ರಸ್ತೆ ರಾಜ ರಾಯಲ್‌ ನ್ಯೂ


Team Udayavani, Sep 3, 2018, 1:39 PM IST

agni-1-copy.jpg

ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಹೊಸ ಹೊಸ ಮಾದರಿಯ ಕಾರುಗಳು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಸಿಗುತ್ತಿವೆ. ಈ ನಡುವೆಯೂ ದ್ವಿಚಕ್ರ ವಾಹನಗಳ ಮೇಲಿನ ಕ್ರೇಜ್‌ ಕಡಿಮೆಯಾಗಿಲ್ಲ. ಇಂದಿನ ಅದೆಷ್ಟೋ ಎಸ್‌ಯುವಿ ಸೆಗೆಂಟ್‌ನ ಕಾರುಗಳಿಗಿಂತ ಹೆಚ್ಚಿನ ಬೆಲೆ ಕೊಟ್ಟು ಬೈಕ್‌ಗಳನ್ನು ಖರೀದಿಸುವವರು ಹೆಚ್ಚುತ್ತಿದ್ದಾರೆ. ಅದೇ ಕಾರಣಕ್ಕಾಗಿಯೇ ಪ್ರತಿಷ್ಠಿತ ಕಂಪನಿಗಳು ದುಬಾರಿ ಬೆಲೆಯ ಬೈಕ್‌ಗಳನ್ನು ಅಭಿವೃದ್ಧಿ ಪಡಿಸಿ, ಪರಿಚಯಿಸುತ್ತಿವೆ. ಅಷ್ಟೇ ಅಲ್ಲ, ಇಂಥ ಬೈಕ್‌ಗಳಿಗೆ ಜನಪ್ರಿಯತೆಯ ಕೊರತೆಯೂ ಆಗಿಲ್ಲ.

ಈ ಸಾಲಿಗೆ ರಾಯಲ್‌ ಎನ್‌ಫೀಲ್ಡ್‌ ಕೂಡ ಸೇರಿಕೊಳ್ಳುತ್ತದೆ. ಈಗಂತೂ ಎನ್‌ಫೀಲ್ಡ್‌ಗಳ ಮೇಲಿನ ಕ್ರೇಜ್‌ ಮತ್ತಷ್ಟು ಹೆಚ್ಚಿದೆ. ಒಂದು ಕಾಲದಲ್ಲಿ ಎನ್‌ಫೀಲ್ಡ್‌ ಬೈಕ್‌ಗಳಲ್ಲಿ ಬಂದಿಳಿದರೆ, ಕಣ್ಣರಳಿಸಿ ಪಾದದಿಂದ ನೆತ್ತಿಯತನಕ ದಿಟ್ಟಿಸಿ ನೋಡುವ ಕಾಲವೊಂದಿತ್ತು. ಇಂದು ಹಾಗಿಲ್ಲ, ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಸಾಮಾನ್ಯನೂ ಕೊಂಡುಕೊಳ್ಳಬಲ್ಲ. ಅಂದರೆ, ಬೆಲೆ ಎಷ್ಟು ಎನ್ನುವುದಕ್ಕಿಂತಲೂ ಕಂಪನಿ ತನ್ನ ಜನಪ್ರಿಯತೆಯನ್ನು ಇನ್ನಷ್ಟು ವೃದ್ಧಿಸಿಕೊಂಡಿದೆ.

ಈ ಬೆನ್ನಲ್ಲೇ ರಾಯಲ್‌ ಎನ್‌ಫೀಲ್ಡ್‌ ಇದೀಗ ಇನ್ನೆರಡು ಹೊಸ ಮಾಡೆಲ್‌ಗ‌ಳನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಸ್ತಿಲಲ್ಲಿದೆ. ಈಗಷ್ಟೇ ಎಬಿಎಸ್‌(ಅಆಖ  ಅnಠಿಜಿ lಟck ಆrಛಿಚkಜಿnಜ sysಠಿಛಿಞ) ಪ್ರೇರಿತ ಕ್ಲಾಸಿಕ್‌ ಸಿಗ್ನಲ್ಸ್‌ 350 ಬೈಕ್‌ ಪರಿಚಯಿಸಿರುವ ಕಂಪನಿ, ಇದೇ ಮಾದರಿಯಲ್ಲೇ ಇನ್ನೆರಡು ಬೈಕ್‌ಗಳನ್ನು ಅನಾವರಣಗೊಳಿಸಲಿದೆ.

ತನ್ನದೇ ಬ್ರಾಂಡ್‌ನ‌ ಹಿಮಾಲಯನ್‌ ಆಫ್ ರೋಡ್‌ ಸ್ಪೆಷಲ್‌ ಬೈಕ್‌ಗಳನ್ನೇ ಕೆಲವೊಂದು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಜತೆಗೆ ಕ್ಲಾಸಿಕ್‌ 500 ಕೂಡ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸ್ವತಃ ಕಂಪನಿಯೇ ಈ ಬಗ್ಗೆ ಹೇಳಿಕೊಂಡಿದೆ. ಕ್ಲಾಸಿಕ್‌ ಸಿಗ್ನಲ್ಸ್‌ 350ಯನ್ನು 1.60 ಲಕ್ಷ ರೂ.(ಎಕ್ಸ್‌ ಶೋ ರೂಂ)ಗೆ ಪರಿಚಯಿಸಿರುವ ಕಂಪನಿ, ಹೆಚ್ಚು ಕಡಿಮೆ ಇದೇ ದರದಲ್ಲೇ ನೂತನ ಬೈಕ್‌ಗಳ ಬೆಲೆ ಫಿಕ್ಸ್‌ ಮಾಡುವ ಸಾಧ್ಯತೆ ಇದೆ. ಕಂಪನಿಯ ಮಾಹಿತಿ ಪ್ರಕಾರ ಸೆಪ್ಟೆಂಬರ್‌ ಅಂತ್ಯ ಅಥವಾ ಅಕ್ಟೋಬರ್‌ ಆರಂಭದಲ್ಲಿ ಈ ಎರಡು ಮಾಡೆಲ್‌ ಬೈಕ್‌ಗಳು ಬಿಡುಗಡೆ ಆಗಲಿವೆ.

ಆನೆಬಲದ ಬೈಕ್‌ಗಳು
ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 ಮತ್ತು ಹಿಮಾಲಯನ್‌ 500 ಬೈಕ್‌ಗಳಲ್ಲಿ ಎಬಿಎಸ್‌ ವ್ಯವಸ್ಥೆ ಅಳವಡಿಕೆ ಆಗಿರುವುದೇ ವಿಶೇಷ. ಕ್ಲಾಸಿಕ್‌ 500  499 ಸಿಸಿ ಬೈಕ್‌. ಏರ್‌ ಕೂಲ್ಡ್‌ ಸಿಂಗಲ್‌ ಸಿಲಿಂಡರ್‌ನಿಂದ 27.2ಬಿಎಚ್‌ಪಿ ಮತ್ತು 41.3ಎನ್‌ಎಂ ಟಾರ್ಕ್‌ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಉಳಿದಂತೆ, 5 ಸ್ಪೀಡ್‌ ಗೇರ್‌ಬಾಕ್ಸ್‌ ಹೊಂದಿದ್ದು, ಆಫ್ ರೋಡ್‌ನ‌ಲ್ಲಿಯೂ ಚಿರತೆ ಓಟಕ್ಕೆ ಸೈ ಎನ್ನುವಂತೆ ತಯಾರಿಸಲಾಗಿದೆ.

ಹಿಮಾಲಯನ್‌ 500 ಬೈಕ್‌ನಲ್ಲೂ ಇದೇ ಸಾಮರ್ಥ್ಯ ಇರುವಂತೆ ನೋಡಿಕೊಳ್ಳಲಾಗಿದೆ. ಇದು 411ಸಿಸಿಯಿಂದ ಕೂಡಿದ್ದು, ಏರ್‌ ಕೂಲ್ಡ್‌ ಫ್ಯೂಯೆಲ್‌ ಇಂಜೆಕ್ಟೆಡ್‌ ವ್ಯವಸ್ಥೆ ಇದರಲ್ಲಿದೆ. ಸಿಂಗಲ್‌ ಸಿಲಿಂಡರ್‌ನಿಂದ 24.5 ಬಿಎಚ್‌ಪಿ, 32ಎನ್‌ಎಂ ಟಾರ್ಕ್‌ ಶಕ್ತಿ ಉತ್ಪಾದಿಸುವಂಥ ಸಾಮರ್ಥ್ಯ ಹೊಂದಿದೆ. ಕ್ಲಾಸಿಕ್‌ನಲ್ಲಿರುವಂತೆ 5 ಸ್ಪೀಡ್‌ ಗೇರ್‌ಬಾಕ್ಸ್‌ ಬೈಕ್‌ ಇದಾಗಿದೆ. ಯಾವುದೇ ಕ್ರೂಸರ್‌ ಬೈಕ್‌ಗಳಿಗೆ ಕಡಿಮೆ ಇಲ್ಲದಂತೆ ತಯಾರಿಸಲಾಗಿದೆ.

ಎಬಿಎಸ್‌ ‘ಆರ್‌ಇ’ಯಲ್ಲಿ ಮಾತ್ರ
ರಾಯಲ್‌ ಎನ್‌ಫೀಲ್ಡ್‌ ಸದ್ಯಕ್ಕೆ ಕ್ಲಾಸಿಕ್‌ 500ನಲ್ಲಿ ಮಾತ್ರ ಎಬಿಎಸ್‌ ವ್ಯವಸ್ಥೆ ಅಳವಡಿಸುವ ಸುಳಿವು ನೀಡಿದೆ. ಥಂಡರ್‌ಬರ್ಡ್‌ 500ನಲ್ಲಿ ಎಬಿಎಸ್‌ ಅಳವಡಿಸುವ ಸಾಧ್ಯತೆ ಕಡಿಮೆ. ಎಬಿಎಸ್‌ ಅಳವಡಿಕೆ ಬಗ್ಗೆ ನಿರ್ದಿಷ್ಟವಾದ ನಿರ್ಧಾರ ಕೈಗೊಂಡಿರುವ ಕಂಪನಿ, ಮುಂದಿನ ವರ್ಷದ ಅಂತ್ಯಕ್ಕೆ ತನ್ನೆಲ್ಲಾ ಶ್ರೇಣಿಯ ಬೈಕ್‌ಗಳಲ್ಲಿಯೂ ಎಬಿಎಸ್‌ ವ್ಯವಸ್ಥೆ ಅಳವಡಿಸುವ ಗುರಿ ಹೊಂದಿದೆ. ಆದರೂ, ಎಲ್ಲಾ ವರ್ಗದ ರೈಡರ್‌ಗಳನ್ನು ಮೆಚ್ಚಿಸಲಾಗದು ಎನ್ನುವ ಲೆಕ್ಕಾಚಾರದಿಂದ ಹಿಂದೇಟು ಹಾಕುತ್ತಿರಬಹುದು ಎನ್ನುವುದು ತಜ್ಞರ ಮಾತು.

ಸುರಕ್ಷತೆ ಮಾನದಂಡ
ಇತ್ತೀಚಿನ ತನ್ನೆಲ್ಲಾ ಮಾಡೆಲ್‌ ಬೈಕ್‌ಗಳಲ್ಲಿ ಡಿಸ್ಕ್ ಬ್ರೇಕ್‌ ಅಳವಡಿಸಿರುವ ರಾಯಲ್‌ ಎನ್‌ಫೀಲ್ಡ್‌, ಈ ಎರಡು ಬೈಕ್‌ಗಳಲ್ಲಿಯೂ ಅದನ್ನು ಉಳಿಸಿಕೊಂಡಿದೆ. ಜತೆಗೆ ಕೇಂದ್ರ ಸರ್ಕಾರದ ಎಬಿಎಸ್‌ ಕಡ್ಡಾಯ ನಿಯಮದಂತೆ ಸುರಕ್ಷತೆ ದೃಷ್ಟಿಯಿಂದ ಅಳವಡಿಸಲು ನಿರ್ಧರಿಸಿದೆ. ಹೀಗಾಗಿ ಇಂದಿನ ವೇರಿಯಂಟ್‌ಗಳಿಗಿಂತ ರೈಡಿಂಗ್‌ ಫೀಲ್‌ ಕೊಂಚ ಬದಲಾಗಿರಲಿದೆ. ಕೇಂದ್ರ ಸರ್ಕಾರ 125ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್‌ಗಳಲ್ಲಿಯೂ ಎಬಿಎಸ್‌ ಅಳವಡಿಕೆ ಕಡ್ಡಾಯಗೊಳಿಸಿದ್ದರಿಂದ ಈ ಕ್ರಮ ಎಲ್ಲಾ ಕಂಪನಿಗಳಿಗೆ ಅನಿವಾರ್ಯ.

ರಾಯಲ್‌ ಸವಾರರಿಗೆ ಸಿಹಿ ಸುದ್ದಿ
ಎಬಿಎಸ್‌ ಅಳವಡಿಕೆ ಸಹಜವಾಗಿ ಕಾಯಂ ಸವಾರರಲ್ಲಿ ಖುಷಿ ಹುಟ್ಟಿಸಿದೆ. ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಬೈಕ್‌ ಸವಾರರು ಎಬಿಎಸ್‌ ಬಯಸುತ್ತಾರೆ. ಬ್ರೇಕ್‌ ವ್ಯವಸ್ಥೆಯ ಕಾರ್ಯಕ್ಷಮತೆ ವೃದ್ಧಿಸಲಿಕ್ಕಾಗಿಯೇ ಎಬಿಎಸ್‌ ಅಳವಡಿಸಲಾಗುತ್ತದೆ.

– ಎಬಿಎಸ್‌ ವ್ಯವಸ್ಥೆಯೊಂದಿಗೆ ಕ್ಲಾಸಿಕ್‌ 500, ಹಿಮಾಲಯನ್‌ 500 ಶೀಘ್ರ ಮಾರುಕಟ್ಟೆಗೆ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.