ನೆರೆ ಸಂತ್ರಸ್ತರ ಸಂಕಷ್ಟ ಪರಿಹಾರಕ್ಕೆ ಪ್ರಾರ್ಥನೆ


Team Udayavani, Aug 23, 2018, 3:23 PM IST

dvg-1.jpg

ದಾವಣಗೆರೆ: ತ್ಯಾಗ, ಬಲಿದಾನದ ಪ್ರತೀಕ ಬಕ್ರೀದ್‌ ಹಬ್ಬವನ್ನು ಮುಸ್ಲಿಂ ಸಮಾಜದವರು ಬುಧವಾರ ನಗರದಲ್ಲಿ ಆಚರಿಸಿದರು. ಬಕ್ರೀದ್‌ ಅಂಗವಾಗಿ ಮುಸ್ಲಿಂ ಸಮಾಜದವರು ಪಿ.ಬಿ.ರಸ್ತೆಯ ಹಳೆಯ ಈದ್ಗಾ, ಮಾಗಾನಹಳ್ಳಿ ರಸ್ತೆಯ ರಜಾ-ವುಲ್‌ ಮುಸ್ತಫಾ ನಗರ ಹಾಗೂ ಇಂಡಸ್ಟ್ರಿಯಲ್‌ ಏರಿಯಾದ ರಾಮನಗರದಲ್ಲಿರುವ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಬಕ್ರೀದ್‌ ಶುಭಾಶಯವನ್ನ ಪರಸ್ಪರ ವಿನಿಮಯ ಮಾಡಿಕೊಂಡರು.

ಈದ್ಗಾ ಹಾಗೂ ಮಸೀದಿಗಳಲ್ಲಿ ಪ್ರವಾದಿ ಇಬ್ರಾಹಿಂ ಕಲೀಲ್‌ ಉಲ್ಲಾ ಅವರ ತ್ಯಾಗ, ಬಲಿದಾನ ಕುರಿತು ಸಂದೇಶ ತಿಳಿಸಲಾಯಿತು. ಪ್ರಾರ್ಥನೆ ವೇಳೆ ತಂಜಿಮುಲ್‌ ಮುಸ್ಲಿಮೀನ್‌ ಫಂಡ್‌ ಅಸೋಸಿಯೇಷನ್‌ನ ಜಿಲ್ಲಾ ಅಧ್ಯಕ್ಷ ಸಾದಿಕ್‌ ಪೈಲ್ವಾನ್‌, ರಜ್ವಿಖಾನ್‌, ಜೆ.ಅಮಾನುಲ್ಲಾ ಖಾನ್‌, ಸೈಯದ್‌ ಚಾರ್ಲಿ, ಸೈಯದ್‌ ಶಫಿವುಲ್ಲಾ, ಎ.ಬಿ. ಜಬೀವುಲ್ಲಾ, ಖಾದರ್‌ ಬಾಷಾ, ಇತರ ಮುಖಂಡರಿದ್ದರು.

 ಸಮಾನ ಮನಸ್ಕರ ಹೋರಾಟಕ್ಕೆ ಸಂದ ಜಯ 
 ದಾವಣಗೆರೆ: ಕೇಂದ್ರೀಯ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಅಧಿಕಾರವಧಿ ವಿಸ್ತರಣೆಗಾಗಿ ಬೈಲಾ ತಿದ್ದುಪಡಿ ಮಾಡಿಕೊಂಡಿದ್ದ ಕಸಾಪ ಸಮಿತಿಯ ನಿರ್ಣಯವನ್ನು ಸಂಘ ಸಂಸ್ಥೆಗಳ ಉಪನೋಂದಣಿ ನಿಬಂಧಕರು ಅಸಿಂಧುಗೊಳಿಸಿರುವುದು ಕಸಾಪ ಸಮಾನ ಮನಸ್ಕರ ವೇದಿಕೆಯ ಹೋರಾಟಕ್ಕೆ ಸಂದ ಜಯ ಎಂದು ವೇದಿಕೆಯ ಆರ್‌. ಶಿವಕುಮಾರ ಕುರ್ಕಿ ಬಣ್ಣಸಿದ್ದಾರೆ.

ಬುಧವಾರ, ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ್‌ ಕಳೆದ ಆರು ತಿಂಗಳಿಂದ ಪರಿಷತ್ತು ಮಾಡಬೇಕಾದ ಜನಪರ ಕಾರ್ಯಕ್ರಮಗಳ ಬಗ್ಗೆ ಚಿಂತಿಸದೇ ಶತಮಾನಗಳಿಂದ 3 ವರ್ಷ ಇರುವ ಕಸಾಪ ಅಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷಗಳಿಗೆ ವಿಸ್ತರಿಸಿಕೊಳ್ಳಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಇತ್ತೀಚೆಗೆ ಉಡುಪಿ ಜಿಲ್ಲೆಯ ಕೋಟಾದಲ್ಲಿ ನಡೆದ ವಿಶೇಷ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಅಸಂವಿಧಾನಿಕವಾಗಿ ನಿರ್ಣಯ ಕೈಗೊಂಡಿದ್ದರು. ಆಗ ವೇದಿಕೆಯು ಇತರೆ ಸಮಿತಿಗಳ ನೇತೃತ್ವದಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು. ನ್ಯಾಯಾಧೀಶರ ಸೂಚನೆ ಮೇರೆಗೆ ನಂತರ ಜಿಲ್ಲಾ ಸಂಘ ಸಂಸ್ಥೆಗಳ ಉಪನೋಂದಣಿ ನಿಬಂಧಕರ ಕಚೇರಿಗೆ ನ್ಯಾಯಕ್ಕಾಗಿ ದೂರು ಸಲ್ಲಿಸಲಾಗಿತ್ತು. ಹಲವು ಬಾರಿ ವಿಚಾರಣೆ ನಡೆಸಿರುವ ನೋಂದಣಾಧಿಕಾರಿಗಳು ಕಸಾಪ ಅಧ್ಯಕ್ಷರ ಅಧಿಕಾರಾವಧಿಯನ್ನು 3ವರ್ಷಕ್ಕೆ ಸೀಮಿತಗೊಳಿಸಿ ಆದೇಶ ನೀಡಿರುವುದು ಸ್ವಾಗತಾರ್ಹ ಎಂದರು.

ಅಧಿಕಾರ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆ ಆಗಬೇಕೆಂಬುದು ಕಸಾಪ ಸಮಾನ ಮನಸ್ಕ ವೇದಿಕೆಯ ಉದ್ದೇಶ. ಆದರೆ ಹಾಲಿ ಅಧ್ಯಕ್ಷರು ಈಗ ನೀಡಿರುವ ಆದೇಶವನ್ನುಧಿಕ್ಕರಿಸಿ ಪುನಃ ಹೈಕೋರ್ಟ್‌ ಮೊರೆ ಹೋಗುವುದಾಗಿ ಬಾಲಿಷ ಹೇಳಿಕೆ ನೀಡುತ್ತಿರುವುದು ಖಂಡನೀಯ. ಹಾಗಾಗಿ ಆದೇಶಕ್ಕೆ ಯಾವುದೇ ತಡೆಯಾಜ್ಞೆ ತರದಂತೆ ಹೈಕೋರ್ಟ್‌ಗೆ ಕೇವಿಟ್‌ ಹಾಕುತ್ತೇವೆ ಎಂದು ನ್ಯಾಯವಾದಿ ಬಳ್ಳಾರಿ ರೇವಣ್ಣ ತಿಳಿಸಿದರು.

ಅಲ್ಲದೇ ಕಸಾಪ ಅಧ್ಯಕ್ಷರು ಅಧಿಕಾರ ವಹಿಸಿಕೊಂಡು ಎರಡೂವರೆ ವರ್ಷ ಆಗುತ್ತಿದ್ದು, ಸೆ.1ಕ್ಕೆ ಚುನಾವಣಾ ನೋಂದಣಾಧಿಕಾರಿಗಳಿಗೆ ಮುಂದಿನ ಆರು ತಿಂಗಳಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ವೇದಿಕೆಯ ಸದಸ್ಯರ ಸಮಿತಿಯಿಂದಲೇ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
 
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ನ್ಯಾಯಾವಾದಿ ವಿನಯಕುಮಾರ್‌ ಎಸ್‌.ಎಚ್‌. ಸಾಹುಕಾರ್‌, ಎ.ಎಚ್‌. ವಿವೇಕಾನದಸ್ವಾಮಿ, ದಾಗಿನಕಟ್ಟೆ ಪರಮೇಶ್ವರಪ್ಪ, ಶಿವಯೋಗಿ ಹಿರೇಮಠ, ರಾಜೇಂದ್ರ ಪ್ರಸಾದ್‌ ನೀಲಗುಂದ್‌ ಇದ್ದರು.

ಸಮ್ಮೇಳನ ಬೇಡ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಧಾರವಾಡದಲ್ಲಿ ನವೆಂಬರ್‌ ಇಲ್ಲವೇ ಡಿಸೆಂಬರ್‌ನಲ್ಲಿ ನಡೆಸುವುದು ಬೇಡ. ಸಮ್ಮೇಳನಕ್ಕೆ ಖರ್ಚಾಗುವ ಹಣವನ್ನು ಕರ್ನಾಟಕದ ಮಡಿಕೇರಿ, ಕೊಡಗು ಸೇರಿದಂತೆ ವಿವಿಧ ಭಾಗಗಳಲ್ಲಿನ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಬೇಕು ಎಂದು ವೇದಿಕೆಯ ಪರವಾಗಿ ಆರ್‌.ಶಿವಕುಮಾರ ಕುರ್ಕಿ ಕಸಾಪ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. 

ಕಸಾಪ ಅಧ್ಯಕ್ಷರ ಅಧಿಕಾರಾವಧಿ ವಿಸ್ತರಣೆಗೆ ತಡೆ ಸಂಕಷ್ಟ ಪರಿಹಾರಕ್ಕೆ ವಿಶೇಷ ಪ್ರಾರ್ಥನೆ ಕೊಡಗು, ಮಡಿಕೇರಿ ಹಾಗೂ ಕೇರಳ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ತತ್ತರಿಸಿರುವ ಜನರ ಸಂಕಷ್ಟ ಪರಿಹಾರ ಹಾಗೂ ಶಾಂತಿ, ನೆಮ್ಮದಿಗಾಗಿ ಈ ಬಾರಿ ಬಕ್ರೀದ್‌ ವೇಳೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದಾನ, ಧರ್ಮದ ಪ್ರತೀಕವಾದ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಈದ್ಗಾಗಳ ಬಳಿ ಸಮಾಜದ ಬಡವರಿಗೆ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದರು.

ಕೊಡಗು, ಮಡಿಕೇರಿ ಹಾಗೂ ಕೇರಳ ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹದಿಂದ ಸಂತ್ರಸ್ತರಾದವರಿಗೆ ನೆರವು ನೀಡಲು ಜಿಲ್ಲಾ ಯುವ ಕಾಂಗ್ರೆಸ್‌ ಘಟಕದ ಮಾಧ್ಯಮ ಸಂಚಾಲಕ ಎಚ್‌.ಜೆ. ಮೈನುದೀªನ್‌ ಹಾಗೂ ಸ್ನೇಹಿತರ ತಂಡ, ಯೂತ್‌ ಕಾಂಗ್ರೆಸ್‌, ತಂಜಿಮುಲ್‌ ಮುಸ್ಲಿಂ ಫಂಡ್‌ ಅಸೋಸಿಯೇಷನ್‌, ಆಜಾದ್‌ ಫ್ರೆಂಡ್ಸ್‌ , ಕೆ.ಎಚ್‌.ಜಿ.ಎನ್‌ ಫ್ರೆಂಡ್ಸ್‌ ಗ್ರೂಪ್‌, ಅಕ್ತಾರ್‌ ರಜಾ ಸರ್ಕಲ್‌ ಫ್ರೆಂಡ್ಸ್‌ ಗ್ರೂಪ್‌ ಸೇರಿ ವಿವಿಧ ತಂಡಗಳು ದೇಣಿಗೆ ಸಂಗ್ರಹಿಸಿದವು. ಈ ಹಣವನ್ನು ಡಿಡಿ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸಲಿದ್ದಾರೆ.

ಹಬ್ಬದ ಹಣ ಸಂತ್ರಸ್ತರಿಗೆ ಬೈಕ್‌ ಟಿಂಕರಿಂಗ್‌ ವೃತ್ತಿಯ ಅಬ್ದುಲ್‌ ಜಿಲಾನಿ ಬಕ್ರೀದ್‌ ಹಬ್ಬಕ್ಕೆಂದು ಕೂಡಿಟ್ಟಿದ್ದ 7 ಸಾವಿರ ರೂ.ಗಳಿಂದ ವಸ್ತ್ರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಖರೀದಿಸಿದ್ದು, ನೆರೆ ಹಾವಳಿಯಿಂದ ಪರಿತಪಿಸುತ್ತಿರುವ ಕೊಡಗು ಸಂತ್ರಸ್ತರಿಗೆ ತಲುಪಿಸಲು ಮುಂದಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.