ಕೆಸಿಸಿ ಕಪ್‌ನಲ್ಲಿ ಅಂತಾರಾಷ್ಟ್ರೀಯ ಆಟಗಾರರು


Team Udayavani, Jul 23, 2018, 11:24 AM IST

kcc-cup-2.jpg

ನಟ ಸುದೀಪ್‌ ನೇತೃತ್ವದಲ್ಲಿ ಶುರುವಾದ ಕರ್ನಾಟಕ ಚಲನಚಿತ್ರ ಕಪ್‌ (ಕೆಸಿಸಿ) ಟಿ 20 ಇದೀಗ ಎರಡನೇ ಆವೃತ್ತಿಗೆ ಕಾಲಿಟ್ಟಿದೆ. ಈ ಸೀಸನ್‌ 2 ವಿಶೇಷವೆಂದರೆ, ಇದೇ ಮೊದಲ ಸಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಹೌದು, ಭಾರತದ ವಿರೇಂದ್ರ ಸೆಹ್ವಾಗ್‌, ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್‌, ಶ್ರೀಲಂಕಾದ ತಿಲಕರತ್ನೆ ದಿಲನ್‌,ದಕ್ಷಿಣಾ ಆಫ್ರಿಕಾದ ಲ್ಯಾನ್ಸ್‌ ಕ್ಲೂಸ್ನರ್‌, ಹರ್ಷೆಲ್‌ ಗಿಬ್ಸ್, ಇಂಗ್ಲೆಂಡ್‌ನ‌ ಓವೈಸ್‌ ಷಾ ಈ ಸಲದ ಕೆಸಿಸಿ ಟಿ 20 ಕಪ್‌ನ ಪ್ರಮುಖ ಆಕರ್ಷಣೆ.

ಕಳೆದ ಬಾರಿ ಕೆಸಿಸಿ ಲೀಗ್‌ ಯಶಸ್ವಿಯಾಗಿ ನಡೆದಿತ್ತು. ಈಗ ಎರಡನೇ ಆವೃತ್ತಿಯ ಪಂದ್ಯವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಸುದೀಪ್‌ ಹಾಗೂ ಅವರ ತಂಡ ಅಂತಾರಾಷ್ಟ್ರೀಯ ಆಟಗಾರರರನ್ನು ಸಂಪರ್ಕಿಸಿ, ಅವರನ್ನು ಕರೆತರಲು ಯಶಸ್ವಿಯಾಗಿದ್ದಾರೆ. ಅಂದಹಾಗೆ, ಈ ಅಂತಾರಾಷ್ಟ್ರೀಯ ಆಟಗಾರರು ಒಂದೊಂದು ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್‌ 8 ಮತ್ತು 9 ರಂದು ಕೆಸಿಸಿ ಕಪ್‌ ಪಂದ್ಯಗಳು ಜರುಗಲಿವೆ. ಸೆ.8 ರಂದು ನಾಲ್ಕು ಪಂದ್ಯಗಳು ಹಾಗೂ ಸೆ.9 ರಂದು ಎರಡು ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು, ಈ ಕೆಸಿಸಿ ಟಿ 20 ಲೀಗ್‌ನಲ್ಲಿ ಶಿವರಾಜಕುಮಾರ್‌, ಪುನೀತ್‌ರಾಜ್‌ಕುಮಾರ್‌, ಯಶ್‌ ಸೇರಿದಂತೆ ಎಲ್ಲಾ ನಟರು ಬೆಂಬಲ ಕೊಡುತ್ತಿದ್ದಾರೆ. ಈ ಬಾರಿ ಉಪೇಂದ್ರ, ಗಣೇಶ್‌ ಕೂಡ ಸೇರ್ಪಡೆಯಾಗಿರುವುದು ವಿಶೇಷ. ಭಾರತ ತಂಡದ ಕ್ರಿಕೆಟ್‌ ಆಟಗಾರ ವೀರೇಂದ್ರ ಸೆಹ್ವಾಗ್‌ ಅವರಿಗೆ ಕಲಾವಿದರ ಜೊತೆಗೆ ಆಟ ಆಡುತ್ತಿರುವುದು ಹೊಸ ಅನುಭವ ಕಟ್ಟಿಕೊಡುವ ವಿಶ್ವಾಸ.

ಅಂದಹಾಗೆ, ಅಂತಾರಾಷ್ಟ್ರೀಯ ಆಟಗಾರರೆಲ್ಲರೂ ಕೆಸಿಸಿ ಟಿ 20 ಲೀಗ್‌ ಕುರಿತು ಖುಷಿಯಿಂದ ಹೇಳಿಕೊಳ್ಳುವ ಮೂಲಕ ಈ ಲೀಗ್‌ ಯಶಸ್ವಿಗೊಳಿಸಲು ಸಹಕಾರ ಕೋರಿದರು. ಅದೇನೆ ಇರಲಿ, ಕನ್ನಡ ಕಲಾವಿದರೆಲ್ಲರೂ ಸೇರಿ ಸುದೀಪ್‌ ನೇತೃತ್ವದಲ್ಲಿ ಶುರು ಮಾಡಿದ ಈ ಕೆಸಿಸಿ ಟಿ 20 ಲೀಗ್‌ ಈಗ ಇನ್ನಷ್ಟು ರೋಚಕ ಪಂದ್ಯಗಳನ್ನು ಕಟ್ಟಿಕೊಡುವಲ್ಲಿ ತಯಾರಾಗಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.