ನಾಳೆ ನಮ್ಮ ಹಕ್ಕು ಚಲಾಯಿಸ್ತೀವಿ, ನೀವು?


Team Udayavani, May 11, 2018, 6:40 AM IST

VOTING.jpg

ಮತ ಹಕ್ಕು ಚಲಾವಣೆಗೆ ಇನ್ನೊಂದೇ ದಿನ ಬಾಕಿ. ಭಾರೀ ಸಂಖ್ಯೆಯಲ್ಲಿ ಮೊದಲ ಬಾರಿಗೆ ಮತ ಹಕ್ಕು ಪಡೆದವರು ಈ ಬಾರಿ ಇದ್ದಾರೆ. ರಾಜಕಾರಣವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಲು ಈ ಯುವ ಮನ ತುಡಿಯುತ್ತಿದೆ. ಹೊಸ ಸರ್ಕಾರಕ್ಕೆ ಷರಾ ಬರೆಯಲು ತುದಿಗಾಲಲ್ಲಿ ನಿಂತಿರುವ ರಾಜ್ಯದ ಯುವಮನದ ನಾಡಿ ಮಿಡಿತ ಇಲ್ಲಿದೆ.

ನಾಳೆ ಮತದಾನ ಮಾಡುತ್ತೇನೆ ಎಂಬುದು ನನಗೆ ಒಂದು ರೀತಿಯ ರೋಮಾಂಚನ ಉಂಟುಮಾಡು ತ್ತಿದೆ. ಮತದಾನ ನಮ್ಮ ಆದ್ಯತೆಯಾ ಗಬೇಕು. ಹಾಗಾದಾಗ ಯೋಗ್ಯ ಸರ್ಕಾರ ಚುನಾಯಿಸಲು ಸಾಧ್ಯವಾಗುತ್ತದೆ.
– ಸಾದಿಕ್‌, ಬೇಗೂರು, ಗುಂಡ್ಲುಪೇಟೆ.

ಮತದಾನದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಸಂವಿಧಾನಾ ತ್ಮಕವಾಗಿ ಬಂದಿರುವ ಮತದಾನದ ಹಕ್ಕನ್ನು  ಮಾರಾಟ ಮಾಡಿಕೊಳ್ಳ ಬಾರದು.  ಪ್ರತಿಯೊಬ್ಬರೂ ಮತ ಚಲಾಯಿಸಿ ಯೋಗ್ಯ ವ್ಯಕ್ತಿ ಆಯ್ಕೆ ಮಾಡಬೇಕು.
– ಸಯೀದಾ ಸ್ವಅಜೀಂ, ವಿದ್ಯಾರ್ಥಿನಿ, ಚಿತ್ರದುರ್ಗ

ನನ್ನ ಬೌದ್ಧಿಕ ವಿಕಾಸವಾದಾಗಿನಿಂದ ವ್ಯವಸ್ಥೆಯನ್ನು ದೂಷಿಸುತ್ತಾ, ನಕಾರಾತ್ಮಕವಾಗಿ ವಿಶ್ಲೇಷಿಸುತ್ತಾ ಬೆಳೆದು, ಈಗ ಅದೇ ವ್ಯವಸ್ಥೆಯನ್ನು ಆಯ್ಕೆ ಮಾಡುವ ಪರಿಸ್ಥಿತಿ ಎದುರಾದಾಗ ನನ್ನ ಮತದಿಂದ ವ್ಯವಸ್ಥೆ ರಚಿತವಾಗುತ್ತದೆ. 
– ಅಮರ್ತ್ಯ ಸಿದ್ಧಾರ್ಥ, ಮಂಡ್ಯ

ಐದು ವರ್ಷ ರಾಜಕಾರಣಿಗಳ ದ್ದಾದರೆ, ನಾಳೆಯ ಒಂದು ದಿನ ನಮ್ಮದು. ಮುಂದಿನ ಐದು ವರ್ಷ ನಿಂತಿರೋದು, ನಾಳೆಯ ಒಂದು ದಿನದ ನಮ್ಮ ಹಕ್ಕಿನ ಮೇಲೆ. ಕೆಟ್ಟ ರಾಜಕಾರಣಿಯ ಸೊಕ್ಕು ಮುರಿಯುತ್ತೇನೆ.
– ಜಾವೀದ್‌, ಕೊಪ್ಪಳ

ಪ್ರಜಾಪ್ರಭುತ್ವದ ಸೊಗಸು ಇರು ವುದೇ ಮತದಾನ ಮಾಡುವು ದರಲ್ಲಿ. ನಮಗೆ ಸ್ಪಂದಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾನ ಅವಶ್ಯಕ.  ನಾನು ಮೊದಲ ಬಾರಿ ಮತದಾನ ಮಾಡುತ್ತಿದ್ದೇನೆ. 
– ಸಂಜನಾ, ಚಾಮರಾಜನಗರ

ನಮ್ಮ ಒಂದು ಮತ ದೇಶ, ರಾಜ್ಯದ ಅಭಿವೃದ್ಧಿ ಮತ್ತು ನಮ್ಮ ಆಳ್ವಿಕೆಗೆ ಬೇಕಾಗುವ ನೀತಿ, ನಿರೂಪಣೆ ನಿರ್ಧರಿಸುತ್ತದೆ. ಮತದಾನದಿಂದ ಉತ್ತಮರನ್ನು ಆಯ್ಕೆ ಮಾಡಿದರೆ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಬಹುದು.
– ಮಹೇಶ್‌ ವಿ., ಬಳ್ಳಾರಿ

ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇನೆ. ನಾನು ಹಾಕುವ ಒಂದು ಮತ ರಾಜ್ಯದ, ದೇಶದ ಅಭಿವೃದ್ಧಿಗೆ ಪೂರವಾಗುತ್ತದೆ. 
– ಜಿ. ಸಿದ್ದರಾಮಣ್ಣ ಹೆಬ್ಟಾಕ, ತುಮಕೂರು

ಮೊದಲ ಬಾರಿಗೆ ಮತದಾನ ಮಾಡುವುದನ್ನು ಎಂದೂ ಮರೆ ಯಲಾರೆ. ಮತ ಚಲಾಯಿಸುವ ಹಕ್ಕು ಸಿಕ್ಕಿರುವುದು ನಾನು ಈ ದೇಶದ ಪ್ರಜೆ ಎಂದು ಹೇಳಿಕೊ ಳ್ಳುವ ಅವಕಾಶ. ಉತ್ತಮ ಅಭ್ಯರ್ಥಿ  ಆಯ್ಕೆ ಮಾಡುವೆ.
– ತನುಶ್ರೀ, ಹಾಸನ

ದೇಶದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯನ್ನು ಬಲಪಡಿಸಲು ದಕ್ಷ, ನಿಷ್ಠಾವಂತ ನಾಯಕ ಬೇಕು. ಮತದಾನ ಹಕ್ಕಿನ ಮೂಲಕ ನಾನು ಅಂತಹ ನಾಯಕನನ್ನು ಆಯ್ಕೆ ಮಾಡಲಿದ್ದೇನೆ.
– ಅಶ್ವಿ‌ನಿ ಎಚ್‌.ವಿ., ಶಿವಮೊಗ್ಗ

ಪ್ರಜಾಪ್ರಭುತ್ವದ ರಕ್ಷಣೆಗಾಗಿ ಉತ್ತಮ ಅಭ್ಯರ್ಥಿಗಳು ಚುನಾಯಿಸಿ ಬರುವುದು ಅತಿ ಮುಖ್ಯವಾಗಿದೆ. ಹಾಗಾಗಿ ನಾನು ಅರ್ಹ ವ್ಯಕ್ತಿಗಳಿಗೆ ನಾಳೆ ಮತ ಚಲಾಯಿಸಲಿದ್ದೇನೆ.
– ಗುರುಗೌತಮ್‌, ಮೈಸೂರು

ಶಿಕ್ಷಣ ವ್ಯವಸ್ಥೆಯಲ್ಲಿಂದು ಡೊನೇ ಷನ್‌ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ರಾಜಕೀಯ ನಾಯಕರು ಬೇಕು. ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಕ್ರಾಂತಿಕಾರಕ ನಿರ್ಣಯಗಳನ್ನು ತೆಗೆದುಕೊಳ್ಳುವವರು ಬೇಕು. 
– ಅರವಿಂದ್‌, ಬೆಂಗಳೂರು

ನನ್ನ ಕ್ಷೇತ್ರದ ಅಭಿವೃದ್ಧಿಯ ಕನಸುಗಳನ್ನು ನನಸಾಗಿಸುವ, ಜತೆಗೆ ರಾಜ್ಯ ಮತ್ತು ರಾಷ್ಟ್ರದ ಏಳಿಗೆಗೆ ಕ್ಷೇತ್ರದಿಂದಾಗುವ ಪ್ರಯತ್ನವೇನು ಎಂಬ ದೃಷ್ಟಿಕೋನದಿಂದ ಯೋಚಿ ಸುವ ವ್ಯಕ್ತಿಯನ್ನು ನಾನು ನಾಳೆ ಚುನಾಯಿಸಲಿದ್ದೇನೆ.
– ಅಕ್ಷಯ ನಾಯ್ಕರ, ಬೀಳಗಿ

ನನ್ನ ಮತ ಮಾರಾಟಕ್ಕಿಲ್ಲ. ಮಾರಾಟ ಮಾಡುವವನೂ ನಾನಲ್ಲ. ನಾನು ನಾಳೆ ಚಲಾಯಿಸಲಿರುವ ಮತ ನಮ್ಮ ದೇಶವನ್ನು ರಕ್ಷಿಸುವವನಿಗೆ ಹೋಗಲಿದೆ ಎಂಬ ನಂಬಿಕೆ ನನಗಿದೆ.
– ಶರಣಬಸವ ಪಾಟೀಲ್‌, ಲಿಂಗಸಗೂರು

ಇದೇ ಮೊದಲ ಬಾರಿಗೆ ಮತದಾನ ಮಾಡುವ ಕ್ಷಣಕ್ಕಾಗಿ ಕಾತುರದಿಂದ ಕಾದಿದ್ದೇನೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಉತ್ತಮರನ್ನು ಆಯ್ಕೆ ಮಾಡಿಕೊಂಡು ಮತ ಚಲಾವಣೆ ಮಾಡಲು ನಿರ್ಧರಿಸಿದ್ದೇನೆ.  
– ಜಿ.ಎಂ.ತೇಜಸ್‌, ಕೋಲಾರ.

ಅಭಿವೃದ್ಧಿ ಕೆಲಸ ಮಾಡುವಂತಹ ಒಳ್ಳೆಯವರಿಗೆ ಮತದಾನ ಮಾಡಬೇಕು ಎಂಬುದು ನನ್ನ ಇಚ್ಛೆ. ಯಾವ ಪಕ್ಷದವರು ಎಂಬುದು ಮುಖ್ಯ ಅಲ್ಲ. ಡೆವಲಪ್‌ಮೆಂಟ್‌ ವರ್ಕ್ಸ್ ಮಾಡ್ತಾರಾ ಅನ್ನೋದು ನೋಡಬೇಕು.  
– ಎಸ್‌.ಎಂ. ಮನುಶ್ರೀ, ಎವಿಕೆ ಕಾಲೇಜು, ದಾವಣಗೆರೆ.

ರೈತರೇ ದೇಶದ ಬೆನ್ನುಲುಬಾಗಿ ರುವಾಗ ಅವರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಉತ್ತಮ ಸಮಾಜಕ್ಕೆ ಶ್ರಮಿಸುವ ಸಮರ್ಥ ನಾಯಕನನ್ನು ಜಾತಿ ಧರ್ಮದಡಿ ನೋಡದೆ ನನ್ನ ಅಮೂಲ್ಯ ಮತ ನೀಡಿ ಗೆಲ್ಲಿಸುತ್ತೇನೆ.
– ಚೇತನ್‌, ಹನೂರು

ರೈತರ ಸಮಸ್ಯೆಗಳಿಗೆ ಸ್ಪಂದಿಸುವ, ಪಾರದರ್ಶಕ ಆಡಳಿತ ನೀಡುವ ನಾಯಕ ನನಗೆ ಬೇಕು. ಅಂತಹ ಸರಳ ವ್ಯಕ್ತಿತ್ವ ಹೊಂದಿರುವ ನಾಯಕನಿಗೆ ನನ್ನ ಮತ ಮೀಸಲಾಗಿರಲಿದೆ.
– ಆರೀಫ್ ವಾಲೀಕಾರ, ಬೆಳಗಾವಿ

ನಾನು ಪಕ್ಷಕ್ಕಿಂತ ಅಭ್ಯರ್ಥಿಯ ವ್ಯಕ್ತಿತ್ವ ನೋಡಿ ಮತ ಚಲಾಯಿಸುತ್ತೇನೆ. ಅಭ್ಯರ್ಥಿ ಹೇಗೆ ಆಡಳಿತ ನಡೆಸುತ್ತಾನೆ, ಜನರ ಕಷ್ಟ ಸುಖಗಳಿಗೆ ಹೇಗೆ ಸ್ಪಂದಿಸುತ್ತಾನೆ ಎಂಬುದನ್ನು ಅಳೆದು ಹಕ್ಕು ಚಲಾಯಿಸುತ್ತೇನೆ.
– ಗೀತಾ ಎಂ ನೀಲಗಾರ, ಬಾಗಲಕೋಟೆ

ಎಲೆಕ್ಷನ್‌ಗೂ ಮುನ್ನ ಸ್ಥಳೀಯ ಸಮಸ್ಯೆಗಳ ಬಗ್ಗೆ ಕ್ಯಾರೆ ಅನ್ನದ ವ್ಯಕ್ತಿ, ಚುನಾವಣೆ ಬಂತೆಂದರೆ ಜನರ ಮುಂದೆ ಪ್ರತ್ಯಕ್ಷರಾಗುತ್ತಾರೆ.  ಚುನಾವಣೆಯ ಉದ್ದೇಶವನ್ನು ಇಟ್ಟುಕೊಂಡು ಕಣಕ್ಕಿಳಿಯುವ ಅಭ್ಯರ್ಥಿ ಬೇಕಾಗಿಲ್ಲ. 
– ಪ್ರಿಯಾಂಕ, ಬೆಂಗಳೂರು

ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಜಾತಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡದೆ, ಜನರ ಏಳಿಗೆಗಾಗಿ ಕೆಲಸ ಮಾಡುವ ಪಕ್ಷ ಹಾಗೂ ಅಭ್ಯರ್ಥಿಯನ್ನು ಗುರುತಿಸಿ ಓಟು ಹಾಕುತ್ತೇನೆ.
– ನರೇಶ್‌ ಶೆಟ್ಟಿ, ದಕ್ಷಿಣ ಕನ್ನಡ

ಕೃಷಿ, ಶಿಕ್ಷಣ,ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ತಿಳಿವಳಿಕೆ ಹೊಂದಿರುವ ವ್ಯಕ್ತಿಯಾಗಿರಬೇಕು.  ಚುನಾವಣೆಗೂ ಮೊದಲು ಭರವಸೆ ನೀಡಿ, ಆ ನಂತರ ತನ್ನ ಕ್ಷೇತ್ರನ್ನು ಮರೆಯುವ  ಅಭ್ಯರ್ಥಿ ನನಗೆ ಬೇಕಾಗಿಲ್ಲ. 
– ವಿದ್ಯಾ ಭಾರತಿ, ಬೆಂಗಳೂರು

ಮತದಾನ ನನ್ನ ಹಕ್ಕು. ಪಕ್ಷ ಮುಖ್ಯವಲ್ಲ ನನಗೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಒಬ್ಬ ಸಮರ್ಥ ನಾಯಕನಿಗೆ ನನ್ನ ಈ ಅಮೂಲ್ಯವಾದ ಮತ ನೀಡುತ್ತೇನೆ. ಆ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ.
– ಭವ್ಯಾ ಶೆಟ್ಟಿಗಾರ್‌, ಉಜಿರೆ

ಮೊದಲಬಾರಿಗೆ ಮತ ಹಾಕುವುದು ಖುಷಿ ತಂದಿದೆ. ಪಕ್ಷಗಳು ಯುವಕ ಯುವತಿಯರಿಗೆ ಉದ್ಯೋಗ ದೊರಕುವ ಯೋಜನೆಯನ್ನು ರೂಪಿಸಬೇಕು. ನಾನಂತೂ ಅಭ್ಯರ್ಥಿಯ ಗುಣ ನೋಡಿ ಮತ ಹಾಕುತ್ತೇನೆ‌. 
– ಡಿ.ಸವಿತಾ, ಮಧುಗಿರಿ

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.