ಪುಲ್ವಾಮಾದಲ್ಲಿ ಎನ್ಕೌಂಟರ್ : ಇಬ್ಬರು ಹಿಜ್ಬುಲ್ ಉಗ್ರರ ಹತ್ಯೆ
Team Udayavani, Apr 30, 2018, 4:56 PM IST
ಶ್ರೀನಗರ : ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಸೋಮವಾರ ಭದ್ರತಾ ಪಡೆಗಳಿಂದ ನಡೆದ ಎನ್ಕೌಂಟರ್ನಲ್ಲಿ ಸಮೀರ್ ಅಹ್ಮದ್ ಭಟ್ ಅಲಿಯಾಸ್ “ಸಮೀರ್ ಟೈಗರ್’ ಸೇರಿದಂತೆ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರರು ಹತರಾದರು; ಇದೇ ವೇಳೆ ಒಬ್ಬ ನಾಗರಿಕ ಕೂಡ ಅಸುನೀಗಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪುಲ್ವಾಮಾದ ದ್ರಾಬ್ಗಾಂವ್ನಲ್ಲಿ ನಡೆದ ಈ ಎನ್ಕೌಂಟರ್ನಲ್ಲಿ ಇಬ್ಬರು ಯೋಧರಿಗೆ ಕೂಡ ಗುಂಡೇಟು ತಗುಲಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಉಗ್ರರು ಮನೆಯೊಂದರ ಒಳಗೆ ಅವಿತುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದುದನ್ನು ಅನುಸರಿಸಿ ಸೇನೆ, ವಿಶೇಷ ಕಾರ್ಯಪಡೆ ಮತ್ತು ರಾಜ್ಯ ಪೊಲೀಸ್ ಹಾಗೂ ಸಿಆರ್ಪಿಎಫ್ ದಳದ ಸಿಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿದರು.