5 ಕೋಟಿ ಸಾಲ: ನಟ ರಾಜಪಾಲ್ ಯಾದವ್, ಪತ್ನಿಗೆ ಎ.23ರಂದು ಶಿಕ್ಷೆ
Team Udayavani, Apr 14, 2018, 12:35 PM IST
ಹೊಸದಿಲ್ಲಿ : 2010ರಲ್ಲಿ “ಅತಾ ಪತಾ ಲಾಪತಾ” ಎಂಬ ತನ್ನ ಚೊಚ್ಚಲ ನಿರ್ದೇಶನದ ಹಿಂದಿ ಚಲನಚಿತ್ರದ ನಿರ್ಮಾಣಕ್ಕಾಗಿ ದಿಲ್ಲಿ ಉದ್ಯಮಿಯೊಬ್ಬರಿಂದ ಪಡೆದಿದ್ದ 5 ಕೋಟಿ ರೂ. ಸಾಲದ ವಸೂಲಾತಿ ದಾವೆಯಲ್ಲಿ ಬಾಲಿವುಡ್ ನಟ ರಾಜಪಾಲ್ ಯಾದವ್ ಮತ್ತು ಆತನ ಪತ್ನಿ ದೋಷಿಗಳೆಂದು ನ್ಯಾಯಾಲಯ ಹೇಳಿದ್ದು ಶಿಕ್ಷೆಯ ಪ್ರಮಾಣ ಎ.23ರಂದು ಪ್ರಕಟವಾಗಲಿದೆ.
ಬಾಲಿವುಡ್ ನಟ ಯಾದವ್ ಮತ್ತು ಆತನ ಪತ್ನಿ ರಾಧಾ ಅವರು 2010ರಲ್ಲಿ ದಿಲ್ಲಿ ಉದ್ಯಮಿ, ಮುರಳಿ ಪ್ರಾಜೆಕ್ಟ್ ಮಾಲಕ ಎಂ ಜಿ ಅಗರ್ವಾಲ್ ಅವರಿಂದ ಸಾಲ ಪಡೆದಿದ್ದರು. ಈ ಸಾಲ ಮರುಪಾವತಿಯಾಗದ ಕಾರಣಕ್ಕೆ ದಿಲ್ಲಿ ಉದ್ಯಮಿ, ಯಾದವ್ ಮತ್ತು ಆತನಪತ್ನಿ ವಿರುದ್ಧ ದಿಲ್ಲಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು.
ಈ ಕೇಸಿಗೆ ಸಂಬಂಧಿಸಿ 2013ರಲ್ಲಿ ಯಾದವ್ಗೆ, ಕೇಸಿನ ನಿಜಾಂಶಗಳನ್ನು ಮುಚ್ಚಿಟ್ಟ ಕಾರಣಕ್ಕೆ, 10 ದಿನಗಳ ನ್ಯಾಯಾಂಗ ಬಂಧನವಾಗಿತ್ತು. ಆಗಲೇ ಕೋರ್ಟ್, ಯಾದವ್ ದಂಪತಿಯ ಆಸ್ತಿಪಾಸ್ತಿ ಮುಟ್ಟುಗೋಲಿಗೆ, ಬ್ಯಾಂಕ್ ಖಾತೆ ಸ್ತಂಭನಕ್ಕೆ ಮತ್ತು ಅವರ ಒಡೆತನದ ಕಂಪೆನಿಯೊಂದರ ನಿಲುಗಡೆಗೆ ಆದೇಶಿಸಿತ್ತು.
ಯಾದವ್ ಅವರು ಕಾಮಿಡಿ ನಟನಾಗಿ ಹೆಸರು ಮಾಡಿದ್ದು ಅವರ ನಟನೆಯ ಭೂಲ್ಭುಲಯ್ಯ, ಪಾರ್ಟ್ನರ್, ಹಂಗಾಮಾ ಚಿತ್ರಗಳು ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು