ಭಾರತಕ್ಕೆ ಬಂತು ನೇಬರ್ಲಿ ಆ್ಯಪ್
Team Udayavani, Jun 1, 2018, 3:00 AM IST
ಮುಂಬಯಿ: ಜನರು ತಮ್ಮ ನೆರೆಮನೆಯವರು ಹಾಗೂ ಪಕ್ಕದ ಬೀದಿಯಲ್ಲಿನ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಹಾಗೂ ಕಷ್ಟಕಾಲದಲ್ಲಿ ಅವರ ನೆರವನ್ನು ಪಡೆಯುವುದೆಲ್ಲವೂ ಡಿಜಿಟಲ್ ರೂಪ ತಾಳಲಿದೆ. ನೇಬ ಎಂಬ ಹೊಸ ಅಪ್ಲಿಕೇಶನನ್ನು ಮುಂಬಯಿಯಲ್ಲಿ ಗೂಗಲ್ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಇದು ಇತರ ನಗರಗಳಲ್ಲೂ ಲಭ್ಯವಾಗಲಿದೆ.
ಅಪ್ಲಿಕೇಶನ್ ಬಳಕೆಗೆ ಅತ್ಯಂತ ಸರಳವಾಗಿದ್ದು, ಬಳಕೆದಾರರು ಪ್ರಶ್ನೆಗಳನ್ನು ಕೇಳಬಹುದು ಮತ್ತು ಉತ್ತರಿಸಲೂಬಹುದು. ಆಕ್ಷೇಪಾರ್ಹ ಪ್ರಶ್ನೆಗಳು ಕಂಡುಬಂದರೆ ಬಳಕೆದಾರರು ಗೂಗಲ್ ಗೆ ವರದಿ ಮಾಡುತ್ತಾರೆ ಮತ್ತು ಅದನ್ನು ಪರಿಶೀಲಿಸಿ ಗೂಗಲ್ ಕ್ರಮ ಕೈಗೊಳ್ಳುತ್ತದೆ. ಉತ್ತರಿಸುವ ಪ್ರಶ್ನೆಗಳಿಗೆ ಪಾಯಿಂಟ್ ಗಳನ್ನು ನೀಡಲಾಗುತ್ತದೆ. ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದವರು ನೆರೆಯ ಪ್ರಮುಖರು ಎಂದು ಪರಿಗಣಿಸಲ್ಪಡುತ್ತಾರೆ. ಬಳಕೆದಾರರ ಗೌಪ್ಯತೆ ಕಾಪಾಡಲಾಗಿದ್ದು, ಇಮೇಲ್ ಐಡಿ, ಫೋನ್ ನಂಬರ್ ಗಳು ಇತರರಿಗೆ ಕಾಣಿಸುವುದಿಲ್ಲ.