ಪ್ರಿಯಾಂಕಾ ಮದುವೆ ವದಂತಿಗೆ ಮರು ಜೀವ
Team Udayavani, Jun 16, 2018, 9:00 AM IST
ಹೊಸದಿಲ್ಲಿ: ಕೆಲವು ವರ್ಷಗಳಿಂದ ಡೇಟಿಂಗ್ ನಲ್ಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ – ಅಮೆರಿಕದ ನಟ ನಿಕ್ ಜೋನ್ಸ್ ಮದುವೆ ಗುಸು ಗುಸು ಈಗ ಜೋರಾಗಿದೆ. ತಮ್ಮ ಸಂಬಂಧಿಕರ ಮದುವೆಗೆ ಪ್ರಿಯಾಂಕಾರನ್ನು ನಿಕ್ ಕರೆದುಕೊಂಡು ಹೋಗಿರುವುದು ಗಾಸಿಪ್ ಗಳಿಗೆ ಜೀವ ತುಂಬಿದೆ. ಪ್ರಿಯಾಂಕಾ ಅಭಿಮಾನಿಗಳೂ ಈ ಜೋಡಿಗೆ ನಿಕ್ – ಯಾಂಕಾ ಎಂದು ಕರೆಯಲು ಆರಂಭಿಸಿದ್ದಾರೆ.