ಡಾಲಿ ಧನಂಜಯ್ರ ಹೊಸ ಭಗವದ್ಗೀತೆ: Watch
Team Udayavani, Sep 12, 2018, 3:11 PM IST
ಡಾಲಿ ಧನಂಜಯ್ ಹಾಗೂ ಐರಾ ಮೋರಾ ಅಭಿನಯದ “ಭೈರವ ಗೀತ’ ಚಿತ್ರದ “ನೀ ನನ್ನ ಭಗವದ್ಗೀತೆ’ ಪೂರ್ತಿ ಹಾಡು ಬಿಡುಗಡೆಯಾಗಿದೆ. ಅಲ್ಲದೇ ನಿನ್ನೆಯಷ್ಟೇ ಹಾಡಿನ ಟೀಸರ್ ಬಿಡುಗಡೆಯಾಗಿತ್ತು. ಅಂದಹಾಗೆ ಈ ಹಾಡನ್ನು ಸಾಹಿತಿ ಕೆ. ಕಲ್ಯಾಣ್ ರಚಿಸಿದ್ದು, ವಿಜಯ್ ಯೇಸುದಾಸ್ ಹಾಗೂ ಚಿನ್ಮಯ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಗೌರಿ-ಗಣೇಶ ಹಬ್ಬದ ಅಂಗವಾಗಿ ಟೀಸರನ್ನು ಬಿಡುಗಡೆ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಹಾಡಿನಲ್ಲಿ ಧನಂಜಯ್ ಹಾಗೂ ಐರಾ ಮೋರಾ ಚುಂಬನದ ಹಿಸಿ-ಬಿಸಿ ದೃಶ್ಯ ಹಾಗೂ ಹೊಡೆದಾಟದ ದೃಶ್ಯಗಳು ಹೆಚ್ಚಾಗಿವೆ. “ಭೈರವ ಗೀತ’ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿವೆ. ಭಾಸ್ಕರ್ ರಾಶಿ ಹಾಗೂ ರಾಮ್ಗೋಪಾಲ್ ವರ್ಮಾ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಮ್ಗೋಪಾಲ್ ವರ್ಮಾ ಶಿಷ್ಯ ಸಿದ್ದಾರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಜಜೀವನದಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ.
ಇನ್ನು ಈ ಚಿತ್ರ ರಾಶಿ ಕಂಬೈನ್ಸ್ ಹಾಗೂ ಕಂಪೆನಿ ಪ್ರೊಡಕ್ಷನ್ಸ್ನಡಿ ನಿರ್ಮಾಣವಾಗಿದೆ. ಹೆಸರಿಗೆ ತಕ್ಕಂತೆ ಇದೊಂದು ಔಟ್ ಅಂಡ್ ಔಟ್ ಲವ್ಸ್ಟೋರಿಯಾಗಿದ್ದು, ಪ್ರೀತಿಗಾಗಿ ಕ್ರೈಮ್ನತ್ತ ವಾಲುವ ಪ್ರೇಮಿಯೊಬ್ಬನ ಕಥೆಯನ್ನು ಹೊಂದಿದೆ. ಈ ನಡುವೆಯೇ ಸೂರಿ ನಿರ್ದೇಶನದ “ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲೂ ಧನಂಜಯ್ ನಾಯಕರಾಗಿ ನಟಿಸುತ್ತಿದ್ದಾರೆ. “ಭೈರವ ಗೀತಾ’ ಅಕ್ಟೋಬರ್ 12 ರಂದು ಬಿಡುಗಡೆಯಾಗುತ್ತಿದ್ದು ಹೇಗೆ ಮೂಡಿ ಬಂದಿದೆ ಎನ್ನುವುದಕ್ಕೆ ಉತ್ತರ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ