ಧರ್ಮಸ್ಥಳಕ್ಕೆ  ಮೂಲ ಗದುಗಿನ ಭಾರತ?


Team Udayavani, May 23, 2018, 12:55 PM IST

darmastala.jpg

ಬೆಳ್ತಂಗಡಿ: ಕವಿ ಕುಮಾರವ್ಯಾಸನ ವಂಶಸ್ಥರು ತಾಳೆಗರಿಗಳಲ್ಲಿ ಲೇಖೀಸಿರುವ ಕರ್ಣಾಟ ಭಾರತ ಕಥಾ ಮಂಜರಿ ಅಥವಾ ಗದುಗಿನ ಭಾರತ ಎನ್ನಲಾಗಿರುವ ತಾಡವೋಲೆ ಗ್ರಂಥವನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮೂಲಪ್ರತಿ ಸಂರಕ್ಷಣೆಗಾಗಿ ನೀಡಿದ್ದು, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಶೋಧನಾ ಪ್ರತಿಷ್ಠಾನಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಇದು ಅಸಲಿಯೇ ಅಥವಾ ಮೂಲ ಪ್ರತಿ ಹೌದೇ, ಅಲ್ಲವೇ ಎನ್ನುವುದು ಪ್ರತಿಷ್ಠಾನದ ತಜ್ಞರು ಪರೀಕ್ಷಿಸಿದ ಬಳಿಕವಷ್ಟೇ ತಿಳಿದು ಬರಲಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕು ಕೋಳಿವಾಡದ, ಕವಿ ಕುಮಾರವ್ಯಾಸನ ಮೂಲ ವಂಶಸ್ಥರು ಎನ್ನಲಾದ ಅವಧೂತ ವೀರ ನಾರಾಯಣ ಪಾಟೀಲ್‌ ಹಾಗೂ ಚಂದ್ರಶೇಖರ ಡಿ. ಪಾಟೀಲ್‌ ತಮ್ಮ ಮೂಲ ನಿವಾಸದಲ್ಲಿದ್ದ ಈ ಗ್ರಂಥವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಡಾ| ಹೆಗ್ಗಡೆ ಅವರು ತಾಳೆಗರಿಗಳ ವೀಕ್ಷಣೆ ಮಾಡಿದ್ದಾರೆ.

ಆರು ತಿಂಗಳ ಕಾಲಾವಕಾಶ
ತಾಳೆಗರಿಗಳನ್ನು ಪೆಟ್ಟಿಗೆಯಲ್ಲಿಡಲಾಗಿದ್ದು, ಪ್ರತಿ ಷ್ಠಾನಕ್ಕೆ ಹಸ್ತಾಂತರಿಸಲಾಗಿದೆ. ಅವುಗಳನ್ನು ಸಂರಕ್ಷಿಸಿ ಮತ್ತೆ ಹಿಂದಿರುಗಿಸಬೇಕಾಗಿದ್ದು, ಅಜೀರ್ಣಾ ವಸ್ಥೆಯಲ್ಲಿರುವುದರಿಂದ ಆರು ತಿಂಗಳ ಬಳಿಕ ಹಿಂದಿರುಗಿಸುವುದಾಗಿ ತಿಳಿಸಲಾಗಿದೆ. ತಾಳೆ ಗರಿಗಳು ಸುಮಾರು 700 ವರ್ಷಕ್ಕೂ ಹಿಂದಿನವಾಗಿದ್ದು, ಕವಿ ಕುಮಾರವ್ಯಾಸನೇ ಬರೆದಿರುವುದು ಎಂದು ವಂಶಸ್ಥರು ಹೇಳುತ್ತಿದ್ದಾರೆ. ಅದರೆ ನಿಖರವಾದ ಕಾಲಮಾನ ತಾಳೆ ಗರಿಗಳ ಪರೀಕ್ಷೆ ನಡೆಸಿದ ಬಳಿಕ ತಿಳಿಯಲಿದೆ. ಒಂದು ವೇಳೆ ಕುಮಾರವ್ಯಾಸನೇ ಬರೆದ ಮೂಲ ಕೃತಿಯೇ ಆಗಿದ್ದಲ್ಲಿ ಅಮೂಲ್ಯ ಕೃತಿಯೊಂದರ ಸಂರಕ್ಷಣೆ ನಡೆದಂತೆ ಆಗಲಿದೆ.

ಪ್ರತಿಷ್ಠಾನದಿಂದ ಉಚಿತ ಸಂರಕ್ಷಣೆ
ಧರ್ಮಸ್ಥಳದ ಪ್ರಾಚ್ಯ ವಿದ್ಯಾಸಂಸ್ಥೆ ಶ್ರೀ ಮಂಜು ನಾಥೇಶ್ವರ ಸಂಶೋಧನ ಪ್ರತಿಷ್ಠಾನದಲ್ಲಿ ಪ್ರಾಚೀನ ಸಂರಕ್ಷಣೆಯನ್ನು ಮಾಡಿ ಮತ್ತೆ ಹಿಂದಿರುಗಿಸ ಲಾಗುತ್ತದೆ. ಆದರೆ ಇದಕ್ಕೆ ಯಾವುದೇ ರೀತಿಯ ವೆಚ್ಚ ಗಳನ್ನು ಪಡೆಯಲಾಗುವುದಿಲ್ಲ. ಈಗಾಗಲೇ ಹಲವು ಅತ್ಯಮೂಲ್ಯ ಗ್ರಂಥಗಳನ್ನು ಇಲ್ಲಿ ಸಂರಕ್ಷಿಸಿ ಇರಿಸಲಾಗಿದೆ.

ಗದುಗಿನ ಭಾರತದ ಸಂರಕ್ಷಣೆ
ಗದುಗಿನ ನಾರಣಪ್ಪ ಅಥವಾ ಕುಮಾರವ್ಯಾಸ ರಚಿಸಿರುವ ಕೃತಿಗಳಲ್ಲಿ ಪ್ರಸಿದ್ಧವಾದುದು ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂಬ ಇತರ ಹೆಸರುಗಳೂ ಇವೆ.

ಸುಮಾರು ಏಳುನೂರು ವರ್ಷಗಳ ಹಿಂದಿನ ಕೃತಿಯೆಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ತಾಳೆಗರಿ ಬರೆದಿರುವ ವರ್ಷವನ್ನು ಪರೀಕ್ಷೆಗೆ ಕಳುಹಿಸಿ ತಿಳಿಯಲಾಗುವುದು. ಕೃತಿಯನ್ನು ಶುಚಿಗೊಳಿಸುವುದು, ಸಂರಕ್ಷಣೆಯ ಕಾರ್ಯವನ್ನು ಪ್ರತಿಷ್ಠಾನದಿಂದ ನಡೆಸಿ, ಹಿಂದಿರುಗಿಸಲಾಗುತ್ತದೆ. 6 ತಿಂಗಳುಗಳ ಸಮಯಾವಕಾಶ ಕೋರಲಾಗಿದೆ.
-ಡಾ| ಎಸ್‌.ಆರ್‌. ವಿಘ್ನರಾಜ್‌, ಸಂಶೋಧನ ಪ್ರತಿಷ್ಠಾನದ ನಿರ್ದೇಶಕರು

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.