ಟಿ20ಯಲ್ಲಿ 300 ವಿಕೆಟ್ ಕಿತ್ತ ಶಕಿಬ್
Team Udayavani, Apr 26, 2018, 6:00 AM IST
ಹೊಸದಿಲ್ಲಿ: ಆಲ್ರೌಂಡರ್ ಶಕಿಬ್ ಅಲ್ ಹಸನ್ ಮುಂಬೈ ಇಂಡಿಯನ್ಸ್ ವಿರುದ್ಧ ರೋಹಿತ್ ಶರ್ಮ ಅವರ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ 300 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ಈ ಸಾಧನೆ ಮಾಡಿದ ಬಾಂಗ್ಲಾದ ಮೊದಲಿಗ ಮತ್ತು ಒಟ್ಟಾರೆ 5ನೇ ಕ್ರಿಕೆಟಿಗರಾಗಿದ್ದಾರೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೋ (414), ಶ್ರೀಲಂಕಾದ ಲಸಿತ್ ಮಾಲಿಂಗ (348), ವೆಸ್ಟ್ ಇಂಡೀಸ್ನ ಸುನೀಲ್ ನಾರಾಯಣ್ (324), ಪಾಕಿಸ್ಥಾನದ ಶಾಹಿದ್ ಅಫ್ರಿದಿ (300) ಈ ಸಾಧನೆ ಮಾಡಿದ್ದರು. ಶಕಿಬ್ ಇದಕ್ಕೂ ಮುನ್ನ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ ತಂಡದಲ್ಲಿ ಆಡುತ್ತಿದ್ದರು.