ಹೊಸಬರ ಕೌರ್ಯಕ್ಕೆ ಚಾಲನೆ, ಟೀಮ್‌ ಶಂಕರ್‌ನಾಗ್‌ ತಂಡದ ಹೊಸ ಚಿತ್ರ

Team Udayavani, Jul 16, 2018, 2:00 PM IST

kourya108.jpg

ಈ ಹಿಂದೆ “ಟೀಮ್‌ ಶಂಕರ್‌ನಾಗ್‌’ ಹೆಸರಿನ ತಂಡವೊಂದು ಸಿನಿಮಾ ಸಂಬಂಧಿಸಿದ ಕೆಲ ಪ್ರಚಾರ ಕಾರ್ಯ ಶುರುವಿಟ್ಟುಕೊಳ್ಳುವ ಮೂಲಕ ಒಂದು ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿತ್ತು. ಆ ಕುರಿತು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಬರೋಬ್ಬರಿ ಮೂರು ವರ್ಷಗಳ ಬಳಿಕ ಟೀಮ್‌ ಶಂಕರ್‌ನಾಗ್‌ ತಂಡ ಹೀಗೊಂದು ಹೊಸ ಚಿತ್ರಕ್ಕೆ ಕೈ ಹಾಕಿದೆ. ಅಷ್ಟೇ ಅಲ್ಲ, ಸದ್ದಿಲ್ಲದೆ ಆ ಚಿತ್ರಕ್ಕೆ ಚಾಲನೆಯನ್ನೂ ಕೊಟ್ಟಿದೆ. ಆ ಚಿತ್ರದ ಹೆಸರು “ಕೌರ್ಯ’. ಈ ಚಿತ್ರದ ಮೂಲಕ ಅನಿಲ್‌ ನಿರ್ದೇಶಕರಾಗುತ್ತಿದ್ದಾರೆ.

 ಕೈಯಲ್ಲಿದ್ದ ಕೆಲಸ ಬಿಟ್ಟು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವ ಅನಿಲ್‌ ಜೊತೆಗೆ ನಿರ್ದೇಶನದಲ್ಲಿ ಸುರೇಶ್‌ ಕೂಡ ಸಾಥ್‌ ನೀಡುತ್ತಿದ್ದಾರೆ. ಇನ್ನು, ನವೀನ್‌ ತೀರ್ಥಹಳ್ಳಿ ಈ ಚಿತ್ರದ ಹೀರೋ. ಹೊಸಬರ ಈ ತಂಡಕ್ಕೆ ಲೀಲ ಮೋಹನ್‌ ಬೆನ್ನೆಲುಬು. ಅಂದರೆ, “ಕೌರ್ಯ’ ಚಿತ್ರದ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಹೊಂದಿರುವ ಚಿತ್ರ. ರಾಬರಿ, ಮರ್ಡರ್‌ ಮಿಸ್ಟ್ರಿ ಕೂಡ ಇಲ್ಲಿರಲಿದೆ. ಪಕ್ಕಾ ಮಾಸ್‌ ಅಂಶಗಳೊಂದಿಗೆ ಚಿತ್ರ ಕಥೆ ಸಾಗಲಿದ್ದು, ಇಲ್ಲಿ ಸಾಕಷ್ಟು ಏರಿಳಿತಗಳು ಚಿತ್ರದ ಹೈಲೆಟ್‌. ಈಗಿನ ಜನರೇಷನ್‌ಗೆ ತಕ್ಕ ಕಥೆ ಇಲ್ಲಿದೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರ ಮಾಡಬೇಕು ಅಂತ ನಿರ್ದೇಶಕರು ಮೂರು ವರ್ಷಗಳಿಂದಲೂ ತಯಾರಿ ನಡೆಸುತ್ತಲೇ ಇದ್ದದ್ದಕ್ಕೆ ಈಗ ಆ ಕಾಲ ಕೂಡಿಬಂದಿದೆ. ಆಗಸ್ಟ್‌ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶಂಕರ್‌ನಾಗ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್‌ ಅಥವಾ ಟ್ರೇಲರ್‌ ರಿಲೀಸ್‌ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
ಈ ಚಿತ್ರದ ನಾಯಕ ನವೀನ್‌ ತೀರ್ಥಹಳ್ಳಿ ಇದಕ್ಕಾಗಿಯೇ ಸಾಕಷ್ಟು ಶ್ರಮಪಟ್ಟಿದ್ದಾರಂತೆ. ಮಾರ್ಷಲ್‌ ಆರ್ಟ್ಸ್ ತರಬೇತಿಯಲ್ಲಿ ಪಕ್ವಗೊಂಡು, ಚಿತ್ರಕ್ಕೆ ಅಣಿಯಾಗಿದ್ದಾರೆ. 

“ಕೌರ್ಯ’ ತಡವಾದರೂ, ಪ್ರಯತ್ನ ಬಿಡದ ನವೀನ್‌ ತೀರ್ಥಹಳ್ಳಿ, ಈಗ ಒಳ್ಳೆಯ ತಂಡದ ಜೊತೆ ಕೆಲಸ ಮಾಡಲು ಉತ್ಸುಕತೆಯಲ್ಲಿದ್ದಾರೆ. ಇನ್ನು, ಈ ಚಿತ್ರಕ್ಕೆ ನೈನಾ (ನಯನಾ) ನಾಯಕಿ. ಇವರಿಗೆ ಇದು ಮೊದಲ ಚಿತ್ರ. ಈಗಷ್ಟೇ ಪದವಿ ಮುಗಿಸಿರುವ ಅವರಿಗೆ ಇದು ಹೊಸ ಅನುಭವ. ಚಿತ್ರಕ್ಕೆ ಪೌಲ್‌ ಛಾಯಾಗ್ರಹಣ ಮಾಡಿದರೆ, ವಿನೋದ್‌ ಮತ್ತು ಸುದಾನ್‌ ಸಂಗೀತ ನೀಡುತ್ತಿದ್ದಾರೆ. 

ಚಿತ್ರದಲ್ಲಿ ಶಶಾಂಕ್‌ ಎಂಬ ಹೊಸ ಪ್ರತಿಭೆ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಚಿತ್ರದ ಬರವಣಿಗೆಯಲ್ಲಿ ಪೂಜಾ, ಶ್ರೀನಿವಾಸ್‌, ರಮ್ಯಾ, ಕೈಫ್ ಅವರ ಸಹಕಾರವಿದೆ.

ಟಾಪ್ ನ್ಯೂಸ್

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.