“ಅಮೃತ ಮಲಾಮು’ ಮಾಲೀಕ ಶೈಲೇಶ ಆತ್ಮಹತ್ಯೆ


Team Udayavani, Jun 5, 2018, 7:20 AM IST

suicidess.jpg

ಬೆಳಗಾವಿ: ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದ ಹಾಗೂ ವಿವಾಹ ವಿಚ್ಛೇದನದಿಂದ ನೊಂದಿದ್ದ ಬೆಳಗಾವಿಯ ಅಮೃತ ಫಾರ್ಮಾಸುÂಟಿಕಲ್ಸ್‌ ಕಂಪನಿ ಮಾಲೀಕ, ಉದ್ಯಮಿ ಶೈಲೇಶ ಶರದ ಜೋಶಿ (40) ತಮ್ಮ ಸ್ವಂತ ಪಿಸ್ತೂಲಿನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿ ವಿಜಯನಗರ ಬಳಿಯ ಗಣೇಶಪುರದ ಪೈಪ್‌ಲೈನ್‌ ರೋಡ್‌ನ‌ಲ್ಲಿರುವ ತಮ್ಮ ನಿವಾಸದಲ್ಲಿ ಶೈಲೇಶ ಜೋಶಿ ಸೋಮವಾರ ರಾತ್ರಿ 1:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಮೇ 18ರಂದು ವಿವಾಹ ವಿಚ್ಛೇದನವಾಗಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳು ಪುಣೆಯಲ್ಲಿ ನೆಲೆಸಿದ್ದಾರೆ. ಶೈಲೇಶ ತನ್ನ ತಾಯಿಯೊಂದಿಗೆ ಬೆಳಗಾವಿಯಲ್ಲಿ ನೆಲೆಸಿದ್ದರು.

ಡೆತ್‌ ನೋಟ್‌ನಲ್ಲೇನಿದೆ?: ಶೈಲೇಶ ಜೋಶಿ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ತನ್ನ ಇಬ್ಬರು ಮಕ್ಕಳಿಗೆ ಕ್ಷಮೆ ಕೇಳಿದ್ದಾರೆ. ನನ್ನ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಬಾರದು. ನನ್ನ ಆಸ್ತಿಯನ್ನು ಮಾರಾಟ ಮಾಡಬಾರದು. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ. ಮನೆಯಲ್ಲಿಯೇಮಧ್ಯರಾತ್ರಿ ಗುಂಡು ಹಾರಿಸಿಕೊಂಡಿದ್ದರಿಂದ ಶಬ್ಧ ಕೇಳಿ ಅಕ್ಕಪಕ್ಕದ ಜನ ಎದ್ದಿದ್ದಾರೆ. ಕೂಡಲೇ ನಗರದ ಕ್ಯಾಂಪ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ಶೈಲೇಶ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಲೈಸೆನ್ಸ್‌ ಪಿಸ್ತೂಲಿನಿಂದ ಶೂಟ್‌: ಹಿಂಡಲಗಾದಲ್ಲಿರುವ ಅಮೃತ ಫಾರ್ಮಾಸುÂಟಿಕಲ್ಸ್‌ ಕಂಪನಿ ನಡೆಸುತ್ತಿದ್ದ ಶೈಲೇಶ ಜೋಶಿ ತಿಂಗಳಿಂದ ಮಾನಸಿಕವಾಗಿ ತೀವ್ರ ನೊಂದಿದ್ದರು. ತಮ್ಮ ಹೆಸರಿನಲ್ಲಿ ಎರಡು ಪಿಸ್ತೂಲುಗಳ ಲೈಸೆನ್ಸ್‌ ಪಡೆದಿದ್ದರು. ಡಬಲ್‌ ಬ್ಯಾರೆಲ್‌ ಪಿಸ್ತೂಲು ಗನ್‌ ಅಂಗಡಿಯಲ್ಲಿ ಇಟ್ಟಿದ್ದರು. ಇನ್ನೊಂದು ಚಿಕ್ಕದಾದ 0.7 ಎಂಬ ರಿವಾಲ್ವಾರ್‌ ತಮ್ಮ ಮನೆಯಲ್ಲಿಯೇ ಇತ್ತು. ಇದೇ ಪಿಸ್ತೂಲಿನಿಂದ ಶೈಲೇಶ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಎಸ್‌.ಜಿ. ಪಾಟೀಲ, ಎಸಿಪಿ ಕಲ್ಯಾಣಶೆಟ್ಟಿ, ಕ್ಯಾಂಪ್‌ ಇನ್ಸ್‌ಪೆಕ್ಟರ್‌ ಪ್ರಕಾಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.ಮರಣೋತ್ತರ ಪರೀಕ್ಷೆ ಬಳಿಕ ಸದಾಶಿವ ನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಯುವ ಉದ್ಯಮಿಯಾಗಿದ್ದ
ಶೈಲೇಶ ಜೋಶಿ

ಕೋಟ್ಯಂತರ ರೂ. ವಹಿವಾಟು ನಡೆಸುತ್ತಿರುವ ಈ ಕಂಪನಿಯಲ್ಲಿ ನೂರಾರು ಜನ ಕೆಲಸ ನಿರ್ವಹಿಸುತ್ತಿದ್ದಾರೆ. 1938ರಲ್ಲಿ ಶೈಲೇಶನ ಅಜ್ಜಿ ಮಾಯಿ ಜೋಶಿ ಅವರು ಅಮೃತ ಫಾರ್ಮಾಸುÂಟಿಕಲ್ಸ್‌ ಆರಂಭಿಸಿದ್ದರು.ನಂತರ ಇವರ ತಂದೆ ಶರದ್‌ ಅವರು ಈ ಅಮೃತ ಮಲಾಮು ಬೆಳೆಸಿದರು. ಇದನ್ನು ಮುಂದುವರಿಸಿದ ಶೈಲೇಶ ಜೋಶಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದಲ್ಲಿ ಈ ಕಂಪನಿಯನ್ನು ಬೆಳೆಸಿದರು. ಇದರಿಂದ ಕೋಟ್ಯಂತರ ರೂ. ವಹಿವಾಟು ಇದೆ. ಶೈಲೇಶ ಜೋಶಿಗೆ ಭಾರತೀಯಉದ್ಯೋಗ ರತ್ನ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಅಮೃತ ಮಲಾಮು ಭಾರೀ ಫೇಮಸ್‌: ಅಮೃತ ಫಾರ್ಮಾಸುÂಟಿ ಕಲ್ಸ್‌ನಲ್ಲಿ ಅಮೃತ ಮಲಾಮು ಭಾರೀ ಫೇಮಸ್‌ ಆಗಿದೆ. ಅಮೃತ ಹೆಸರಿನಲ್ಲಿ ಅನೇಕ ಉತ್ಪನ್ನಗಳನ್ನು ಹೊರ ತರಲಾಗಿದೆ. 1938ರಲ್ಲಿ
ಆರಂಭಿಸಿರುವ ಕಂಪನಿಯನ್ನು ತಂದೆ ನಂತರ ಮಗ ಶೈಲೇಶ ಮುಂದುವರಿಸಿಕೊಂಡು ಬಂದಿದ್ದರು. ಈ ಮಲಾಮು ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿದೆ.

ಟಾಪ್ ನ್ಯೂಸ್

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.