500 ಮಂದಿಗೆ ಒಬ್ಬ ಪೌರಕಾರ್ಮಿಕ

Team Udayavani, Jul 20, 2018, 2:11 PM IST

bbmp.png

ಬೆಂಗಳೂರು: ಪ್ರತಿ 500 ನಾಗರಿಕರಿಗೆ ಒಬ್ಬ ಪೌರಕಾರ್ಮಿಕನನ್ನು ನೇಮಿಸುವ ನಿಯಮ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ, ಈ ಮೂಲಕ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿರುವ ಸುಮಾರು 8000 ಮಂದಿಯನ್ನು ರಕ್ಷಿಸುವಂತೆ
ಒತ್ತಾಯಿಸಿದ್ದಾರೆ. ಇದರೊಂದಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ 11 ಸಾವಿರ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವಾಗ, ತಲೆ ತಲಾಂತರದಿಂದ ಈ ಕೆಲಸ ಮಾಡಿಕೊಂಡು ಬಂದಿರುವ ಕುಟುಂಬಗಳು ಮತ್ತು ಹಾಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಆದ್ಯತೆ ನೀಡಲು ನಿಯಮಾವಳಿ ತಿದ್ದುಪಡಿ ಮಾಡುವಂತೆಯೂ ಅವರು ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಪೌರ ಕಾರ್ಮಿಕರಸಮಸ್ಯೆಗಳ ಕುರಿತಂತೆ ನಗರಾಭಿವೃದ್ಧಿ, ಪೌರಾಡಳಿತ ಇಲಾಖೆ ಮತ್ತು ಬಿಬಿಎಂಪಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 42 ಸಾವಿರ ಪೌರ ಕಾರ್ಮಿಕರಿದ್ದಾರೆ. ಪ್ರಸ್ತುತ ಪ್ರತಿ 700 ಮಂದಿಗೆ ಒಬ್ಬ ಪೌರಕಾರ್ಮಿಕ ಎಂಬ ನಿಯಮ ಜಾರಿಯಲ್ಲಿರುವ ಕಾರಣ ಎಂಟು ಸಾವಿರ ಮಂದಿ ಕೆಲಸ ಕಳೆದುಕೊಳ್ಳುವಆತಂಕದಲ್ಲಿದ್ದಾರೆ. ಹೀಗಾಗಿ ಪೌರಕಾರ್ಮಿಕರಿಗೆ ಸಂಬಂಧಿಸಿದಂತೆ ಐಪಿಡಿ ಸಾಲಪ್ಪ ಅವರು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದಾಗ ನೀಡಿದ್ದ ವರದಿ ಆಧರಿಸಿ 500 ಮಂದಿಗೆ ಒಬ್ಬ ಪೌರ ಕಾರ್ಮಿಕ ಎಂಬ ನಿಯಮ ರೂಪಿಸುವಂತೆ
ಸೂಚಿಸಿರುವುದಾಗಿ ತಿಳಿಸಿದರು. ನಗರ ಸ್ಥಳೀಯ ಸಂಸ್ಥೆಗಳಿಗೆ ಪೌರ ಕಾರ್ಮಿಕರನ್ನುನೇಮಕ ಮಾಡಿಕೊಳ್ಳುವಾಗ, ಎರಡು ವರ್ಷ ಇದೇ ಕೆಲಸ ಮಾಡಿಕೊಂಡಿರುವ ಬಗ್ಗೆ ಇಎಸ್‌ಐ ಮತ್ತು nಪಿಎಫ್ ದಾಖಲೆಗಳನ್ನು ನೀಡಬೇಕು ಎಂಬ ನಿಯಮವನ್ನು ಸಡಿಲಗೊಳಿಸಬೇಕು. ಪೌರ ಕಾರ್ಮಿಕರ ನೇಮಕಾತಿಯಲ್ಲಿನ ಮೀಸಲಾತಿ ತೆಗೆದು
ಸಫಾಯಿ ಕರ್ಮಚಾರಿ ಸಮುದಾಯದವರಿಗೆ ಅವಕಾಶ ಮಾಡಿಕೊಡಬೇಕು. ರಾಜ್ಯಾದ್ಯಂತ ಪೌರ ಕಾರ್ಮಿಕರಾಗಿ ದುಡಿಯುತ್ತಿರುವವರ ಪೈಕಿ 22 ಸಾವಿರ ಮಂದಿಗೆ ಮನೆ ಇಲ್ಲ. ಹೀಗಾಗಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಮುಂದಿನ ಎರಡು ವರ್ಷದಲ್ಲಿ ಇವರೆಲ್ಲರಿಗೂ ಮನೆ ಒದಗಿಸುವಂತೆಯೂ ಸರ್ಕಾರಕ್ಕೆ ಶಿಫಾರಸು
ಮಾಡಲಾಗಿದೆ ಎಂದರು. ಭಂಗಿ ಸಮುದಾಯಕ್ಕೆ ಮನೆ ಕೊಡಿ: ಈ ಹಿಂದೆ ಮಲ ಹೊರುವ ಕೆಲಸ ಮಾಡುತ್ತಿದ್ದ ಭಂಗಿ ಸಮುದಾಯಕ್ಕೆ ಈವರೆಗೆ 3000 ಮನೆಗಳನ್ನು ನಿರ್ಮಿಸಿಕೊಟ್ಟಿದ್ದು, ಹಕ್ಕುಪತ್ರ ನೀಡಿಲ್ಲ. ಇದೀಗ ಆ
ಎಲ್ಲಾ ಮನೆಗಳು ಶಿಥಿಲಗೊಂಡಿದ್ದು, ಹಕ್ಕುಪತ್ರ ಇಲ್ಲದೆ ಹೊಸ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗು ತ್ತಿಲ್ಲ. ಆದ್ದರಿಂದ ಅವರಿಗೆ ಹಕ್ಕುಪತ್ರ ನೀಡಿ ಮನೆ ಕಟ್ಟಿಕೊಳ್ಳ ಲು ಸಹಕರಿಸಬೇಕು ಎಂದು ಹೇಳಿದರು

ಸಿಬಿಐ ತನಿಖೆಗೆ ವಹಿಸಲು ಶಿಫಾರಸು
ಬಿಬಿಎಂಪಿ ವ್ಯಾಪ್ತಿಯಲ್ಲಿ ನಕಲಿ ಪೌರ ಕಾರ್ಮಿಕರ ನೇಮಕ ಮತ್ತು ಪೌರ ಕಾರ್ಮಿಕರ ಭವಿಷ್ಯನಿಧಿ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸುವಂತೆ ಜಗದೀಶ್‌ ಹಿರೇಮನಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅಕ್ರಮವಾಗಿ ಪೌರ
ಕಾರ್ಮಿಕರನ್ನು ನೇಮಿಸಿಕೊಳ್ಳುವ ಮೂಲಕ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು 550 ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ. ಅದೇ ರೀತಿ ಪೌರಕಾರ್ಮಿಕರ ಭವಿಷ್ಯನಿಧಿ ಹೆಸರಲ್ಲಿ 320 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸರ್ಕಾರ ಎಸಿಬಿ ತನಿಖೆಗೆ ಆದೇಶಿಸಿತ್ತಾದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಲು ರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಗರಾಭಿವೃದ್ಧಿಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆಲಿಖೀತವಾಗಿ ಶಿಫಾರಸು  ಮಾಡುವುದಾಗಿ
ಹೇಳಿದರು.

ಟಾಪ್ ನ್ಯೂಸ್

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Prajwal Revanna: ಪ್ರಜ್ವಲ್‌ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್‌

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Protest: ಪ್ರಜ್ವಲ್‌, ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Rahul Gandhi: ಜನಗಣತಿಯಿಂದಲೇ ಅಸಲಿ ರಾಜಕೀಯ ಶುರು: ರಾಹುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.