ಕಲಬೆರಕೆ ತುಪ್ಪ : ವ್ಯಾಪಾರಿಗೆ 10 ವರ್ಷ ಜೈಲು, 20,000 ರೂ. ದಂಡ
Team Udayavani, Jul 17, 2018, 11:43 AM IST
ಮುಜಫರನಗರ : ಕಲಬೆರಕೆ ತುಪ್ಪ ಪೂರೈಸಿದ ವ್ಯಾಪಾರಿಗೆ ಕೈರಾನಾ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾದೀಶ ರಜತ್ ವರ್ಮಾ ಅವರು ಆರೋಪಿ ಜಮ್ಶೇದ್ ಗೆ 10 ವರ್ಷ ಜೈಲು ಶಿಕ್ಷೆಯೊಂದಿಗೆ 20,000 ರೂ. ದಂಡವನ್ನೂ ವಿಧಿಸಿ ತೀರ್ಪು ನೀಡಿದರು.
2011ರಲ್ಲಿ ಪೊಲೀಸರು ಜಮ್ಶೇದ್ಗೆ ಸೇರಿದ ಸುಮಾರು 35 ಕೆಜಿ ತುಪ್ಪವನ್ನು ಶಾಮ್ಲಿ ಜಿಲ್ಲೆಯಲ್ಲಿ ವಶಪಡಿಸಿಕೊಂಡು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಅದು ಕಲಬೆರಕೆ ತುಪ್ಪ ಎಂದು ಸಾಬೀತಾಗಿತ್ತು ಎಂದು ಸರಕಾರಿ ವಕೀಲ ಜಾವೇದ್ ಚೌಧರಿ ಕೋರ್ಟಿಗೆ ತಿಳಿಸಿದರು.