ಏಷ್ಯನ್ ಬ್ಯಾಡ್ಮಿಂಟನ್: ಸೈನಾ ಕ್ವಾರ್ಟರ್ಫೈನಲಿಗೆ
Team Udayavani, Apr 27, 2018, 7:30 AM IST
ವುಹಾನ್ (ಚೀನ): ಕಾಮನ್ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಅಮೋಘ ಆಟದ ಪ್ರದರ್ಶನ ನೀಡಿ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ವನಿತೆಯರ ಸಿಂಗಲ್ಸ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದಾರೆ. ಅಗ್ರ ಶ್ರೇಯಾಂಕದ ಕಿದಂಬಿ ಶ್ರೀಕಾಂತ್ ಮತ್ತು ಎಚ್ಎಸ್ ಪ್ರಣಯ್ ಕೂಡ ಪುರುಷರ ಸಿಂಗಲ್ಸ್ನಲ್ಲಿ ಅಂತಿಮ ಎಂಟರ ಸುತ್ತಿಗೇರಿದ್ದಾರೆ.
40 ನಿಮಿಷಗಳ ಹೋರಾಟದಲ್ಲಿ ಸೈನಾ ಚೀನದ ಗಾವೊ ಫ್ಯಾಂಗ್ಝಿ ಅವರನ್ನು 21-18, 21-18 ಗೇಮ್ಗಳಿಂದ ಕೆಡಹಿದರು. ಮುಂದಿನ ಸುತ್ತಿನಲ್ಲಿ ಸೈನಾ ಶ್ರೇಯಾಂಕರಹಿತ ಆಟಗಾರ್ತಿ ಕೊರಿಯದ ಲೀ ಜಂಗ್ ಮಿ ಅವರನ್ನು ಎದುರಿಸಲಿದ್ದಾರೆ. ಜಂಗ್ ಮಿ ಇನ್ನೊಂದು ಪಂದ್ಯದಲ್ಲಿ ಥಾçಲಂಡಿನ ರಚನಾಕ್ ಇಂತನಾನ್ ಅವರನ್ನು ಸೋಲಿಸಿದ್ದರು.
ಸಿಂಧುಗೆ ಗೆಲುವು
ಮೂರನೇ ಶ್ರೇಯಾಂಕದ ಸಿಂಧು ಚೀನದ ಇನ್ನೋರ್ವ ತಾರೆ ಚೆನ್ ಕ್ಸಿಯೊಕ್ಸಿನ್ ಅವರನ್ನು 21-12, 21-15 ಗೇಮ್ಗಳಿಂದ ಕೆಡಹಿದರು. ಪುರುಷರಲ್ಲಿ ಶ್ರೀಕಾಂತ್ ಸುಲಭವಾಗಿ ಕ್ವಾರ್ಟರ್ಫೈನಲ್ ತಲುಪಿದರು. ಅವರ ಎದುರಾಳಿ ಹಾಂಕಾಂಗ್ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರು ಮೊದಲ ಗೇಮ್ನಲ್ಲಿ 2-7ರಿಂದ ಹಿನ್ನಡೆಯಲ್ಲಿದ್ದಾಗ ಗಾಯಗೊಂಡು ಪಂದ್ಯ ತ್ಯಜಿಸಿದ್ದರು. ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಮೂರು ಬಾರಿಯ ಒಲಿಂಪಿಕ್ ಬೆಳ್ಳಿ ವಿಜೇತ ಲೀ ಚಾಂಗ್ ವೆಯಿ ಅವರನ್ನು ಎದುರಿಸಲಿದ್ದಾರೆ.
ಪ್ರಣಯ್ಗೆ ಕಠಿನ ಜಯ
ಮೊದಲ ಗೇಮ್ ಸೋತರೂ ವಿಚಲಿತರಾಗದೆ ಹೋರಾಡಿದ ಪ್ರಣಯ್ ಚೈನೀಸ್ ತೈಪೆಯ ವಾಂಗ್ ಜು ವೆಯಿ ಅವರನ್ನು 16-21, 21-14-21-12 ಗೇಮ್ಗಳಿಂದ ಸೋಲಿಸಲು ಯಶಸ್ವಿಯಾದರು. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಪ್ರಣಯ್ ಮುಂದಿನ ಸುತ್ತಿನಲ್ಲಿ ಕೊರಿಯದ ದ್ವಿತೀಯ ಶ್ರೇಯಾಂಕದ ಸನ್ ವಾನ್ ಹೊ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ