ಅಂಧರಿಗಾಗಿಯೇ ಬರುತ್ತಿದೆ “ಬೆಳಕು’ ಪತ್ರಿಕೆ

Team Udayavani, Jun 30, 2018, 6:50 AM IST

news-paper.jpg

ಧಾರವಾಡ: ಪ್ರಸ್ತುತ ದಿನಮಾನದ ಘಟನೆ, ಸಾಹಿತ್ಯ ವಲಯ ಸೇರಿ ವಿವಿಧ ಕ್ಷೇತ್ರದಲ್ಲಿನ ಬೆಳವಣಿಗೆ ಬಗ್ಗೆ ಅಂಧರೂ ಸಹ ಇದೀಗ ಪತ್ರಿಕೆ ಓದಿ ತಿಳಿದುಕೊಳ್ಳುವ ಕಾಲ ಸನ್ನಿಹಿತವಾಗಿದೆ.

ಈ ಹಿಂದೆ ಬೇರೆಯವರಿಂದ ಪತ್ರಿಕೆ ಓದಿಸಿ ಕೇಳುತ್ತಿದ್ದ ಅಂಧರೂ ಈಗ ತಾವೇ ಪತ್ರಿಕೆ ಓದಿ ಪ್ರಸ್ತುತ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಅದಕ್ಕಾಗಿಯೇ ಧಾರವಾಡದ ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ ಅಂಧರಿಗಾಗಿಯೇ ವಿಶೇಷವಾಗಿ ರೂಪಿಸಿರುವ ಬ್ರೈಲ್‌ ಲಿಪಿ ಒಳಗೊಂಡ “ಬೆಳಕು’ ಹೆಸರಿನ ದ್ವೈಮಾಸಿಕ ಪತ್ರಿಕೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ.

ನೂರು ಪುಟಗಳ ಪತ್ರಿಕೆ: ನೂರು ಪುಟಗಳನ್ನು ಒಳಗೊಂಡಿರುವ ಈ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ, ಶ್ರೇಷ್ಠ ಸಾಹಿತಿಗಳ ಕಿರು ಪರಿಚಯ, ಪ್ರಾಚೀನ ಸಾಹಿತ್ಯದಲ್ಲಿರುವ ಕಥೆ, ಕವನ, ಚರಿತ್ರೆ, ಅಂಧ ಸಾಧಕರ ಅಂಕಣ, ಪ್ರಚಲಿತ ವಿದ್ಯಮಾನಗಳು,ಆಧುನಿಕ ಸಾಹಿತ್ಯ, ಕಾನೂನು ಪರಿಚಯ,ವ್ಯಕ್ತತ್ವ ವಿಕಸನ, ಪ್ರವಾಸ ಕಥನ ಸೇರಿ 25ಕ್ಕೂ
ಹೆಚ್ಚು ವಿಭಾಗದ ವಿವಿಧ ವಿಷಯ ಇರಲಿದೆ. ಅಂಧ ಮಕ್ಕಳಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ 50 ಅಂಧ ಮಕ್ಕಳ ಶಾಲೆಗಳಿಗೆ, ರಾಜ್ಯದ 40ಕ್ಕೂ ಹೆಚ್ಚು ಕಾಲೇಜುಗಳಿಗೆ “ಬೆಳಕು’ ಉಚಿತವಾಗಿ ಪೂರೈಸಲು ಯೋಜನೆ ರೂಪಿಸಲಾಗಿದೆ. ಆಸಕ್ತರು 150 ರೂ. ವಾರ್ಷಿಕ ಚಂದಾ ಪಾವತಿಸಿ ಪತ್ರಿಕೆ ಪಡೆಯಬಹುದಾಗಿದೆ.

ಸಂಪಾದಕ ಮಂಡಳಿ: ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ ಸಂಸ್ಥೆಯ ಧಾರವಾಡ ಶಾಖೆಯ ಸಂಚಾಲಕ
ರಾಮಚಂದ್ರ ಧೋಂಗಡೆ ಸಂಪಾದಕ, ಡಾ.ಚಿಲುಮಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಲಿದ್ದು, ಈ ಪತ್ರಿಕೆಗೆ ಸಲಹೆ, ಮಾರ್ಗದರ್ಶನ ನೀಡಲು ಸಂಪಾದಕ ಮಂಡಳಿ ರಚಿಸಲಾಗಿದೆ. ಮಕ್ಕಳ ಸಾಹಿತಿ ಡಾ.ಆನಂದ ಪಾಟೀಲ ಗೌರವ ಸಂಪಾದಕ ಸ್ಥಾನ ಪಡೆದಿದ್ದು, ಮಂಡಳಿ ಸದಸ್ಯರಾಗಿ ಸಾಹಿತಿಗಳಾದ ಮಲ್ಲಿಕಾರ್ಜುನ ಹಿರೇಮಠ, ಡಾ.ಬಾಳಣ್ಣ ಶೀಗಿಹಳ್ಳಿ, ಅಂಧ ಕವಿ ಬಾಪೂ ಖಾಡೆ, ಪ್ರತಿಷ್ಠಾನ ಅಧ್ಯಕ್ಷ ವಿ.ನರಸಿಂಹಯ್ಯ ಕಾರ್ಯ ನಿರ್ವಹಿಸಲಿದ್ದಾರೆ.

ಪ್ರತಿಷ್ಠಾನದಿಂದಲೇ ವೆಚ್ಚ: ಈ ಪತ್ರಿಕೆಯ ಒಂದು ಪುಟಕ್ಕೆ ನಾಲ್ಕು ರೂ. ವೆಚ್ಚ ತಗಲಿದ್ದು, ಅದರಂತೆ ನೂರು ಪುಟಗಳ ಪತ್ರಿಕೆಯ ಒಂದು ಪ್ರತಿಗೆ 400 ರೂ. ವೆಚ್ಚ ಆಗಲಿದೆ. ಈ ವೆಚ್ಚವನ್ನು ಪ್ರತಿಷ್ಠಾನವೇ ಭರಿಸಲಿದೆ.

ಸದ್ಯ ಜು.15ರಂದು ಪತ್ರಿಕೆಯ ಮೊದಲ ಸಂಚಿಕೆ ಲೋಕಾರ್ಪಣೆಯಾಗಲಿದೆ. ಅದಕ್ಕಾಗಿ ನೂರು ಪ್ರತಿ
ಸಿದ್ಧಪಡಿಸಲಾಗುತ್ತಿದೆ. ಪತ್ರಿಕೆಯ ಮೊದಲ ಸಂಚಿಕೆಯ ರೂಪರೇಷೆ ಸಿದ್ಧಗೊಂಡಿದೆ. ಜು.4ರಂದು ಬ್ರೈಲ್‌ಲಿಪಿಯ ಮುದ್ರಣಕ್ಕೆ ಚಾಲನೆ ಸಿಗಲಿದೆ. ಜು.15ರಂದು ಗಣ್ಯರಿಂದ ಲೋಕಾರ್ಪಣೆ ಮಾಡಿಸಲು ಉದ್ದೇಶಿಸಲಾಗಿದೆ. ಅಂಧರ ಶಾಲೆ-ಕಾಲೇಜುಗಳಿಗೆ ಉಚಿತ ಪೂರೈಸಲಿರುವ ಈ ಪತ್ರಿಕೆಗೆ ಆಸಕ್ತ ಅಂಧರು ಹಾಗೂ ಸಂಘ-ಸಂಸ್ಥೆಗಳು 150 ರೂ. ಆಕರಣೆ ಮಾಡಿ ವಾರ್ಷಿಕ ಚಂದಾದಾರರಾಗುವ ಮೂಲಕ “ಬೆಳಕು’ ವಿಸ್ತರಿಸಲು ಕೈ ಜೋಡಿಸಬೇಕಿದೆ.

ವಚನ ವರ್ಷ’ವೂ ಸಿದ್ಧ
ಖ್ಯಾತ ಸಂಶೋಧಕ ಡಾ| ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾದ ಬಳಿಕ ಬಿಡುಗಡೆಯಾದ ಅವರ “ವಚನ ವರ್ಷ’
ಪುಸ್ತಕವೂ ಬ್ರೈಲ್‌ ಲಿಪಿಯಲ್ಲಿ 50 ಪ್ರತಿ ಸಿದ್ಧವಾಗಿವೆ. ಬಸವಣ್ಣರ ಆಯ್ದ 108 ವಚನಗಳ ಸಂಗ್ರಹದ ಬ್ರೈಲ್‌ ಲಿಪಿಯ
ಒಳಗಣ್ಣಿಗೊಂದು ಬೆಳಕು (ಬಸವವಚನಾಮೃತ) 50 ಪ್ರತಿಯನ್ನು ಸಿದ್ಧ ಮಾಡಿಕೊಳ್ಳಲಾಗಿದೆ.

ಎರಡು ತಿಂಗಳಿಗೊಮ್ಮೆ ವರ್ಷಕ್ಕೆ ಆರು ಸಂಚಿಕೆ ಮುದ್ರಣಗೊಳ್ಳಲಿದೆ. ಸದ್ಯ ಅಂಧ ಶಾಲೆಗಳಿಗೆ ಉಚಿತವಾಗಿ
ಪೂರೈಸಲು ಯೋಜನೆ ರೂಪಿಸಲಾಗಿದೆ. ಪತ್ರಿಕೆಗೆ ಪ್ರೋತ್ಸಾಹ ಅಗತ್ಯವಿದೆ.

– ರಾಮಚಂದ್ರ ಧೋಂಗಡೆ, ಸಂಚಾಲಕ,
ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ

– ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.