ಶಾಂತಾರಾಮ ಹೆಗಡೆ ಸನ್ಮಾನದ ಮೊತ್ತ ಸಮಾಜ ಸೇವೆಗೆ ವಿನಿಯೋಗ

Team Udayavani, May 25, 2018, 12:24 PM IST

6.jpg

ಶಿರಸಿ: ಸ್ವಾರ್ಥ ರಹಿತ ಸೇವೆಯ ಮೂಲಕ ಸಹಕಾರಿ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಧಾರ್ಮಿಕ ಕ್ಷೇತ್ರಗಳಲ್ಲಿ ಜನಪರ ಕಾರ್ಯದಲ್ಲಿ ತೊಡಗಿರುವ ಇಲ್ಲಿನ ಟಿಎಸ್‌ಎಸ್‌ ಅಧ್ಯಕ್ಷ, ಹಿರಿಯ ಸಹಕಾರಿ, ಚಿಂತಕ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರಿಗೆ ವಿವಿಧೆಡೆ ನೀಡಲಾದ ಸನ್ಮಾನದ ಮೊತ್ತವನ್ನು ಪೇರಿಸಿ ಸಾರ್ವಜನಿಕರಿಗೇ ಬಳಕೆ ಆಗುವಂತೆ ಮಾದರಿ ಕಾರ್ಯಕ್ಕೆ ಹೆಜ್ಜೆ ಇಡಲಾಗಿದೆ.

ಗುರುವಾರ ನಗರದ ಟಿಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಂತಾರಾಮ ಹೆಗಡೆ ಶೀಗೇಹಳ್ಳಿ ವೆಲ್ಫೇರ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎಸ್‌.ಕೆ. ಭಾಗವತ್‌ ಶಿರಸಿಮಕ್ಕಿ, ಶೀಗೇಹಳ್ಳಿ ಅವರಿಗೆ ಗದಗದ ಕೆ.ಎಚ್‌. ಪಾಟೀಲ ಸಹಕಾರಿ ಪ್ರಶಸ್ತಿ ಬಂದಾಗ ಶಿರಸಿಯಲ್ಲೂ ಸಹಕಾರಿ ಆಸಕ್ತರು ಸನ್ಮಾನ ಮಾಡಿದ್ದೆವು. ಗದಗದಲ್ಲಿ ಕೊಟ್ಟ 5 ಲ.ರೂ. ಹಾಗೂ ಶಿರಸಿಯಲ್ಲಿ ಹಮ್ಮಿಣಿ ಅರ್ಪಿಸಿ ನೀಡಿದ್ದು ಸೇರಿಸಿ ಒಟ್ಟೂ 14.50 ಲಕ್ಷ ರೂ.ನಿಧಿ  ಇಟ್ಟು ಟ್ರಸ್ಟ್‌ ಆರಂಭಿಸಲಾಗುತ್ತಿದೆ ಎಂದರು.

ಶೈಕ್ಷಣಿಕ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಲಯಕ್ಕೆ ಧನಸಹಾಯ ನೀಡುವುದು ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ ಎಂದ ಅವರು, ಕಳೆದ ವರ್ಷ ಕೆ.ಎಚ್‌. ಪಾಟೀಲ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಪ್ರಶಸ್ತಿ ಸ್ವೀಕರಿಸುವಾಗ ಶಾಂತಾರಾಮ ಹೆಗಡೆ ಈ ಇಂಗಿತ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಅವರಿಗೆ ಅಭಿನಂದನಾ ಕಾರ್ಯ ಏರ್ಪಡಿಸಿ ಹಮ್ಮಿಣಿ ಸಮರ್ಪಿಸಲಾಗಿತ್ತು. ಇದನ್ನೂ ಸಹ ಸೇರಿಸಿ ಒಂದು ಚಾರಿಟೇಬಲ್‌ ಟ್ರಸ್ಟ್‌ ರಚಿಸಲಾಗಿದೆ ಎಂದು ತಿಳಿಸಿದರು.

ಶೀಗೇಹಳ್ಳಿ ಅವರು ಈ ಟ್ರಸ್‌ rನ ಗೌರವಾಧ್ಯಕ್ಷರಾಗಿದ್ದು, ಟಿಎಸ್‌ಎಸ್‌ ನ ಪ್ರಧಾನ ವ್ಯವಸ್ಥಾಪಕರು ಈ ಟ್ರಸ್ಟ್‌ನ ಕಾರ್ಯದರ್ಶಿಯಾಗಿರುತ್ತಾರೆ. ನ್ಯಾಯವಾದಿ ಶಶಾಂಕ ಎಸ್‌. ಹೆಗಡೆ ಟ್ರಸ್ಟಿಗಳಾಗಿದ್ದಾರೆ ಎಂದರು.

ಶಾಲೆ, ಕಾಲೇಜು, ಗ್ರಂಥಾಲಯ, ರೀಡಿಂಗ್‌ ರೂಂ,ವಿಶ್ವವಿದ್ಯಾಲಯ, ಪ್ರಯೋಗಾಲಯ, ಸಂಶೋಧನಾ ಸಂಸ್ಥೆಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆ ಇತ್ಯಾದಿಗಳಿಗೆ ಧನಸಹಾಯ ನೀಡುವುದು, ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು, ವೈದ್ಯಕೀಯ ಸಂಸ್ಥೆಗಳು,ಆಸ್ಪತ್ರೆಗಳು, ಮಕ್ಕಳ ಕಲ್ಯಾಣ ಕೇಂದ್ರಗಳು, ನರ್ಸಿಂಗ್‌ ಹೋಂಗಳು ಇತ್ಯಾದಿಗಳ ಸ್ಥಾಪನೆ, ನಿರ್ವಹಣೆ ಇತ್ಯಾದಿಗಳಿಗೆ ಧನಸಹಾಯ ನೀಡುವುದು, ಆರ್ಥಿಕ ದುರ್ಬಲರ ವೈದ್ಯಕೀಯ ವೆಚ್ಚ ನಿರ್ವಹಣೆಗೆ ಧನಸಹಾಯ ನೀಡುವುದು, ಆರ್ಥಿಕ ದುರ್ಬಲರಿಗೆ ವಿದ್ಯಾರ್ಥಿವೇತನ ನೀಡುವುದು, ಪುಸ್ತಕಗಳು, ನೋಟ್‌ಬುಕ್‌ಗಳು, ಬಟ್ಟೆ, ಸಮವಸ್ತ್ರ, ಊಟ ಇತ್ಯಾದಿಗಳನ್ನು ಪೂರೈಸುವುದು, ವಿಜ್ಞಾನ, ಸಾಹಿತ್ಯ, ಸಂಗೀತ, ಸಂಸ್ಕೃತಿ, ನಾಟಕ ಹಾಗೂ ಕುಶಲಕಲೆ ಇತ್ಯಾದಿಗಳನ್ನು ಪ್ರೋತ್ಸಾಹಿಸಲು ಧನಸಹಾಯ ನೀಡುವುದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಧನಸಹಾಯ ನೀಡುವುದು, ಸಾರ್ವಜನಿಕ ಉಪಯೋಗಕ್ಕಾಗಿ ಪಾರ್ಕ್‌ಗಳು, ವ್ಯಾಯಾಮಶಾಲೆ, ಕ್ರೀಡಾ ಸಂಸ್ಥೆಗಳು, ಧರ್ಮಶಾಲೆಗಳು, ವಿಶ್ರಾಂತಿಗೃಹಗಳು ಇತ್ಯಾದಿಗಳ ಸ್ಥಾಪನೆ ಹಾಗೂ ನಿರ್ವಹಣೆ, ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳ ಸ್ಥಾಪನೆ ಹಾಗೂ ನಿರ್ವಹಣೆಗೆ ಧನಸಹಾಯ ನೀಡುವುದು ಕೂಡ ಸೇರಿದೆ ಎಂದರು. ಸಹಕಾರಿ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ, ಶಶಾಂಕ ಹೆಗಡೆ ಇತರರು ಇದ್ದರು.

ಜೂನ್‌ ಕೊನೇ ವಾರ ಈ ಟ್ರಸ್ಟನ ಅಧಿಕೃತ ಉದ್ಘಾಟನೆ ಆಗಲಿದೆ. ಈ ಉದ್ಘಾಟನೆ ಮೂಲಕ ಟ್ರಸ್ಟ್‌ ತನ್ನ ರಚನಾತ್ಮಕ ಕಾರ್ಯವನ್ನು ಆರಂಭಿಸಲಿದೆ.
ಶಶಾಂಕ ಹೆಗಡೆ, ಟ್ರಸ್ಟಿ

ಮೊದಲಿಂದಲೂ ಸಾರ್ವಜನಿಕವಾಗಿ ಸಿಕ್ಕ ಹಣ ಬಳಸುತ್ತಿರಲಿಲ್ಲ. ಈಗ ಟ್ರಸ್ಟ್‌ ರಚಿಸುವ ಮೂಲಕ ಇನ್ನಷ್ಟು ವ್ಯವಸ್ಥಿತಗೊಳಿಸಿದ್ದಾರೆ. ಸಾರ್ವಜಕನಿಕರ ಹಣ ಸಾರ್ವಜನಿಕ ಕ್ಷೇತ್ರಕ್ಕೇ ಹೋಗಬೇಕು.
 ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಸಹಕಾರಿಗಳು

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.