ಉ.ಪ್ರ ಕಾಂಗ್ರೆಸ್ ವಕ್ತಾರ ಹುದ್ದೆಗೆ ಪರೀಕ್ಷೆ
Team Udayavani, Jun 30, 2018, 6:00 AM IST
ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ವಕ್ತಾರರ ಹುದ್ದೆಗೆ ಕಾಂಗ್ರೆಸ್ ಪರೀಕ್ಷೆ ನಡೆಸಿದೆ. ಈ ಹಿಂದೆ ಗುಜರಾತ್ ಹಾಗೂ ಕರ್ನಾಟಕದಲ್ಲಿ ಅನುಸರಿಸಿದ ಮಾದರಿಯನ್ನೇ ಇಲ್ಲೂ ಅನುಸರಿಸಲಾಗಿದ್ದು, 65ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪರೀಕ್ಷೆ ಬರೆದಿದ್ದಾರೆ. ಈಗಾಗಲೇ ವಕ್ತಾರರಾಗಿದ್ದವರೂ ಹಾಜರಾಗಿದ್ದರು.
ಪ್ರಶ್ನೆಗಳನ್ನು ಓದಿ ಗೊಂದಲಕ್ಕೊಳ ಗಾಗಿದ್ದ ಅಭ್ಯರ್ಥಿಗಳು ಪರಸ್ಪರ ಚರ್ಚೆ ನಡೆಸುತ್ತಿರುವುದೂ ಕಂಡುಬಂತು ಎಂದು ಹೇಳಲಾಗಿದೆ. ಕಾಂಗ್ರೆಸ್ನ ಈ ಕ್ರಮವನ್ನು ಬಿಜೆಪಿ ಟೀಕಿಸಿದ್ದು, ದೇಶದ ವಿವಿಧೆಡೆ ನಡೆದ ಚುನಾವಣೆಯ ಪರೀಕ್ಷೆಯಲ್ಲಿ ಕಾಂಗ್ರೆಸ್ಸನ್ನೇ ಜನರು ಫೇಲ್ ಮಾಡಿದ್ದಾರೆ. ವಕ್ತಾರರು ಇನ್ನೇನು ಮಾಡಲು ಸಾಧ್ಯ ಎಂದು ಬಿಜೆಪಿ ವಕ್ತಾರ ಚಂದ್ರಮೋಹನ್ ಹೇಳಿದ್ದಾರೆ.