ಕೊಡಗು ಪ್ರವಾಹ ಕುರಿತು ರವಿಚಂದ್ರನ್‌ ಮಾತು


Team Udayavani, Aug 21, 2018, 11:25 AM IST

ravichandran.jpg

ಪ್ರವಾಹಕ್ಕೆ ಸಿಲುಕಿರುವ ಕೊಡಗಿನ ಜನತೆಗೆ ಎಲ್ಲೆಡೆಯಿಂದ ನೆರವಿನ ಮಹಾಪೂರ ಹರಿದುಬರುತ್ತಿದೆ. ಕೆಲವರು ವಸ್ತುಗಳ ರೂಪದಲ್ಲಿ ನೀಡಿದರೆ, ಇನ್ನು ಕೆಲವರು ಹಣದ ರೂಪದಲ್ಲಿ ನೀಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇವೆಲ್ಲಾ ತಾತ್ಕಾಲಿಕ ಪರಿಹಾರಗಳು. ಊರಿಗೆ ಊರನ್ನೇ ಕಳೆದುಕೊಂಡಿರುವ ಜನರಿಗೆ ಶಾಶ್ವತವಾದ ಪರಿಹಾರದ ಅಗತ್ಯವಿದೆ.

ಹಾಗಾದರೆ ಏನು ಮಾಡಬಹುದು? ಈ ಬಗ್ಗೆ ನಟ ರವಿಚಂದ್ರನ್‌ ಅವರಲ್ಲಿ ಒಂದು ಒಳ್ಳೆಯ ಐಡಿಯಾ ಇದೆ. ಅದು ಊರಿಗೆ ಊರನ್ನೇ ನಿರ್ಮಿಸಿಕೊಡೋದು. ಈ ಮೂಲಕ ಶಾಶ್ವತವಾದ ಪರಿಹಾರ ನೀಡೋದು. “ಅಕ್ಕಿ ಕೊಡೋದು, ಬಿಸ್ಕೆಟ್‌ ಕೊಡೋದು ತಾತ್ಕಾಲಿಕ ಪರಿಹಾರ. ಅಲ್ಲಿನ ಜನತೆಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಪ್ರವಾಹದ ರಭಸಕ್ಕೆ ಊರಿಗೆ ಊರೇ ಕೊಚ್ಚಿ ಹೋಗಿದೆ. ಜನ ಮನೆ ಮಟ್ಟಗಳನ್ನು ಕಳೆದುಕೊಂಡಿದ್ದಾರೆ.

ಹೀಗಿರುವಾಗ ಒಂದಷ್ಟು ಮಂದಿ ಸೇರಿಕೊಂಡು ಒಂದು ಊರಿಗೆ ಊರನ್ನೇ ನಿರ್ಮಿಸಿಕೊಟ್ಟರೆ ಅದು ತುಂಬಾ ಸಹಾಯವಾಗುತ್ತದೆ. ಈಗ ಚಿತ್ರರಂಗದ ವತಿಯಿಂದ ಏನು ಮಾಡುತ್ತೀರಿ ಎಂದು ಕೇಳುತ್ತಾರೆ. ಇಲ್ಲಿ ಒಬ್ಬೊಬ್ಬರು ಮಾಡುವ ಬದಲು ಎಲ್ಲರೂ ಒಟ್ಟಾಗಿ ಒಂದು ಊರನ್ನೇ ಪುನರ್‌ನಿರ್ಮಾಣ ಮಾಡುವುದು ಒಳ್ಳೆಯದು. ಎಲ್ಲರೂ ದೊಡ್ಡ ಮಟ್ಟದಲ್ಲಿ ಯೋಚಿಸಿದಾಗ ಇದು ಸಾಧ್ಯ. ಅಲ್ಲಿನ ಜನ ಜೀವನ ಕಳೆದುಕೊಂಡಿದ್ದಾರೆ.

ಅವರ ಖುಷಿ, ನೆಮ್ಮದಿ ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಆ ಜನರ ಖುಷಿಯನ್ನು ಮತ್ತೆ ತಂದುಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಒಂದಷ್ಟು ಜನ ಸೇರಿ ಚಿಕ್ಕ ಚಿಕ್ಕ ಊರುಗಳನ್ನು ಸೃಷ್ಟಿ ಮಾಡಿದಾಗ ಅದು ಕಾಣುತ್ತದೆ ಮತ್ತು ಶಾಶ್ವತ ಪರಿಹಾರವಾಗುತ್ತದೆ. ನಾವಲ್ಲಿ ಒಂದು ಗುರುತು ಬಿಟ್ಟು ಬರಬೇಕು. ದೊಡ್ಡದಾಗಿ ಸಹಾಯ ಮಾಡಲು ಚಿಕ್ಕ ಚಿಕ್ಕವರೆಲ್ಲಾ ಒಟ್ಟಾಗಬೇಕು. ಆಗ ಮಾತ್ರ ನಾವು ಮಾಡಿದ್ದೂ ಸಾರ್ಥಕವಾಗುತ್ತದೆ.

ಈಗ ಅಲ್ಲಿನ ಜನ ಕೂಡಾ ಜಾತಿ-ಧರ್ಮ ಮರೆತು ಒಟ್ಟಾಗಿ ಒಂದೇ ಸೂರಿನಡಿ ಇದ್ದಾರೆ. ಇದನ್ನೇ ಮಾದರಿಯನ್ನಾಗಿಸಿ ಎಲ್ಲರೂ ಖುಷಿಯಾಗಿ ಬದುಕಬೇಕು’ ಎನ್ನುವುದು ರವಿಚಂದ್ರನ್‌ ಮಾತು. ಅಂದಹಾಗೆ, ರವಿಚಂದ್ರನ್‌ ಅವರ ಈ ಮಾತಿಗೆ ವೇದಿಕೆಯಾಗಿದ್ದು “ರವಿಚಂದ್ರ’ ಚಿತ್ರದ ಮುಹೂರ್ತ. ಓಂ ಪ್ರಕಾಶ್‌ ರಾವ್‌ ನಿರ್ದೇಶನದ “ರವಿಚಂದ್ರ’ ಚಿತ್ರದಲ್ಲಿ ರವಿಚಂದ್ರನ್‌, ಉಪೇಂದ್ರ ಜೊತೆಯಾಗಿ ನಟಿಸುತ್ತಿದ್ದಾರೆ.

ಈ ನಡುವೆಯೇ ರವಿಚಂದ್ರನ್‌ ಅವರ “ರಾಜೇಂದ್ರ ಪೊನ್ನಪ್ಪ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಜನವರಿಯಲ್ಲಿ ಆ ಚಿತ್ರವನ್ನು ತೆರೆಗೆ ತರುವ ಆಲೋಚನೆ ರವಿಚಂದ್ರನ್‌ ಅವರಿಗಿದೆ. ಲವ್‌, ಗ್ಲಾಮರ್‌, ಆ್ಯಕ್ಷನ್‌, ಪೊಲಿಟಿಕ್ಸ್‌ … ಹೀಗೆ ಎಲ್ಲಾ ಆಯಾಮಗಳಿರುವ ಕಮರ್ಷಿಯಲ್‌ ಸಿನಿಮಾ ಇದಾಗಿರುವುದರಿಂದ ಚಿತ್ರೀಕರಣ ಸ್ವಲ್ಪ ತಡವಾಗುತ್ತಿದೆ ಎನ್ನುವುದು ರವಿಚಂದ್ರನ್‌ ಅವರ ಮಾತು. 

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.