ಜಾನಪದ ಭಾರತದ ಶ್ರೀಮಂತ ಸಂಸ್ಕೃತಿ

Team Udayavani, Aug 25, 2018, 10:57 AM IST

bid-2.jpg

ಬೀದರ: ಜಾನಪದ ಸಾಹಿತ್ಯ ಭಾರತದ ಒಂದು ಶ್ರೀಮಂತ ಸಂಸ್ಕೃತಿಯಾಗಿದೆ. ನಮ್ಮ ಹಿರಿಯರು ಬಹಳ ಕಷ್ಟಪಟ್ಟು ಈ ಸಂಸ್ಕೃತಿ ಉಳಿಸಿಕೊಂಡು ಬಂದಿದ್ದಾರೆ. ಯುವಕರು ಜಾನಪದ ಸಂಸ್ಕೃತಿ ಉಳಿಸಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆರ್‌. ಸೆಲ್ವಮಣಿ ಹೇಳಿದರು.

ನಗರದ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನವದೆಹಲಿ, ಕರ್ನಾಟಕ
ಬರಹಗಾರರ ಮತ್ತು ಕಲಾವಿದರ ಸಂಘ ಬೀದರ ಹಾಗೂ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವ ಪೀಳಿಗೆ ಆಧುನಿಕತೆಗೆ ಭರಾಟೆಗೆ ಒಳಗಾಗಿ ಜಾನಪದ ಸಂಸ್ಕೃತಿ ಮರೆಯುತ್ತಿದೆ. ಜಾನಪದ ಹಾಡು, ನೃತ್ಯ, ಆಚರಣೆ ಎಲ್ಲವನ್ನು ಮರೆಯಾಗುತ್ತಿದ್ದು, ಜಾನಪದ ಸಂಸ್ಕೃತಿ ಉಳಿಸಲು ಯುವಕ-ಯುವತಿಯರು ಮುಂದಾಗಬೇಕು. ಪರಂಪರೆಗಳನ್ನು ಯಾವತ್ತೂ ಮರೆಯಾಗಬಾರದು ಎಂಬುದನ್ನು ಯುವ ಜನರಿಗೆ ತಿಳಿಸುವ ಕಾರ್ಯ ಕೂಡ ನಡೆಯಬೇಕು ಎಂದರು.

ಯುವಜನತೆ ಆಧುನಿಕ ಹುಚ್ಚು ಆಚರಣೆ ಬಿಟ್ಟು ಸ್ವಂತ ಜಾನಪದ ಕವಿತೆಗಳನ್ನು ರಚಿಸಿ ಹಾಡುವ ಪ್ರಯತ್ನ ಮಾಡಬೇಕು. ಆಧುನಿಕ ಸಿನಿಮಾ ಹಾಡುಗಳು ಕೇವಲ ಮನರಂಜನೆಗಾಗಿ ಇದ್ದರೆ, ಜಾನಪದ ಹಾಡುಗಳು ಹೃದಯ ತಟ್ಟುತ್ತವೆ. ಜಾನಪದ ಸಂಸ್ಕೃತಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಜಾನಪದ ಅಂದರೆ ಅದೊಂದು ಮಾನವೀಯ ಮೌಲ್ಯ. ಕಾಯಕದಿಂದ ಕೈಲಾಸ ಪಡೆಯುವ ವಿಧಾನ, ಚಾರಿತ್ರಿಕ ಅಂಶ. ಜನಪದ ಎಂದರೆ ತಾಯಿಯ ಹೃದಯ. ತಾಯಿ ಹೃದಯದಿಂದ ಬರುವ ನುಡಿಗಳೇ ಜಾನಪದವಾಗಿದೆ. ವಿದ್ಯಾರ್ಥಿನಿಯರು ಗ್ರಾಮೀಣ ಭಾಗದ ಜಾನಪದ ಸಂಸ್ಕೃತಿ ತಿಳಿದುಕೊಂಡು, ಮಕ್ಕಳಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು. ಮಗು ಜನ್ಮ ತಾಳಿದ ನಂತರದಿಂದ ಮನುಷ್ಯನ ಅತ್ಯದ ವರೆಗೆ ಜಾನಪದ ಸಂಸ್ಕೃತಿ ವಿವಿಧ ಹಂತಗಳಲ್ಲಿ ನೋಡಲು ಸಿಗುತ್ತದೆ. ಇಂದಿನ ದಿನಗಳಲ್ಲಿ ಶುಭ ಕಾರ್ಯಗಳಲ್ಲಿ ಜಾನಪದ ಹಾಡುಗಾರರ ಬೇಡಿಕೆ ಹೆಚ್ಚುತ್ತಿದೆ. ನಾವು ಆ ಸಂಸ್ಕೃತಿಯಿಂದ ದೂರ ಉಳಿದಿರುವುದೇ ಇದಕ್ಕೆ ಕಾರಣ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿ, ಜಾನಪದದಲ್ಲಿ ಕುಟ್ಟುವ, ಬೀಸುವ, ಬುಲಾಯಿ, ಸೋಬಾನೆ, ಒಡಪು, ನೃತ್ಯ, ಊಟೋಪಚಾರ, ಜಾತ್ರೆಗಳು ಮತ್ತು ಉತ್ಸವಗಳು ಹೀಗೆ ಅನೇಕ ರೀತಿಯ ಹಾಡುಗಳು ಇದರಲ್ಲಿವೆ. ಇವುಗಳನ್ನು ಮತ್ತೆ ಸಮಾಜದಲ್ಲಿ ಬೆಳೆಸಲು ಸರ್ವರೂ ದುಡಿಯಬೇಕು ಎಂದರು. 

ಪ್ರಾಚಾರ್ಯ ಪ್ರೊ| ಮಧುಕರರಾವ್‌ ದೇಶಪಾಂಡೆ,  ಹಾರುದ್ರ ಡಾಕುಳಗಿ, ಲಕ್ಷ್ಮಣರಾವ್‌ ಕಾಂಚೆ, ಎಸ್‌.ಬಿ. ಕುಚಬಾಳ, ಪ್ರಕಾಶ ಕನ್ನಾಳೆ, ಪ್ರೊ| ಸುಂದರರಾಜ್‌, ಡಾ| ವಿದ್ಯಾ ಪಾಟೀಲ, ಡಾ| ಮಹಾನಂದ ಮಡಕಿ, ಲುಂಬಿಣಿ ಗೌತಮ್‌, ಮಲ್ಲಿಕಾರ್ಜುನ ಬಾವಗಿ, ಶಿವಶರಣಪ್ಪ ಗಣೇಶಪೂರ, ಕಾಶಿನಾಥ ಬಡಿಗೇರ್‌, ಮೋಹನ ಪಾಟೀಲ, ಸವಿತಾ, ಪೂಜಾ, ದೀಪಿಕಾ, ಅನುರಾಧಾ, ಸುಮಿತ್ರಾ, ಪ್ರಿಯಂಕಾ, ನಂದಿನಿ ಸೇರಿದಂತೆ ಅನೇಕರು ಇದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಬೀದರನಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಲು 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಕೆಲವು ಕಾರಣಗಳಿಂದ ವಿಶ್ವವಿದ್ಯಾಲಯ ಹಾವೇರಿ ಜಿಲ್ಲೆ ಶಿಗ್ಗಾವಿಗೆ ವರ್ಗಗೊಂಡು ಅಲ್ಲಿಯೇ ಸ್ಥಾಪನೆಯಾಯಿತು. ಆದ್ದರಿಂದ ನಮ್ಮ ಭಾಗದ ಎಲ್ಲ ಜಾನಪದ ಕಲಾವಿದರ ಆಶಯದಂತೆ ಜಿಲ್ಲಾ ಪಂಚಾಯತ್‌ ವತಿಯಿಂದ 10 ಎಕರೆ ಸ್ಥಳ ನೀಡಿದರೆ ಕೂಡಲೇ ಜಾನಪದ ವಿಶ್ವವಿದ್ಯಾಲಯ ಕಟ್ಟಡ ಕಾರ್ಯ ಆರಂಭಿಸುತ್ತೇವೆ.  ಡಾ| ಜಗನ್ನಾಥ ಹೆಬ್ಟಾಳೆ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.