ನಿಧಾನಗತಿ ಓವರ್‌ಗಳಿಗೆ ಇನ್ನು ರನ್‌ ರೂಪದ ದಂಡ!


Team Udayavani, Aug 10, 2018, 6:30 AM IST

cricket-bowl-one-day.jpg

ಲಂಡನ್‌: ಕ್ರಿಕೆಟ್‌ ಪಂದ್ಯಗಳ ಮೇಲೆ ನಿಧಾನಗತಿಯ ಓವರ್‌ಗಳ ಮೇಲೆ ಇನ್ನು ಪೆನಾಲ್ಟಿ ರೂಪದಲ್ಲಿ ಎದುರಾಳಿ ತಂಡಕ್ಕೆ ರನ್‌ಗಳನ್ನು ನೀಡುವ ಹೊಸ ಪ್ರಸ್ತಾವನೆಯನ್ನು ಕ್ರಿಕೆಟ್‌ ನಿಯಮಗಳ ರಕ್ಷಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ವಿಶ್ವ ಕ್ರಿಕೆಟ್‌ ಸಮಿತಿಗೆ ಪ್ರಸ್ತಾವಿಸಿದೆ.

ಮಾಜಿ ನಾಯಕಾದ ಮೈಕ್‌ ಗ್ಯಾಟಿಂಗ್‌ ಮುಖ್ಯಸ್ಥರಾಗಿರುವ ಈ ಸಮಿತಿಯಲ್ಲಿ ಸೌರವ್‌ ಗಂಗೂಲಿ ಹಾಗೂ ರಿಕಿ ಪಾಂಟಿಂಗ್‌ ಪ್ರಮುಖ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಸಭೆ ಸೇರಿದ ಪ್ರಮುಖರು, ಓವರ್‌ ಗತಿ ಮೇಲೆ ನಿಗಾ ಇರಿಸಲು ಶಾಟ್‌ ಕ್ಲಾಕ್‌ ಬಳಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಬಾಸ್ಕೆಟ್‌ಬಾಲ್‌ನಲ್ಲಿ ಆಟದ ವೇಗ ಹೆಚ್ಚಿಸಲು “ಟೈಮರ್‌’ ಶಾಟ್‌ ಕ್ಲಾಕ್‌ ಬಳಸಲಾಗುತ್ತದೆ. ಇತ್ತೀಚೆಗೆ ಇದು ಟೆನಿಸ್‌ ಪಂದ್ಯಾವಳಿಗಳಲ್ಲೂ ಚಾಲ್ತಿಗೆ ಬಂದಿದೆ. ಪ್ರತಿ ಓವರ್‌ ನಡುವಿನ ವಿರಾಮದ ಅವಧಿಯಲ್ಲಿ ಶಾಟ್‌ ಕ್ಲಾಕ್‌ ಚಲಿಸುತ್ತಿರುತ್ತದೆ. ಬೌಲರ್‌ ರನ್‌ ಅಪ್‌ಗೆ ಬಂದಾಗ ಸ್ಥಗಿತಗೊಳ್ಳುತ್ತದೆ. ಇಂತಿಷ್ಟೇ ಸಮಯದಲ್ಲಿ ಪ್ರತಿ ಓವರ್‌ ಮುಕ್ತಾಯಗೊಳ್ಳಬೇಕು ಎಂದು ಬೌಲರ್‌ನನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ವೇಗದ ಬೌಲರ್‌ಗಳಿಗೆ ಹೆಚ್ಚಿನ ಅವಧಿ ಬೇಕಾಗುತ್ತದೆ. ಬೌಂಡರಿ, ಸಿಕ್ಸರ್‌ ಸಿಡಿಸಿದಾಗ, ಔಟಾದಾಗ ವಿಳಂಬವಾಗುತ್ತದೆ. ಆದರೆ, ಎರಡು ಓವರ್‌ಗಳ ಮಧ್ಯೆ ಎಷ್ಟು ಸಮಯ ತೆಗೆದುಕೊಂಡರೆಂಬ ಲೆಕ್ಕ ಇಡಬೇಕಾಗುತ್ತದೆ. ಹೊಸ ಬ್ಯಾಟ್ಸ್‌ಮನ್‌ ಕ್ರೀಸ್‌ಗೆ ಬಂದು ಆಟಕ್ಕೆ ಸಿದ್ಧವಾಗಲು ತೆಗೆದುಕೊಳ್ಳುವ ಸಮಯವನ್ನೂ ಲೆಕ್ಕ ಹಾಕಲಾಗುತ್ತದೆ ಎಂದು ಪಾಂಟಿಂಗ್‌ ವಿವರಿಸಿದ್ದಾರೆ.

11 ವರ್ಷಗಳಲ್ಲೇ ಕನಿಷ್ಠ ಓವರ್‌ ರೇಟ್‌
ಐಸಿಸಿ ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ ಆಡಿದ ಟೆಸ್ಟ್‌ ಪಂದ್ಯಗಳಲ್ಲಿ 11 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಓವರ್‌ ರೇಟ್‌ ದಾಖಲಾಗಿದೆ. ಟಿ20 ಪಂದ್ಯಗಳಲ್ಲಿ ಇನ್ನೂ ನಿಧಾನ. ಹಾಲಿ ನಿಯಮಗಳ ಪ್ರಕಾರ ಓವರ್‌ ಗತಿ ವಿಳಂಬವಾದರೆ ಆಟಗಾರರಿಗೆ ಮತ್ತು ತಂಡದ ನಾಯಕನಿಗೆ ದಂಡ ಶಿಕ್ಷೆಯಿದೆ. 

ಪುನರಾವರ್ತನೆಯಾದರೆ ತಂಡದ ನಾಯಕನಿಗೆ ಪಂದ್ಯಗಳ ಮೇಲೆ ನಿಷೇಧ ಹೇರಲಾಗುತ್ತದೆ. ಹೀಗಾಗಿ, ಐಸಿಸಿ ಸಮಿತಿ ಶಾಟ್‌ ಕ್ಲಾಕ್‌ ಬಳಕೆ ಮತ್ತು ರನ್‌ ಪೆನಾಲ್ಟಿ ವಿಧಿಸುವ ಕುರಿತು ಚರ್ಚಿಸಿದೆ. ನಾಯಕನಿಗೆ ಹೆಚ್ಚಿನ ಜವಾಬ್ದಾರಿ ವಹಿಸುವ ಜತೆಗೆ, ನಿಗದಿತ ಅವಧಿಯಲ್ಲಿ ತಂಡವೊಂದು 3-4 ಓವರ್‌ಗಳಷ್ಟು ಹಿಂದುಳಿದರೆ 20 ರನ್‌ಗಳ ವರೆಗೆ ಪೆನಾಲ್ಟಿ ವಿಧಿಸುವ ಚಿಂತನೆ ಇದೆ. ನಿರ್ದಿಷ್ಟವಾಗಿ ಎಷ್ಟೆಂಬುದು ಇನ್ನೂ ನಿರ್ಧಾರವಾಗಿಲ್ಲ.

ಬೌಲರ್‌ಗಳಿಗೂ ಹೆಲ್ಮೆಟ್‌
ಇದೇ ವೇಳೆ ಬೌಲರ್‌ಗಳೂ ಹೆಲ್ಮೆಟ್‌ ಒದಗಿಸುವ ಕುರಿತು ಚರ್ಚೆ ನಡೆದಿದೆ. 2022ರ ಕಾಮನ್ವೆಲ್ತ್‌ ಗೇಮ್ಸ್‌ ಹಾಗೂ 2028ರ ಒಲಿಂಪಿಕ್ಸ್‌ಗೆ ಮಹಿಳಾ ಕ್ರಿಕೆಟ್‌ ಸೇರಿಸುವ ಐಸಿಸಿ ಪ್ರಯತ್ನಕ್ಕೂ ಸಮಿತಿ ಮೆಚ್ಚುಗೆ ಸೂಚಿಸಿದೆ.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.