ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಆಸೀಸ್ ಕ್ರಿಕೆಟಿಗ ಸ್ಮಿತ್
Team Udayavani, Sep 16, 2018, 12:15 PM IST
ಸಿಡ್ನಿ: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ತನ್ನ ಬಹುಕಾಲದ ಗೆಳತಿ ಡ್ಯಾನಿ ವಿಲ್ಲಿಸ್ ಅವರನ್ನು ಶನಿವಾರ ಸೌಥರ್ನ್ ಹೈಲೆಂಡ್ಸ್ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಕೆಲವು ಗಣ್ಯರು, ಸ್ನೇಹಿತ ವರ್ಗ ಹಾಗೂ ಕುಟುಂಬ ಸದಸ್ಯರು ಮದುವೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2017ರಲ್ಲಿ ಇವರಿಬ್ಬರು ನ್ಯೂಯಾರ್ಕ್ನಲ್ಲಿ ನಿಶ್ಚಿತಾರ್ಥ ನಡೆಸಿಕೊಂಡಿದ್ದರು. 2018ರ ಆರಂಭದಲ್ಲಿ ಈ ಜೋಡಿ ಮದುವೆಯಾಗುತ್ತಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದರು.