಲಾರ್ಡ್ಸ್ನಲ್ಲಿ ನಡೆಯಲಿರುವ ಸಹಾಯಾರ್ಥ ಟಿ20 ಪಂದ್ಯದಲ್ಲಿ ಐಸಿಸಿ ವಿಶ್ವ ಇಲೆವೆನ್ ತಂಡವನ್ನು ಮುನ್ನಡೆಸುವ ಅವಕಾಶ ಇಂಗ್ಲೆಂಡ್ ಕ್ರಿಕೆಟಿಗ ಎವೋನ್ ಮಾರ್ಗನ್ ಅವರಿಗೆ ಲಭಿಸಿದೆ. ಇರ್ಮಾ ಮತ್ತು ಮರಿಯಾ ಚಂಡಮಾರುತಗಳಿಂದ ತೀವ್ರ ಹಾನಿಗೊಳಗಾದ ಕೆರಿಬಿಯನ್ ದ್ವೀಪದ 2 ಸ್ಟೇಡಿಯಂಗಳನ್ನು ಜೀರ್ಣೋದ್ಧಾರಗೊಳಿಸುವ ಸಲುವಾಗಿ ಈ ಪಂದ್ಯವನ್ನು ಆಡಲಾಗುತ್ತಿದೆ.
ಆಂಗ್ವಿಲ್ಲಾದ “ರೊನಾಲ್ಡ್ ವೆಬ್ಸ್ಟರ್ ಪಾರ್ಕ್’ ಮತ್ತು ಡೊಮಿನಿಕಾದ “ವಿಂಡ್ಸರ್ ಪಾರ್ಕ್ ಸ್ಟೇಡಿಯಂ’ ಈ ಚಂಡಮಾರುತಗಳ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದವು. ಈ ಪಂದ್ಯಕ್ಕೆ ಐಸಿಸಿ ಅಂತಾರಾಷ್ಟ್ರೀಯ ಮಾನ್ಯತೆ ನೀಡಿದ್ದು, ನೇರ ಪ್ರಸಾರ ಕಾಣಲಿದೆ. ವಿಶ್ವ ಇಲೆವೆನ್ ತಂಡವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ.