ಕೊಚ್ಚಿಗೆ ಹೊರಟ್ಟಿದ್ದ ಶಾಸಕರಿಗೆ ನಿರಾಸೆ


Team Udayavani, May 18, 2018, 12:03 PM IST

kochchige.jpg

ಬೆಂಗಳೂರು: ಕುದುರೆ ವ್ಯಾಪಾರದಿಂದ ತಪ್ಪಿಸಿಕೊಳ್ಳಲು ಗುರುವಾರ ರಾತ್ರೋರಾತ್ರಿ ಕೇರಳದ ಕೊಚ್ಚಿಗೆ ಹೊರಟಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ನಿರಾಸೆಯಾಗಿದೆ. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಖಾಸಗಿ ವಿಮಾನದ ಮೂಲಕ ಕೊಚ್ಚಿಗೆ ಹೋಗಲು ನಿರ್ಧರಿಸಿದ್ದರಾದರೂ ಕೇಂದ್ರ ವಿಮಾನಯಾನ ಸಚಿವಾಲಯ ಅದಕ್ಕೆ ಬ್ರೇಕ್‌ ಹಾಕಿದೆ.

ಇದರಿಂದಾಗಿ ಹೊರವಲಯದ ಈಗಲ್‌ಟನ್‌ ರೆಸಾರ್ಟ್‌ನಿಂದ ಹೊರಟ ಕಾಂಗ್ರೆಸ್‌ ಶಾಸಕರು ಮತ್ತು ನಗರದ ಖಾಸಗಿ ಹೋಟೆಲ್‌ನಿಂದ ಹೊರಟ ಜೆಡಿಎಸ್‌ ಶಾಸಕರು ಎಚ್‌ಎಎಲ್‌ ವಿಮಾನ ನಿಲ್ದಾಣ ತಲುಪಿದರಾದರೂ ಕೊಚ್ಚಿಗೆ ತೆರಳಲು ಸಾಧ್ಯವಾಗದೆ ನಿರಾಶೆಯಿಂದ ವಾಪಸಾಗುವಂತಾಗಿದೆ.

ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಖಾಸಗಿ ವಿಮಾನಗಳ ಸಂಚಾರಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯದಿಂದ ಪೂರ್ವಾನುಮತಿ ಪಡೆಯಬೇಕು. ಪಕ್ಷದ ಶಾಸಕನ್ನು ಕೊಚ್ಚಿಗೆ ಕರೆದೊಯ್ಯಲು ನಿರ್ಧರಿಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಸಂಜೆಯ ವೇಳೆಗೆ ಖಾಸಗಿ ವಿಮಾನ ಕಾಯ್ದಿರಿಸಿದ್ದರು. ಆದರೆ, ಕೊನೇ ಕ್ಷಣದಲ್ಲಿ ಅನುಮತಿ ಕೇಳಿ ವಿಮಾನಯಾನ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿದ್ದರಿಂದ ಸಚಿವಾಲಯ ಅದನ್ನು ತಿರಸ್ಕರಿಸಿದೆ.

ವಿಮಾನಯಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮುನ್ನೆಚ್ಚರಿಕೆ ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅಂತಿಮ ಕ್ಷಣದಲ್ಲಿ ಅನುಮತಿ ಕೇಳಿದರೆ ನೀಡಲು ಸಾಧ್ಯವಿಲ್ಲ ಎಂಬ ಪ್ರತಿಕ್ರಿಯೆ ಕೇಂದ್ರ ವಿಮಾನಯಾನ ಸಚಿವಾಲಯದಿಂದ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಅಂತಾರಾಷ್ಟ್ರೀಯ ವಿಮಾನದ ಮೂಲಕ ಶಾಸಕರನ್ನು ಕೊಚ್ಚಿಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತಾದರೂ ಎಲ್ಲಾ ಶಾಸಕರಿಗೆ ವಿಮಾನದ ಟಿಕೆಟ್‌ ಲಭ್ಯವಿಲ್ಲ ಎಂಬ ಕಾರಣಕ್ಕೆ ಖಾಸಗಿ ವಿಮಾನ ಕಾಯ್ದಿರಿಸಲಾಯಿತು. ಅದಕ್ಕಾಗಿ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಅವಕಾಶ ಕೇಳಲಾಗಿತ್ತು. ಶಾಸಕರ ವಾಸ್ತವ್ಯ ಉಸ್ತುವಾರಿ ವಹಿಸಿದ್ದ ಡಿ.ಕೆ.ಶಿವಕುಮಾರ್‌, ಈಗಲ್‌ಟನ್‌ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್‌ ಶಾಸಕರನ್ನು ವಿಶೇಷ ಬಸ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ದರು. ಆದರೆ, ಬಂದ ದಾರಿಗೆ ಸುಂಕವಿಲ್ಲದಂತೆ ಅಲ್ಲಿಂದ ವಾಪಸಾದರು.

ಈ ಮಧ್ಯೆ ಕೆಲ ಶಾಸಕರು ಕ್ಷೇತ್ರಕ್ಕೆ ಹೋಗಿ ಬರುತ್ತೇವೆ ಎಂದು ಮನವಿ ಮಾಡಿಕೊಂಡಿದ್ದರು. ಅವರನ್ನು ಹೊರಗೆ ಬಿಟ್ಟಿಲ್ಲ. ಇನ್ನು ಕೆಲವರು ಆರೋಗ್ಯ ಸಮಸ್ಯೆ ಇದೆ ಆಸ್ಪತ್ರೆಗೆ ಹೋಗಿ ಬರುತ್ತೇವೆ ಎಂದಿದ್ದರು. ಅವರಲ್ಲಿ ಕೆಲವರಿಗೆ ಮಾತ್ರ ವಿಶ್ವಾಸಾರ್ಹತೆಯ ಆಧಾರದಲ್ಲಿ ಹೊರಗೆ ಬಿಟ್ಟಿದ್ದಾರೆ ಎನ್ನಲಾಗಿದೆ. ಶಾಸಕರಿಗೆ ಮೊಬೈಲ್‌ ಫೋನ್‌ ಬಳಕೆಗೆ ಅವಕಾಶ ನೀಡಿದ್ದರು. ಆದರೆ, ರೆಸಾರ್ಟ್‌ನಲ್ಲಿ ಎಲ್ಲ ಶಾಸಕರ ಚಲನವಲನದ ಮೇಲೂ ನಿಗ ಇಡಲಾಗಿದೆ. 

ಹುಮ್ನಾಬಾದ್‌ ಶಾಸಕ ಬಸವರಾಜ್‌ ಪಾಟೀಲ್‌ ಅವರು ಆರೋಗ್ಯ ಸಮಸ್ಯೆಯ ನೆಪವೊಡ್ಡಿ ರೆಸಾರ್ಟ್‌ನಿಂದ ಹೊರಗೆ ಹೋಗಿಬರಲು ಅವಕಾಶ ಕೇಳಿಕೊಂಡಿದ್ದರು. ಆಗ ಹಿರಿಯ ಶಾಸಕರಾದ ಕೆ.ಜೆ.ಜಾರ್ಜ್‌ ಅವರು ಬಸವರಾಜ್‌ ಪಾಟೀಲ್‌ ಅವರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು. 
ಭದ್ರತೆ ಹಿಂಪಡೆದ ಸರ್ಕಾರ

ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬಿ.ಎಸ್‌.ಯಡಿಯೂರಪ್ಪ ಅವರು ಮಧ್ಯಾಹ್ನದ ವೇಳೆಗೆ ಈಗಲ್‌ಟನ್‌ ರೆಸಾರ್ಟ್‌ ಸಮೀಪದ ವಿಶೇಷ ಭದ್ರತೆಯನ್ನು ತೆರವುಗೊಳಿಸುವಂತೆ ಪೊಲೀಸ್‌ ಇಲಾಖೆಯ ಉನ್ನತಾಧಿಕಾರಿಗಳಿಗೆ ಆದೇಶಿಸಿದ್ದರು. ಅದರಂತೆ ವಿಶೇಷ ಭದ್ರತೆಯನ್ನು ವಾಪಾಸ್‌ ಪಡೆಯಲಾಗಿದೆ.

ಜೆಡಿಎಸ್‌ ಶಾಸಕರಿಗೆ ನಿಖೀಲ್‌ ಕುಮಾರಸ್ವಾಮಿ ಸಾಥ್‌: ಬುಧವಾರದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿರುವ ಜೆಡಿಎಸ್‌ ಶಾಸಕರು ಕೂಡ ಕೇರಳದ ಕೊಚ್ಚಿಗೆ ಹೊರಟಿದ್ದು, ಕುಮಾರಸ್ವಾಮಿಯವರ ಸೂಚನೆ ಮೇರೆಗೆ ನಗರದ ಶಾಂಗ್ರಿಲಾ ಹೋಟೆಲ್‌ಗೆ ಆಗಮಿಸಿದ ನಿಖೀಲ್‌ ಶಾಸಕರ ಜೊತೆ ಪ್ರಯಾಣ ಬೆಳಸಿದರು. ಆದರೆ, ಅವರಿಗೂ ವಾಮಾನಯಾನದ ಅವಕಾಶ ಸಿಗಲಿಲ್ಲ. ಆರಂಭದಲ್ಲಿ ನಾವು ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದರು.

ಆದರೆ, ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರಾಜ್ಯಪಾಲರು 15 ದಿನ ಕಾಲಾವಕಾಶ ನೀಡಿದ್ದರಿಂದ ಅಷ್ಟು ದಿನ ಬೆಂಗಳೂರಿನಲ್ಲಿ ಶಾಸಕರನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಅಂತಿಮವಾಗಿ ಕಾಂಗ್ರೆಸ್‌ ಶಾಸಕರ ಜತೆಗೆ ಒಟ್ಟಾಗಿರಲು ಜೆಡಿಎಸ್‌ ಶಾಸಕರನ್ನೂ ಕೊಚ್ಚಿಗೆ ಕಳುಹಿಸಲು ನಿರ್ಧರಿಸಲಾಗಿದೆ.

ಕೊಚ್ಚಿಗೆ ತೆರಳಲು ಕಾಂಗ್ರೆಸ್‌ ಚುನಾಯಿತ ಪ್ರತಿನಿಧಿಗಳ ಸಿದ್ಧತೆ
ರಾಮನಗರ:
ತಾಲೂಕಿನ ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ  ವಾಸ್ತವ್ಯ ಹೂಡಿರುವ ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿಗಳಿಗೆ ಗುರುವಾರ ಬಿಡುವಿಲ್ಲದ ಚಟುವಟಿಕೆಯಲ್ಲಿದ್ದರು.  ಗುರುವಾರ ರಾತ್ರಿ ಕೇರಳದ ಕೊಚ್ಚಿಗೆ ಹೋಗಲು ಸಿದ್ದತೆ ನಡೆಸಿದರು. 

ಗುರುವಾರ ಬೆಳಿಗ್ಗೆ  ಬಸ್ಸುಗಳು ಮತ್ತು ಕಾರುಗಳಲ್ಲಿ  ಬೆಂಗಳೂರಿನ ಕಡೆ ತೆರಳಿದ ಪ್ರತಿನಿಧಿಗಳು  ಅಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತದ ನಂತರ ಸಂಸದ ಡಿ.ಕೆ.ಸುರೇಶ್‌ ನೇತೃತ್ವದಲ್ಲಿ ರೆಸಾರ್ಟ್‌ಗೆ ವಾಪಸ್ಸಾದರು. ನಂತರ ಕೆಲ ನಿಮಿಷಗಳಲ್ಲೇ ಹುಮ್ನಬಾದ್‌ ಕ್ಷೇತ್ರದ ಚುನಾಯಿತ ಪ್ರತಿನಿಧಿಗ ರಾಜಶೇಖರ್‌ ಕಾರಿನಲ್ಲಿ ರೆಸಾರ್ಟ್‌ನ ಗೇಟಿನ ಬಳಿ ಬಂದಾಗ ಅಲ್ಲಿ ಬಂದೋಬಸ್ತ್ಗೆ ನಿಯೋಜಿತರಾಗಿದ್ದ ಪೊಲಿಸರು ಅವರು ಹೊರಹೋಗುವುದನ್ನು ತಡೆದರು.

ತಮಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದರಿಂದ ಬೆಂಗಳೂರಿಗೆ ಹೋಗಬೇಕಾಗಿದೆ ಎಂದರೂ ಪೊಲೀಸರು ಅವರನ್ನು ಹೊರಹೋಗಲು ಬಿಡಲಿಲ್ಲ. ಇದರಿಂದ ಕೋಪಗೊಂಡ ರಾಜಶೇಖರ್‌ ಪೊಲೀಸರ ವಿರುದ್ದ ಏರು ದನಿಯಲ್ಲಿ ಮಾತನಾಡಿದರು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಮಾಜಿ ಸಚಿವ ಕೆ.ಜೆ.ಜಾರ್ಜ್‌  ಅವರನ್ನು ಹೊರಹೋಗಲು ಸಹಕರಿಸಿದರು. 
  
ರಾಮನಗರ: ಬಿ.ಎಸ್‌.ಯಡಿಯೂರಪ್ಪ ನೂತನ ಮುಖ್ಯಮಂತ್ರಿ ಆದ ಕೆಲವೇ ಗಂಟೆಗಳಲ್ಲಿ  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ರಮೇಶ್‌ ಅವರ ವರ್ಗಾವಣೆಯಾಗಿದೆ. ಅವರ ಜಾಗಕ್ಕೆ ಕೆ.ಅಣ್ಣಾ ಮಲೈ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಟಿದೆ. ಚಿಕ್ಕಮಗಳೂರು ಎಸ್ಪಿಯಾಗಿದ್ದ ಕೆ.ಅಣ್ಣಾ ಮಲೈ ಅವರನ್ನು ರಾಮನಗರದ ಎಸ್ಪಿ ಆಗಿ ಸರ್ಕಾರ ವರ್ಗಾವಣೆ ಮಾಡಿದೆ.   
 
ಬಿಜೆಪಿ ಪ್ರಜಾಪ್ರಭುತ್ವ ವಿರುದ್ಧ  
ರಾಮನಗರ:
ಸರ್ಕಾರ ರಚನೆಗೆ ಬೇಕಾದ ಅಗತ್ಯ ಸಂಖ್ಯೆ ಇಲ್ಲದ ಬಿಜೆಪಿ ಅನ್ಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳನ್ನು ಸೆಳೆಯಲು ಮುಂದಾಗಿದೆ. ಈ ಪ್ರಯತ್ನ ಪ್ರಜಾಪ್ರಭುತ್ವ ತತ್ವಗಳ ವಿರುದ್ದವಾಗಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ  ಪ್ರತಿಕ್ರಿಯಿಸಿದ್ದಾರೆ. ಬಿಡದಿ ಬಳಿಯ ಈಗಲ್‌ ಟನ್‌ ರೆಸಾರ್ಟ್‌ ಬಳಿ ಸುದ್ದಿಗಾರರೊಂದಿಗೆ  ಅವರು ಮಾತನಾಡಿದರು. ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ತಮ್ಮ ಪಕ್ಷ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ.

ಸುಪ್ರಿಂ ಕೋರ್ಟಿನಲ್ಲಿ  ತೀರ್ಮಾನ ಹೊರ ಬಿದ್ದ ಮೇಲೆ ಸ್ಪಷ್ಟ ಚಿತ್ರಣ ಸಿಗಲಿದೆ. ಬಿಜೆಪಿಯವರಂತೆ ನಾವು ಕಚಡ ರಾಜಕಾರಣ ಮಾಡುವುದಿಲ್ಲ ಎಂದರು. ಬಿಜೆಪಿಯ 6 ಪ್ರತಿನಿಧಿಗಳು ಕಾಂಗ್ರೆಸ್‌ ಸಂಪರ್ಕದಲ್ಲಿರುವುದರ ಬಗ್ಗೆ ತಮ್ಮ ಬದಿ ಮಾಹಿತಿ ಇಲ್ಲ ಎಂದರು. ತಮ್ಮ ಪಕ್ಷಕ್ಕೆ ಯಾವ ಆಪರೇಷನ್‌ನ ಅಗತ್ಯವಿಲ್ಲ ಎಂದರು. 
 
ರಾಮನಗರ: ಸರ್ಕಾರ ರಚನೆಗೆ ಬೇಕಾದಷ್ಟು ಸದಸ್ಯರ ಬೆಂಬಲ ಇಲ್ಲದ ಬಿ.ಎಸ್‌.ಯಡಿಯೂರಪ್ಪ ವಿಚಲಿತರಾಗಿದ್ದಾರೆ. ಅಗತ್ಯವಾದಷ್ಟು ಸಂಖ್ಯಾಬಲ ಹೊಂದಿಸಿಕೊಳ್ಳಲು ಪ್ರಯತ್ನಸುತ್ತಿದ್ದಾರೆ. ಹೀಗಾಗಿಯೇ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಂತಹ ಕ್ರಮಗಳಿಗೆ ಮುಂದಾಗಿದ್ಧಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಪಕ್ಷ ರಕ್ಷಣೆ ಕೋರಿರಲಿಲ್ಲ.  ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿಗಳು, ಎಂ.ಎಲ್‌.ಸಿ.ಗಳು, ಸಂಸದರು, ಪ್ರಮುಖರು ಸೇರಿದಂತೆ ಸುಮಾರು 150 ಮಂದಿ ಇದ್ದಾರೆ. ಹೀಗಾಗಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರಷ್ಟೆ. ಇಲ್ಲಿ ಬಂದೋಬಸ್ತ್ ಕಲ್ಪಿಸಿದ್ದ ಜಿಲ್ಲಾ ಎಸ್ಪಿಯವರನ್ನು ವರ್ಗಾವಣೆ ಮಾಡಲಾಗಿದೆ ಎಂದರು. 

ಕಾಂಗ್ರೆಸ್‌ ಟಿಕೆಟ್‌ ಮೇಲೆ ಚುನಾಯಿತರಾಗಿರುವ ಪ್ರತಿನಿಧಿಗಳ ಮೇಲೆ ಒತ್ತಡಗಳಿವೆ. ಬಿಜೆಪಿಯವರು ಆಪರೇಷನ್‌ ನಡೆಸಲು ಮುಂದಾಗಿದ್ದಾರೆ. ಜನಾರ್ಧನರೆಡ್ಡಿ ಆಪ್ತರು ಹಾಗೂ ಬೇರೆಯವರ ಮೂಲಕ ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಹುನ್ನಾರ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ನ ಯಾವ ಪ್ರತಿನಿಧಿಯೂ ಅತ್ತ ಹೋಗೋಲ್ಲ ಎಂದರು. ಕಾಂಗ್ರೆಸ್‌ – ಜೆಡಿಎಸ್‌ ನಲ್ಲಿ ಬಲವಿದೆ.

ಇಬ್ಬರು ಸೇರಿ ಸರ್ಕಾರ ರಚನೆ ಮಾಡುವುದಾಗಿ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೇವೆ. ಎರಡೂ ಪಕ್ಷಗಳ ಚುನಾಯಿತ ಪ್ರತಿನಿಧಿಗಳು  ಒಗ್ಗಟ್ಟಿನಿಂದ ಇರ್ತೇವೆ ಎಂದರು. ಈಗಲ್ಟನ್‌ ರೆಸಾರ್ಟ್‌ನಿಂದ ಬೇರೆಡೆಗೆ ಹೋಗುವ ಬಗ್ಗೆ ಸುದ್ದಿಗಾರರ ಪ್ರಶ°ಗೆ ಪ್ರತಿಕ್ರಿಯಿಸಿದ ಅವರು ತಮಿಳುನಾಡು, ಹೈದರಾಬಾದ್‌ಗೆ ಬರುವಂತೆ ಆಹ್ವಾನ ಬಂದಿದೆ. ವಿಮಾನ ಲಭ್ಯತೆ ಮುಂತಾದ ವಿಚಾರಗಳನ್ನು ತಿಳಿದುಕೊಂಡು ನಂತರ ನಿಧ್ರಿಸುವುದಾಗಿ ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.