ವಿಮಾನದ ಇಂಜಿನ್ನಲ್ಲಿ ಬೆಂಕಿ: ಪಾರಾದ ಸೌದಿ ಫುಟ್ಬಾಲ್ ತಂಡ
Team Udayavani, Jun 19, 2018, 3:34 PM IST
ರೊಸ್ತೋವ್ ಆನ್ ಡಾನ್ : ಸೌದಿ ಅರೇಬಿಯದ ರಾಷ್ಟ್ರೀಯ ಫುಟ್ಬಾಲ್ ಸದಸ್ಯರ ತಂಡವನ್ನು ವಿಶ್ವ ಕಪ್ ಪಂದ್ಯ ನಡೆಯುವ ತಾಣಕ್ಕೆ ಒಯ್ಯುತ್ತಿದ್ದ ವಿಮಾನದ ಒಂದು ಇಂಜಿನ್°ಲ್ಲಿ ಬೆಂಕಿ ಕಾಣಿಸಿಕೊಂಡ ಹೊರತಾಗಿಯೂ ರಶ್ಯದ ರೊಸ್ತೋವ್ ಆನ್ ಡಾನ್ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯುವುದರೊಂದಿಗೆ ಫುಟ್ಬಾಲ್ ಆಟಗಾರರೆಲ್ಲ ಪಾರಾದರು.
ಆದರೆ ರೊಸ್ಸಿಯಾ ಏರ್ ಲೈನ್ ವಕ್ತಾರ ವಿಮಾನದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತೆಂಬುದನ್ನು ಅಲ್ಲಗಳೆದು ಹಕ್ಕಿ ಬಡಿತದಿಂದಾಗಿ ಕೇವಲ ತಾಂತ್ರಿಕ ದೋಷವಷ್ಟೇ ಕಾಣಿಸಿಕೊಂಡಿತ್ತು ಎಂದು ಹೇಳಿದರು.
ಸೌದಿ ಅರೇಬಿಯದ ರಾಷ್ಟ್ರೀಯ ಫುಟ್ಬಾಲ್ ತಂಡ ಉರುಗ್ವೇ ಎದುರಿನ ತಮ್ಮ ಎ ಬಣದ ಎರಡನೇ ಪಂದ್ಯವನ್ನು ಆಡಲು ಸೈಂಟ್ ಪೀಟರ್ಬರ್ಗ್ನಿಂದ ರೊಸ್ತೋವ್ ಆನ್ ಡಾನ್ಗೆ ರೊಸ್ಸಿಯಾ ಏರ್ ಲೈನ್ನ ಎ319 ಏರ್ಬಸ್ನಲ್ಲಿ ಪ್ರಯಾಣಿಸುತ್ತಿತ್ತು.
ವಿಮಾನವು ಇನ್ನೇನು ಲ್ಯಾಂಡ್ ಆಗಲಿದೆ ಎನ್ನುವಾಗ ಒಂದು ಇಂಜಿನ್ನಲ್ಲಿ ತಾಂತ್ರಿಕ ದೋಷ ಕಂಡು ಬಂತು; ಹಕ್ಕಿಯೊಂದು ಬಡಿದುದು ಕಂಡು ಬಂದು ಅದುವೇ ಪ್ರಾಥಮಿಕ ತಾಂತ್ರಿಕ ದೋಷಕ್ಕೆ ಕಾರಣವೆಂದು ಗೊತ್ತಾಯಿತು ಎಂದು ವಕ್ತಾರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ