ಬದಿಯಡ್ಕ, ಕಯ್ಯೂರು-ಚೀಮೇನಿಯಲ್ಲಿ “ಕೇರ ಗ್ರಾಮ’ ಯೋಜನೆ

Team Udayavani, Jul 28, 2018, 6:00 AM IST

27ksde8.jpg

ಕಾಸರಗೋಡು: ಕಲ್ಪ ವೃಕ್ಷ ಎಂದೇ ಕರೆಸಿಕೊಂಡಿರುವ ತೆಂಗು ಅಭಿವೃದ್ಧಿ ಗುರಿಯಾಗಿರಿಸಿಕೊಂಡು ಕೇರಳ ಸರಕಾರ ಜಾರಿಗೊಳಿಸುತ್ತಿರುವ “ಕೇರ ಗ್ರಾಮ’ (ತೆಂಗು ಗ್ರಾಮ) ಯೋಜನೆಯನ್ನು ಕಾಸರಗೋಡು ಜಿಲ್ಲೆಯ ಬದಿಯಡ್ಕ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ.
 
ಕಳೆದ ವರ್ಷ ರಾಜ್ಯದ 44 ಗ್ರಾಮ ಪಂಚಾಯತ್‌ಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಿಂದ ತೆಂಗು ಬೆಳೆ ಇಳುವರಿ ಅಧಿಕವಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಗ್ರಾಮ ಪಂಚಾಯತ್‌ಗಳಿಗೆ ವಿಸ್ತರಿಸಲು ತೀರ್ಮಾನಿಸಿದ್ದು, ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ಬದಿಯಡ್ಕ ಮತ್ತು ಕಯ್ಯೂರು – ಚೀಮೇನಿ ಗ್ರಾಮ ಪಂಚಾಯತ್‌ ಅನ್ನು ಆಯ್ಕೆ ಮಾಡಿದೆ. ಪ್ರಸ್ತುತ ವರ್ಷ ಇನ್ನೂ 66 ಗ್ರಾಮ ಪಂಚಾಯತ್‌ಗಳಿಗೆ ಈ ಯೋಜನೆಯನ್ನು ವಿಸ್ತರಿಸಿದೆ.

ತೆಂಗಿನ ಗಿಡ ನೆಡುವ ಪ್ರಕ್ರಿಯೆಯಿಂದ ಆರಂಭಿಸಿ ನೀರಾವರಿ, ಗೊಬ್ಬರ ಪ್ರಯೋಗ, ಕುಮ್ಮಾಯ ಬಳಸುವುದು, ಜೈವಿಕ ಗೊಬ್ಬರ, ಕೆಟ್ಟು ಹೋದ ಮರಗಳನ್ನು ಕಡಿದುರುಳಿಸಿ ಹೊಸ ಗಿಡಗಳನ್ನು ನೆಡುವುದು, ತೆಂಗು ಮರವೇರುವ ಯಂತ್ರ ಅಭಿವೃದ್ಧಿ, ಕಾಂಪೋಸ್ಟ್‌ ಯೂನಿಟ್‌ ಆರಂಭಿಸುವುದು, ತೆಂಗಿನ ಹುರಿಹಗ್ಗ ತಯಾರಿ ಮೊದಲಾದವುಗಳಿಗೆ ಈ ಯೋಜನೆಯಲ್ಲಿ ಅನುದಾನ ನೀಡಲಾಗುವುದು. ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲಿ 625 ಎಕರೆ ಸ್ಥಳ ಯೋಜನೆಗೆ ಈ ಪ್ರದೇಶದಲ್ಲಿ 43,750 ತೆಂಗಿನ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿ ಘಟಕಗಳಿಗೆ 25 ಲಕ್ಷ ರೂಪಾಯಿ ವರೆಗೆ ಮಂಜೂರು ಮಾಡಲಾಗುವುದು.

ಈ  ಮಹತ್ವದ ಯೋಜನೆಗೆ ಕೃಷಿ ಇಲಾಖೆ 97.67 ಲಕ್ಷ ರೂ. ಮಂಜೂರು ಮಾಡಿದೆ. 22.5 ಲಕ್ಷ ರೂ. ಗ್ರಾಮ ಪಂಚಾಯತ್‌ ವಹಿಸಿಕೊಳ್ಳಬೇಕು. ಕಳೆದ ವರ್ಷ ಪ್ರತಿಯೊಂದು ಪಂಚಾಯತ್‌ಗಳಿಗೆ 75 ಲಕ್ಷ ರೂ. ನೀಡಲಾಗಿತ್ತು.

ತಿರುವನಂತಪುರ ಜಿಲ್ಲೆಯ ಕರವಾರಂ, ತಿರುವಲ್ಲ, ಉಳಮಲಯ್ಕಲ್‌, ಕೊಲ್ಲಂ ಜಿಲ್ಲೆಯ ಮೆಲಿಲ, ಪನ್ಮನ, ಮಯ್ಯನಾಡ್‌, ತೊಡಿಯೂರು, ಶಾಸ್ತೊÅàಂಗೋಡು, ಕರಿಪ್ರ, ವೆಸ್ಟ್‌ ಕಲ್ಲಡ, ಚಿರಕರ, ಆಲಪ್ಪುಳ ಜಿಲ್ಲೆಯ ಪುನ್ನಪ್ರ ನೋರ್ತ್‌, ಮಾರಾರಿಕುಳಂ ನೋರ್ತ್‌, ಮುದುಕುಳಂ, ವಯಲಾರ್‌, ಚೆರಿನಾಡ್‌, ಕೋಟ್ಟಯಂ ಜಿಲ್ಲೆಯ ತಲಯಾಳಂ, ಕುಟ್ಟಿಕಲ್‌, ಎರ್ನಾಕುಳಂ ಜಿಲ್ಲೆಯ ಮಲಯಾಟ್ಟೂರು, ನೀಲೇಶ್ವರ, ಪಾಯಿಪ್ರ, ಕುತ್ತಾಟ್ಟುಕುಳಂ, ತೃಶ್ಶೂರು ಜಿಲ್ಲೆಯ ಪರಿಯಾರಂ, ಕೋಡಶೆÏàರಿ, ವೆಂಕಿಟೆಂಗ್‌, ಎಡತುರ್ತಿ, ಪರಪ್ಪಕ್ಕರ, ಕುನ್ನಂಕುಳಂ, ನಡತ್ತರ, ಮಾಟ್ಟೂತ್ತೂರು, ಪಾಲಾ^ಟ್‌ ಜಿಲ್ಲೆಯ ಕಾಂಞಿರಪ್ಪುಳ, ಕಾರಕುಳಿ, ಎರಿಮಾಯೂರ್‌, ಮುತಲಮಡ, ಆರಂಗನಾಡಿ, ಕೊಪ್ಪ, ಪುದುಶೆÏàರಿ, ಅಲನಲ್ಲೂರು, ಮಲಪುರ ಜಿಲ್ಲೆಯ ಪೆರುವಳ್ಳೂರು, ಎಡವಣ್ಣ, ತಾಳೆಕೋಡ್‌, ಇರಿಂಬಿಳಿಯಂ, ವೆಳಿಯಂಗೋಡು, ತಲಕಾಡ್‌, ವಂಡೂರು, ಎಡಪ್ಪಾಲ್‌, ಚೆರುಕಾವ್‌, ಪಾಂಡಿಕೋಡ್‌, ಅಂಗಾಡಿಪುರಂ, ಆನಕಯಂ, ಚಾಲಿಯರ್‌, ಕಲ್ಲಿಕೋಟೆ ಜಿಲ್ಲೆಯ ಚೆರುವಣ್ಣೂರು, ವೆಳ, ಬಾಲುಶೆÏàರಿ, ಕಟ್ಟಿಪ್ಪಾರ, ಮುಡಾಡಿ, ವಾಲಂ, ನನ್ಮಂಡ, ಪೆರುಮಣ್ಣ, ನೊಚ್ಚೋಡ್‌, ಕಾಯಕೋಡಿ, ಕಣ್ಣೂರು ಜಿಲ್ಲೆಯ ತ್ಯಪಂಗೊಟ್ಟೂರು, ಕಾಂಕೋಲ್‌, ಆಲಪಡಂಬ, ಪಾಯಂ, ಎಳಯವೂರು ಹೀಗೆ 66 ಪಂಚಾಯತ್‌ಗಳಲ್ಲಿ ಕೇರ ಗ್ರಾಮ ಯೋಜನೆಯನ್ನು ಜಾರಿಗೊಳಿಸಲಾಗುವುದು.
 
ಟಾಪ್ ನ್ಯೂಸ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.