ಬಂಡಿಪೋರಾ:ಭಾರೀ ಗುಂಡಿನ ಕಾಳಗ,ಸೈನಿಕ ಹುತಾತ್ಮ;ಉಗ್ರರಿಬ್ಬರ ಹತ್ಯೆ
Team Udayavani, Jun 14, 2018, 11:08 AM IST
ಶ್ರೀನಗರ : ದಕ್ಷಿಣ ಕಾಶ್ಮೀರದ ಬಂಡಿಪೋರಾದ ಪಾನಾರ್ ಅರಣ್ಯ ಪ್ರದೇಶದಲ್ಲಿ ಗುರುವಾರ ಸೇನಾ ಪಡೆಗಳು ಉಗ್ರರರೊಂದಿಗೆ ಭೀಕರ ಗುಂಡಿನ ಕಾಳಗ ನಡೆಸುತ್ತಿದ್ದು, ಓರ್ವ ಸೈನಿಕ ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.
ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು ಇನ್ನೂ ಕೆಲ ಉಗ್ರರು ಅಡಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.