ಫ್ರೆಂಚ್‌ ಓಪನ್‌ ಡ್ರಾ: ಸೆರೆನಾ-ಶರಪೋವಾ ಮುಖಾಮುಖೀ ಸಾಧ್ಯತೆ


Team Udayavani, May 26, 2018, 6:45 AM IST

serena-sharapova.jpg

ಪ್ಯಾರಿಸ್‌: ಪ್ರತಿಷ್ಠಿತ ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಡ್ರಾ ನಡೆದಿದ್ದು, 3 ಬಾರಿಯ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌ 4ನೇ ಸುತ್ತಿನಲ್ಲಿ ಮರಿಯಾ ಶರಪೋವಾ ಸವಾಲನ್ನು ಎದುರಿಸುವ ಸಾಧ್ಯತೆಯೊಂದು ಕಂಡುಬಂದಿದೆ.

2002, 2013 ಮತ್ತು 2015ರಲ್ಲಿ ಪ್ರಶಸ್ತಿ ಜಯಿಸಿದ ಸೆರೆನಾ ವಿಲಿಯಮ್ಸ್‌ ಮೊದಲ ಸುತ್ತಿನ ಪಂದ್ಯವನ್ನು ಜೆಕ್‌ ಗಣರಾಜ್ಯದ ಕ್ರಿಸ್ಟಿನಾ ಪ್ಲಿಸ್ಕೋವಾ ವಿರುದ್ಧ ಆಡಲಿದ್ದಾರೆ. ಮಾಜಿ ನಂ.1 ಆಟಗಾರ್ತಿ ಸೆರೆನಾ ಈಗ 453ರಷ್ಟು ಕೆಳ ರ್‍ಯಾಂಕಿಂಗ್‌ ಹೊಂದಿದ್ದಾರೆ. 2017ರ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ಬಳಿಕ ಸೆರೆನಾ ಆಡುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಇದೆಂಬುದು ವಿಶೇಷ.

2012 ಮತ್ತು 2014ರಲ್ಲಿ ರೊಲ್ಯಾಂಡ್‌ ಗ್ಯಾರೋಸ್‌ ಚಾಂಪಿಯನ್‌ ಆಗಿದ್ದ ಮರಿಯಾ ಶರಪೋವಾ 2013ರ ಫೈನಲ್‌ನಲ್ಲಿ ಸೆರೆನಾಗೆ ಸೋತಿದ್ದರು. ಇವರಿಬ್ಬರು 4ನೇ ಸುತ್ತಿನಲ್ಲಿ ಎದುರಾಗಬಹುದೆಂದು ಟೆನಿಸ್‌ ಪಂಡಿತರು ಲೆಕ್ಕ ಹಾಕಿದ್ದಾರೆ. ಶರಪೋವಾ ಇಲ್ಲಿ ಸೆರೆನಾಗೆ ಕೊನೆಯ ಸಲ ಸೋಲುಣಿಸಿದ್ದು 2004ರಲ್ಲಿ. ಆದರೆ ಫ್ರೆಂಚ್‌ ಓಪನ್‌ನಲ್ಲಿ “ಶೆರ್ಪಿ’ ವಿರುದ್ಧ ಸೆರೆನಾ 19-2 ಗೆಲುವಿನ ದಾಖಲೆ ಹೊಂದಿದ್ದಾರೆ. ಇಂಥದೊಂದು ಸಾಧ್ಯತೆಗೂ ಮುನ್ನ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು ಶರಪೋವಾ ಮಣಿಸಬೇಕಾಗಬಹುದು.

ನಂ.1 ಆಟಗಾರ್ತಿ, 2 ಬಾರಿಯ ರನ್ನರ್‌ ಅಪ್‌ ಸಿಮೋನಾ ಹಾಲೆಪ್‌ ಅಮೆರಿಕದ ಅಲಿಸನ್‌ ರಿಸ್ಕೆ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಇನ್ನೊಂದೆಡೆ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಕ್ಯಾರೋಲಿನ್‌ ವೋಜ್ನಿಯಾಕಿ ಅಮೆರಿಕದ ಮತ್ತೋರ್ವ ಆಟಗಾರ್ತಿ ಡೇನಿಯಲ್‌ ಕಾಲಿನ್ಸ್‌ ವಿರುದ್ಧ ಆಡಲಿದ್ದಾರೆ.

ಹಾಕಿ ಚಾಂಪಿಯನ್‌ ಜೆಲೆನಾ ಒಸ್ಟಾಪೆಂಕೊ ಉಕ್ರೇನಿನ ಕ್ಯಾಥತಿನಾ ಕೊಜೊÉàವಾ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ದ್ವಿತೀಯ ಸುತ್ತಿನಲ್ಲಿ ವಿಕ್ಟೋರಿಯಾ ಅಜರೆಂಕಾ ಸವಾಲು ಎದುರಾಗಬಹುದು.3ನೇ ಶ್ರೇಯಾಂಕದ ಗಾರ್ಬಿನ್‌ ಮುಗುರುಜಾ ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು. ಕುಜ್ನೆತ್ಸೋವಾ 2009ರ ಚಾಂಪಿಯನ್‌ ಆಗಿದ್ದರೆಂಬುದು ವಿಶೇಷ.

ನಡಾಲ್‌-ಡೊಲ್ಗೊಪೊಲೋವ್‌
11ನೇ ರೊಲ್ಯಾಂಡ್‌ ಗ್ಯಾರೋಸ್‌ ಪ್ರಶಸ್ತಿ ಎತ್ತಲು ಕಾತರಗೊಂಸಡಿರುವ ರಫೆಲ್‌ ನಡಾಲ್‌ ಉಕ್ರೇನಿನ ಅಲೆಕ್ಸಾಂಡರ್‌ ಡೊಲ್ಗೊಪೊಲೋವ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಈ ವರ್ಷ ಈಗಾಗಲೇ ರೋಮ್‌, ಬಾರ್ಸಿಲೋನಾ ಹಾಗೂ ಮಾಂಟೆ ಕಾರ್ಲೊ ಪ್ರಶಸ್ತಿ ಎತ್ತಿರುವ ನಡಾಲ್‌, ಉಕ್ರೇನ್‌ ಆಟಗಾರನೆದುರು 7-2 ಗೆಲುವಿನ ದಾಖಲೆ ಹೊಂದಿದ್ದಾರೆ.

ನಡಾಲ್‌ ಅಭಿಯಾನ ಮುಂದುವರಿಯುತ್ತ ಹೋದರೆ, 3ನೇ ಸುತ್ತಿನಲ್ಲಿ ರಿಚರ್ಡ್‌ ಗಾಸ್ಕ್ವೆಟ್‌, 4ನೇ ಸುತ್ತಿನಲ್ಲಿ ಡೆನ್ನಿಸ್‌ ಶಪೊವಲೋವ್‌ ವಿರುದ್ಧ ಆಡಬೇಕಾದೀತು. ಕ್ವಾರ್ಟರ್‌ ಫೈನಲ್‌ನಲ್ಲಿ ಕೆವಿನ್‌ ಆ್ಯಂಡರ್ಸನ್‌, ಸೆಮಿಫೈನಲ್‌ನಲ್ಲಿ ಮರಿನ್‌ ಸಿಲಿಕ್‌ ಎದುರಾಗುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.

ಪ್ಯಾರಿಸ್‌ನಲ್ಲಿ ಈವರೆಗೆ 3ನೇ ಸುತ್ತು ದಾಟದ ಅಲೆಕ್ಸಾಂಡರ್‌ ಜ್ವೆರೇವ್‌ ಲಿಥುವಾನಿಯಾದ ರಿಕಾರ್ಡಿಸ್‌ ಬೆರಂಕಿಸ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. 2016ರ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಅವರಿಗೆ 4ನೇ ಸುತ್ತಿನಲ್ಲಿ ಗ್ರಿಗರ್‌ ಡಿಮಿಟ್ರೋವ್‌ ಎದುರಾಗಬಹುದು.

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.