ಕನ್ನಡ ಭಾಷೆಯಲ್ಲಿ ಸಿಟೆಸ್ಟ್ ಅಬಾಧಿತ
Team Udayavani, Jun 19, 2018, 10:20 AM IST
ಹೊಸದಿಲ್ಲಿ: ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ ನಡೆಸಲಾಗುವ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟೆಸ್ಟ್)ಯನ್ನು ಮುಂದುವರಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಕನ್ನಡ ಸೇರಿದಂತೆ 17 ಭಾಷೆಗಳಲ್ಲಿ ನಡೆಸಲಾಗುವ ಪರೀಕ್ಷೆ ರದ್ದು ಮಾಡುವ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ತೀರ್ಮಾನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಈ ನಿರ್ದೇಶನ ನೀಡಿದ್ದಾರೆ.
ತಮಿಳು, ಮಲಯಾಳಂ, ತೆಲುಗು, ಗುಜರಾತಿ, ಬಂಗಾಳಿ ಭಾಷೆಗಳು 17 ಭಾಷೆಗಳ ಪಟ್ಟಿಯಲ್ಲಿವೆ. ಸಿಬಿಎಸ್ಇ ನಿರ್ಧಾರದ ಬಗ್ಗೆ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿರ್ಧಾರದಿಂದ ವಿದ್ಯಾರ್ಥಿಗಳು ಬಲವಂತವಾಗಿ ಹಿಂದಿ, ಸಂಸ್ಕೃತ ಕಲಿಯಬೇಕಾಗುತ್ತದೆ ಎಂದು ಕನಿಮೋಳಿ ಬರೆದುಕೊಂಡಿದ್ದರು.