ಫೇಸ್ ಬುಕ್ ಪಾಸ್ ವರ್ಡ್ ಕೊಡಲು ನಿರಾಕರಿಸಿದ ಯುವಕ ಜೈಲುಪಾಲು!
Team Udayavani, Sep 1, 2018, 3:17 PM IST
ಲಂಡನ್: ಶಾಲಾ ಬಾಲಕಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಬ್ರಿಟಿಷ್ ವ್ಯಕ್ತಿಯೊಬ್ಬ ಫೇಸ್ ಬುಕ್ ಪಾಸ್ ವರ್ಡ್ ನೀಡಲು ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಆತ ಜೈಲು ಕಂಬಿ ಎಣಿಸುವಂತಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ತನಿಖೆಗಾಗಿ ಫೇಸ್ ಬುಕ್ ಪಾಸ್ ವರ್ಡ್ ಅನ್ನು ಶೇರ್ ಮಾಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದು, ಇದಕ್ಕೆ ಸ್ಟೀಫನ್ ನಿಕೋಲಸ್ ನಿರಾಕರಿಸಿದ್ದ. 13 ವರ್ಷದ ಶಾಲಾ ಬಾಲಕಿ ಲೂಸಿ ಮೆಕ್ ಹಗ್ ಎಂಬಾಕೆಯನ್ನು ಇರಿದು ಹತ್ಯೆಗೈಯಲಾಗಿತ್ತು. ಇದರ ತನಿಖೆಗಾಗಿ ಸ್ಟೀಫನ್ ಬಳಿ ಫೇಸ್ ಬುಕ್ ಪಾಸ್ ವರ್ಡ್ ಕೊಡಲು ಕೇಳಿದಾಗ ಆತ ಕೊಡಲು ನಿರಾಕರಿಸಿದ್ದ. ಬಳಿಕ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.
ಬಾಲಕಿಯ ಕೊಲೆಯಾಗುವ ಮುನ್ನ ಸ್ಟೀಫನ್ ಯಾವುದಾದರೂ ಖಾಸಗಿ ಸಂದೇಶವನ್ನು ಆಕೆಗೆ ಕಳುಹಿಸಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚುವ ನಿರೀಕ್ಷೆ ನಮ್ಮದಾಗಿತ್ತು ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿಕೋಲಸ್ ಆರ್ ಐಪಿಎ(ರೆಗ್ಯುಲೇಶನ್ ಆಫ್ ಇನ್ವೆಸ್ಟಿಗೇಟರಿ ಪವರ್ಸ್ ಆ್ಯಕ್ಟ್) ಅಡಿ ದೋಷಿ ಎಂದು ಕೋರ್ಟ್ ಆದೇಶ ನೀಡಿ, 14 ತಿಂಗಳ ಜೈಲುಶಿಕ್ಷೆ ವಿಧಿಸಿದೆ.
ಆರ್ ಐಪಿಎ ಕಾಯ್ದೆ ಪ್ರಕಾರ ಯಾವುದೇ ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಎಲ್ಲಾ ವಿಧದ ಎಲೆಕ್ಟ್ರಾನಿಕ್ ಉಪಕರಣಗಳ ಪಾಸ್ ವರ್ಡ್ ಅನ್ನು ಕೊಡುವುದು ಕಡ್ಡಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ