ವನಿತಾ ಹಾಕಿ: ಜಬರ್ದಸ್ತ್ ಜಪಾನ್‌ಗೆ ಭಾರತ ಶರಣು

Team Udayavani, Sep 1, 2018, 6:00 AM IST

z-26.jpg

ಜಕಾರ್ತಾ: ಭಾರತದ ಮುಂದಿದ್ದ ಮತ್ತೂಂದು ಏಶ್ಯಾಡ್‌ ಚಿನ್ನದ ಪದಕ ಕೈಜಾರಿದೆ. ಶುಕ್ರವಾರ ನಡೆದ ವನಿತೆಯರ ಹಾಕಿ ಫೈನಲ್‌ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡಿದ ಜಪಾನ್‌ ತಂಡ 2-1 ಗೋಲುಗಳ ಜಯಭೇರಿ ಮೊಳಗಿಸಿ ಬಂಗಾರದಿಂದ ಸಿಂಗಾರಗೊಂಡಿತು. ಭಾರತಕ್ಕೆ ಬೆಳ್ಳಿ ಪದಕವೇ ಗತಿಯಾಯಿತು.

ಇದು ಪ್ರಸಕ್ತ ಏಶ್ಯಾಡ್‌ನ‌ಲ್ಲಿ ಭಾರತೀಯ ಹಾಕಿಗೆ ಎದುರಾದ 2ನೇ ಹಾರ್ಟ್‌ ಬ್ರೇಕ್‌. ಇದಕ್ಕೂ ಮುನ್ನ ಪುರುಷರ ತಂಡ ಚಿನ್ನವನ್ನು ಕಳೆದುಕೊಂಡು ಕಂಚಿಗಾಗಿ ಸ್ಪರ್ಧೆ ನಡೆಸುವ ಸಂಕಟವನ್ನು ಆಹ್ವಾನಿಸಿಕೊಂಡಿತ್ತು. ಈ ಸೋಲಿನಿಂದ ಭಾರತಕ್ಕೆ ಎದುರಾದ ಮತ್ತೂಂದು ಭಾರೀ ನಷ್ಟವೆಂದರೆ ಒಲಿಂಪಿಕ್ಸ್‌ ನೇರ ಪ್ರವೇಶ. ಇಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರೆ ಭಾರತದ ವನಿತಾ ಹಾಕಿ ತಂಡ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅವಕಾಶ ಪಡೆಯುತ್ತಿತ್ತು. ಈ ಅವಕಾಶವೀಗ ಜಪಾನ್‌ ಪಾಲಾಗಿದೆ. ಭಾರತವಿನ್ನು ಅರ್ಹತಾ ಪಂದ್ಯಾವಳಿಯಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಬೇಕಿದೆ.

ಜಪಾನ್‌ ಯೋಜನಾಬದ್ಧ ಆಟ
ಲೀಗ್‌ ಹಂತದಲ್ಲಿ ಅಜೇಯವಾಗಿ ಉಳಿದು, ಸೆಮಿಫೈನಲ್‌ನಲ್ಲಿ ಚೀನ ವಿರುದ್ಧ ಏಕೈಕ ಗೋಲಿನಿಂದ ಜಯ ಸಾಧಿಸಿದ ರಾಣಿ ರಾಮ್‌ಪಾಲ್‌ ಪಡೆ, ಚಿನ್ನದ ಕಾಳಗದಲ್ಲಿ ತನಗಿಂತ ಕೆಳ ಕ್ರಮಾಂಕದ ಜಪಾನ್‌ ವಿರುದ್ಧ ಮೇಲುಗೈ ಸಾಧಿಸೀತೆಂಬ ನಂಬಿಕೆ ಇತ್ತು. ಪುರುಷರಿಗೆ ಒಲಿಯದ ಚಿನ್ನ ವನಿತೆಯರ ಪಾಲಾಗಬಹುದೆಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ ಫೈನಲ್‌ ಜೋಶ್‌ ಪ್ರದರ್ಶಿಸಲು ವಿಫ‌ಲವಾದ ಭಾರತ ತೀರಾ ನೀರಸ ಆಟವಾಡಿ ಸೋತು ಹೋಯಿತು. ಜಪಾನ್‌ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಕಾರ್ಯತಂತ್ರವನ್ನು ಯಶಸ್ವಿಯಾಗಿ ಅಳವಡಿಸಿಕೊಂಡು ಭಾರತದ ಮೇಲೆ ಸವಾರಿ ಮಾಡಿತು.

ಭಾರತಕ್ಕೆ ಆರಂಭದಲ್ಲೇ ಹಿನ್ನಡೆ
ಮಿನಾಮಿ ಶಿಮಿಝು 11ನೇ ನಿಮಿಷದಲ್ಲೇ ಗೋಲು ಸಿಡಿಸಿ ಜಪಾನ್‌ ತಂಡದಲ್ಲಿ ಹೊಸ ಹುರುಪು ಮೂಡಿಸಿದರು. ಮೊದಲ ಪೆನಾಲ್ಟಿ ಕಾರ್ನರನ್ನೇ ಅವರು ಗೋಲಾಗಿ ಪರಿವರ್ತಿಸಿದ್ದರು. ಭಾರತ 25ನೇ ನಿಮಿಷದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನವನೀತ್‌ ಕೌರ್‌ ಅವರ “ರಿವರ್ಸ್‌ ಹಿಟ್‌’ ಪಾಸ್‌ ಒಂದನ್ನು ನೇಹಾ ಗೋಯೆಲ್‌ ಡಿಫ್ಲೆಕ್ಟ್ ಮಾಡುವ ಮೂಲಕ ಗೋಲಾಗಿ ಪರಿವರ್ತಿಸಿದರು. ಭಾರತದ ಗೋಲಾಟ ಇಲ್ಲಿಗೇ ನಿಂತಿತು.

2ನೇ ಕ್ವಾರ್ಟರ್‌ ಬಳಿಕ ಜಪಾನ್‌ ಸಂಘಟಿತ ಆಟದ ಮೂಲಕ ಗಮನ ಸೆಳೆಯಿತು. 44ನೇ ನಿಮಿಷದಲ್ಲಿ ಲಭಿಸಿದ ಮತ್ತೂಂದು ಪೆನಾಲ್ಟಿ ಕಾರ್ನರನ್ನು ನಾಯಕಿ ಮೊಟೊಮಿ ಕವಾಮುರಾ ಗೋಲಾಗಿಸುವಲ್ಲಿ ಯಶಸ್ವಿಯಾದರು. 

ಟಾಪ್ ನ್ಯೂಸ್

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

SUNIPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.