ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಕಕ್ಕೆ ಸಪ್ತ ಮಠಾಧೀಶರ ಆಗ್ರಹ?

Team Udayavani, Jul 4, 2018, 3:55 AM IST

krishna-mutt-udupi-600.jpg

ಉಡುಪಿ: ಉಡುಪಿ ಅಷ್ಟಮಠಗಳೊಳಗೆ ಉಂಟಾಗಿರುವ ಹೊಸ ಬೆಳವಣಿಗೆಯಲ್ಲಿ ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಿಸಲು ಇತರ ಏಳು ಮಠಾಧೀಶರು ಆಗ್ರಹಿಸಿದ್ದು, ಇಲ್ಲವಾದರೆ ಶೀರೂರು ಮಠದ ಪಟ್ಟದ ದೇವರನ್ನು ಹಿಂದಿರುಗಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಶೀರೂರು ಶ್ರೀಗಳ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ, ಹೇಳಿಕೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಅಷ್ಟಮಠಗಳ ಕೆಲವೊಂದು ನಿಯಮಕ್ಕೆ ಒಳಪಟ್ಟು ಶೀರೂರು ಶ್ರೀಗಳನ್ನು ಹೊರತುಪಡಿಸಿ ಇತರ ಏಳು ಮಠಾಧೀಶರೂ ಹಲವು  ಸಭೆ ನಡೆಸಿದ್ದರು. ಕೆಲವು ಸಭೆಗಳಲ್ಲಿ ವಿದೇಶದಲ್ಲಿದ್ದ ಪುತ್ತಿಗೆ ಸ್ವಾಮೀಜಿ, ಸಂಚಾರದಲ್ಲಿದ್ದ ಪೇಜಾವರ ಸ್ವಾಮೀಜಿ, ಶೀರೂರು ಸ್ವಾಮೀಜಿಯವರೂ ಪಾಲ್ಗೊಂಡಿದ್ದರು. ಒಬ್ಬರು ಸ್ವಾಮೀಜಿಯವರು ಈ ಬಗ್ಗೆ ಶೀರೂರು ಶ್ರೀ ಜತೆಗೆ ಮಾತುಕತೆ ನಡೆಸಿ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ ಕಾರಣ ಇತರ ಮಠಾಧೀಶರು ಮಾಧ್ಯಮಗಳಿಗೆ ನೇರ ಹೇಳಿಕೆ ನೀಡುವುದನ್ನು ನಿಲ್ಲಿಸಿದ್ದರು. ಆದರೆ ಇದಾವುದೂ ಫ‌ಲಕಾರಿಯಾಗಿಲ್ಲ ಎನ್ನಲಾಗಿದೆ. ಇತ್ತೀಚೆಗಿನ ಸಭೆ ರವಿವಾರ ನಡೆದಿದೆ.

ಅಷ್ಟ ಮಠಗಳ ನಿಯಮಾನುಸಾರ ಆಯಾ ಮಠದ ಪಟ್ಟದ ದೇವರ ಪೂಜೆಯನ್ನು ಅದೇ ಮಠದ ಸ್ವಾಮೀಜಿ ನಡೆಸಬೇಕು. ಇಲ್ಲವಾದರೆ ಇತರ ಮಠಗಳಲ್ಲಿ ಒಬ್ಬರು ಮಾಡಬೇಕು. ಸ್ವಲ್ಪ ಸಮಯದಿಂದ ಶೀರೂರು ಮಠದ ಪಟ್ಟದ ದೇವರು ಶ್ರೀಕೃಷ್ಣ ಮಠದಲ್ಲಿ ಇತರ ಮಠಾಧೀಶರಿಂದ ಪೂಜೆಗೊಳ್ಳುತ್ತಿದೆ. ಈಗ ಜವಾಬ್ದಾರಿಯುತ ಕಿರಿಯ ಸ್ವಾಮೀಜಿಯವರನ್ನು ಪೀಠಕ್ಕೆ ನೇಮಿಸುವುದಾದರೆ ಮಾತ್ರ ಪಟ್ಟದ ದೇವರನ್ನು ಕೊಡುವುದಾಗಿ ಇತರ ಮಠಾಧೀಶರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೇಜಾವರ ಹಿರಿಯ ಶ್ರೀಪಾದರು ‘ನಾವು ಉಡುಪಿಯಲ್ಲಿ ಸದಾ ಕಾಲ ಇರುವುದಿಲ್ಲ. ಆದ್ದರಿಂದ ಇದರ ಬಗ್ಗೆ ಇತರ ಸ್ವಾಮೀಜಿಯವರು ನೋಡಿಕೊಳ್ಳುತ್ತಾರೆ’ ಎಂದು ಪ್ರತಿಕ್ರಿಯೆ ನೀಡಿದರು.

ಉತ್ತರಾಧಿಕಾರಿಯನ್ನು ನೇಮಿಸುವುದಾದರೂ ದ್ವಂದ್ವ ಮಠವಾದ ಸೋದೆ ಮಠಾಧೀಶರು ನೇಮಿಸಬೇಕು. ಆದರೆ ಇದಕ್ಕೆ ಶೀರೂರು ಸ್ವಾಮೀಜಿ ಒಪ್ಪುತ್ತಿಲ್ಲ ಎನ್ನಲಾಗಿದೆ. ಪರ್ಯಾಯ ಪಲಿಮಾರು ಸ್ವಾಮೀಜಿಯವರು ನೇಮಿಸಿದರೆ ಒಪ್ಪಬಹುದೆಂದು ಹೇಳಲಾಗುತ್ತಿದೆ. ‘ನಮ್ಮೊಳಗೆ ಬಗೆಹರಿಸಿಕೊಳ್ಳುತ್ತೇವೆ. ಇಲ್ಲವಾದರೆ ಕಾನೂನಿನ ಮೊರೆ ಹೋಗುತ್ತೇವೆ’ ಎಂದು ಸುದ್ದಿಗಾರರಿಗೆ ಶೀರೂರು ಸ್ವಾಮೀಜಿ ತಿಳಿಸಿದರು.

ಮಂಗಳವಾರ ಬೇರೆ ಪತ್ರಿಕಾಗೋಷ್ಠಿಯ ಸಂದರ್ಭ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರು, ‘ಶೀರೂರು ಮಠದ ಪಟ್ಟದ ದೇವರಿಗೆ ನಾವು ಪೂಜೆ ಮಾಡುತ್ತಿದ್ದೇವೆ. ಮುಂದೆ ಏನು ಮಾಡಬೇಕೆಂದು ನಿರ್ಧಾರವಾಗಿಲ್ಲ. ಪೇಜಾವರ ಶ್ರೀಗಳೊಂದಿಗೆ ಚರ್ಚಿಸಿ ನಿರ್ಣಯ ತಳೆಯುತ್ತೇವೆ’ ಎಂದರು. ಪುತ್ತಿಗೆ ಶ್ರೀಗಳ ವಿಚಾರ ಕೇಳಿದಾಗ ‘ಅದು ಬೇರೆ ತೆರನಾದ ವಿಷಯ’ ಎಂದರು.

ಟಾಪ್ ನ್ಯೂಸ್

9-muddebihala

SSLC Result: ರಾಜ್ಯಕ್ಕೆ 3, ಜಿಲ್ಲೆಗೆ ಮೊದಲ ಸ್ಥಾನ ಪಡೆದ ಪವಿತ್ರಾ

IPL 2024; Trending Come to RCB: What happened to the LSG team ?

IPL 2024; ಟ್ರೆಂಡ್ ಆಗುತ್ತಿದೆ Come to RCB: ಅಷ್ಟಕ್ಕೂ ಎಲ್ಎಸ್ ಜಿ ತಂಡದಲ್ಲಿ ಆಗಿದ್ದೇನು?

8-sirsi

Sirsi: ಒಂದೇ ಊರಿನ ಇಬ್ಬರಿಗೆ 2ನೇ, 5ನೇ ರ‍್ಯಾಂಕ್

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Pendrive case; ಪ್ರತ್ಯೇಕ ಸ್ಥಳದಲ್ಲಿ ನ್ಯಾಯಾಲಯ ವಿಚಾರಣೆ ನಡೆಸಲು ಪತ್ರ; ಎಚ್.ಕೆ.ಪಾಟೀಲ

Pendrive case; ಪ್ರತ್ಯೇಕ ಸ್ಥಳದಲ್ಲಿ ನ್ಯಾಯಾಲಯ ವಿಚಾರಣೆ ನಡೆಸಲು ಪತ್ರ; ಎಚ್.ಕೆ.ಪಾಟೀಲ

ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ: ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ: ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಕೇಸ್: ಇಬ್ಬರ ಬಂಧನ

Ramanagara ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಕೇಸ್: ಇಬ್ಬರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ನಾಳೆ ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಏಷ್ಯಾ ಯೂನಿವರ್ಸಿಟಿ ಮಾಹೆ ವಿವಿಗೆ ಉನ್ನತ ಶ್ರೇಯಾಂಕ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Brahmavar ಬಾವಿಗಿಳಿದ ಓರ್ವ ಸಾವು, ಇನ್ನೋರ್ವನ ರಕ್ಷಣೆ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Karkala: ಸುಡುಮದ್ದು ಘಟಕದಲ್ಲಿ ಸ್ಫೋಟ; ಓರ್ವ ಮಹಿಳೆ ಸೇರಿ ಇಬ್ಬರಿಗೆ ಗಾಯ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

Malpe Beach: ಲೈಫ್‌ಗಾರ್ಡ್‌ ಮೇಲೆ ಹಲ್ಲೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

9-muddebihala

SSLC Result: ರಾಜ್ಯಕ್ಕೆ 3, ಜಿಲ್ಲೆಗೆ ಮೊದಲ ಸ್ಥಾನ ಪಡೆದ ಪವಿತ್ರಾ

Kannada Cinema; ರಾಜಕಾರಣದ ಸುತ್ತ ‘ಭಗೀರಥ’; ಟೀಸರ್ ರಿಲೀಸ್

Kannada Cinema; ರಾಜಕಾರಣದ ಸುತ್ತ ‘ಭಗೀರಥ’; ಟೀಸರ್ ರಿಲೀಸ್

IPL 2024; Trending Come to RCB: What happened to the LSG team ?

IPL 2024; ಟ್ರೆಂಡ್ ಆಗುತ್ತಿದೆ Come to RCB: ಅಷ್ಟಕ್ಕೂ ಎಲ್ಎಸ್ ಜಿ ತಂಡದಲ್ಲಿ ಆಗಿದ್ದೇನು?

8-sirsi

Sirsi: ಒಂದೇ ಊರಿನ ಇಬ್ಬರಿಗೆ 2ನೇ, 5ನೇ ರ‍್ಯಾಂಕ್

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.