ತೂಗುಯ್ಯಾಲೆಯಲ್ಲಿ ಪ್ಲೇ-ಆಫ್ ಭವಿಷ್ಯ


Team Udayavani, May 16, 2018, 6:30 AM IST

millaer.jpg

ಮುಂಬಯಿ: ಹಾವು-ಏಣಿ ಆಟದಂತಾಗಿರುವ ಕೊನೆಯ ಹಂತದ ಐಪಿಎಲ್‌ ಲೀಗ್‌ ಹಣಾಹಣಿ ವಿಪರೀತ ಕುತೂಹಲವನ್ನು ಹುಟ್ಟುಹಾಕಿದೆ. ಇಂಥದೊಂದು ಪಂದ್ಯಕ್ಕೆ ಬುಧವಾರ “ವಾಂಖೇಡೆ ಸ್ಟೇಡಿಯಂ’ ಸಾಕ್ಷಿಯಾಗಲಿದೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಸತತ ಸೋಲಿನಿಂದ ದಿಕ್ಕೆಟ್ಟಿರುವ ಕಿಂಗ್ಸ್‌ ಇಲೆವೆನ್‌ ತಂಡಗಳು ಇಲ್ಲಿ ಮುಖಾಮುಖೀ ಆಗಲಿವೆ.

ಎರಡೂ ತಂಡಗಳು 12 ಪಂದ್ಯಗಳನ್ನು ಪೂರೈಸಿವೆ. ಪಂಜಾಬ್‌ 6 ಜಯದೊಂದಿಗೆ 12 ಅಂಕ ಹಾಗೂ ಮುಂಬೈ 5 ಜಯದೊಂದಿಗೆ 10 ಅಂಕ ಹೊಂದಿವೆ. ಹೀಗಾಗಿ ಮುಂಬೈಗೆ ಗೆಲುವು ಅನಿವಾರ್ಯ. ಸೋತರೆ ಅದು ಕೂಟದಿಂದ ಹೊರಬೀಳಲಿದೆ; ಪಂಜಾಬ್‌ ಹಾದಿ ಸುಗಮಗೊಳ್ಳುತ್ತದೆ. ಆದರೆ “ಐಪಿಎಲ್‌ ಲೆಕ್ಕಾಚಾರ’ಗಳು ಏನಿವೆಯೋ ಬಲ್ಲವರಿಲ್ಲ!

ಸೋಲಿನಿಂದ ಕಂಗಾಲು
ಎರಡೂ ತಂಡಗಳು ಹಿಂದಿನ ಪಂದ್ಯದ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಮುಂಬೈ ಇದೇ ಅಂಗಳದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 7 ವಿಕೆಟ್‌ಗಳಿಂದ ಎಡವಿತ್ತು. ಮುಂಬೈ 6ಕ್ಕೆ 168 ರನ್‌ ಗಳಿಸಿದರೆ, ರಾಜಸ್ಥಾನ್‌ 3 ವಿಕೆಟ್‌ ನಷ್ಟಕ್ಕೆ 171 ರನ್‌ ಬಾರಿಸಿ ಗೆದ್ದು ಬಂದಿತ್ತು.

ಇನ್ನೊಂದೆಡೆ ಪಂಜಾಬ್‌ನದ್ದು ಊಹೆಗೂ ನಿಲುಕದ ಸೋಲು. ಇಂದೋರ್‌ ಅಂಗಳದಲ್ಲಿ ಆರ್‌ಸಿಬಿ ವಿರುದ್ಧ ಶೋಚ ನೀಯ ಬ್ಯಾಟಿಂಗ್‌ ನಡೆಸಿ 88 ರನ್ನಿಗೆ ಕುಸಿದದ್ದು ಪಂಜಾಬ್‌ ಪಾಲಿಗೆ ದೊಡ್ಡ ಗಂಡಾಂತರ ತಂದೊಡ್ಡಿದೆ.
 
ಮುಂಬೈ ರನ್‌ರೇಟ್‌ ಉತ್ತಮ
ಮುಂಬೈ ಪಾಲಿನ ಪ್ಲಸ್‌ ಪಾಯಿಂಟ್‌ ಎಂದರೆ ರನ್‌ ರೇಟ್‌. ಇದು ಪಂಜಾಬ್‌ಗಿಂತ ಉತ್ತಮ ಮಟ್ಟದಲ್ಲಿದೆ. ಮುಂಬೈ ಲೀಗ್‌ ಹಂತದ ಪ್ರಥಮಾರ್ಧ ದಲ್ಲಿ ಎಡವಿ ದ್ವಿತೀಯಾರ್ಧದಲ್ಲಿ ಚೇತರಿಸಿಕೊಂಡರೆ, ಪಂಜಾಬ್‌ ಬಹಳ ಬೇಗ ಪ್ಲೇ-ಆಫ್ ಪ್ರವೇಶಿಸಲಿದೆ ಎಂಬ ಕನಸನ್ನು ಬಿತ್ತಿ ಈಗ ಹೊರಬೀಳಲು ಪೈಪೋಟಿ ನಡೆಸುವ ರೀತಿಯಲ್ಲಿ ಆಡುತ್ತಿದೆ!

ಯಾದವ್‌, ರಾಹುಲ್‌ ಮಿಂಚು
ಎರಡೂ ತಂಡಗಳ ಬ್ಯಾಟಿಂಗ್‌ ವಿಭಾಗ ಒನ್‌ ಮ್ಯಾನ್‌ ಶೋ ಎಂಬಂತಿದೆ. ಮುಂಬೈ ಪರ ಸೂರ್ಯಕುಮಾರ್‌ ಯಾದವ್‌, ಪಂಜಾಬ್‌ ಪರ ಕೆ.ಎಲ್‌. ರಾಹುಲ್‌ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಆರಂಭದಲ್ಲಿ ಸಿಡಿದ ಕ್ರಿಸ್‌ ಗೇಲ್‌ ಈಗ ಮಂಕಾಗಿದ್ದಾರೆ. ಮುಂಬೈ ಕಪ್ತಾನ ರೋಹಿತ್‌ ಶರ್ಮ ಸೊನ್ನೆ ಸುತ್ತುವುದರಲ್ಲೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಎರಡೂ ತಂಡಗಳ ಬೌಲಿಂಗ್‌ ಘಾತಕವೇನಲ್ಲ.
 
ಇಂದೋರ್‌ನಲ್ಲಿ ನಡೆದ ಇತ್ತಂಡಗಳ ನಡುವಿನ ಮೊದಲ ಪಂದ್ಯವನ್ನೊಮ್ಮೆ ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ಇದನ್ನು ಮುಂಬೈ 6 ವಿಕೆಟ್‌ಗಳಿಂದ ಜಯಿಸಿತ್ತು. ಪಂಜಾಬ್‌ 6ಕ್ಕೆ 174 ರನ್‌ ಗಳಿಸಿದರೆ, ಮುಂಬೈ 19 ಓವರ್‌ಗಳಲ್ಲಿ 4 ವಿಕೆಟಿಗೆ 176 ರನ್‌ ಮಾಡಿ ಗೆದ್ದು ಬಂದಿತ್ತು. 57 ರನ್‌ ಬಾರಿಸಿದ ಸೂರ್ಯಕುಮಾರ್‌ ಯಾದವ್‌ ಪಂದ್ಯಶ್ರೇಷ್ಠ 
ಗೌರವಕ್ಕೆ  ಪಾತ್ರರಾಗಿದ್ದರು.

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.