ಮಲ್ಯ ಅಕ್ರಮ ಸೂಚಿಸಿದ್ದು ಇಂಗ್ಲೆಂಡ್!
Team Udayavani, Sep 20, 2018, 6:00 AM IST
ಹೊಸದಿಲ್ಲಿ: ಉದ್ಯಮಿ ವಿಜಯ್ ಮಲ್ಯ 170 ಕೋಟಿ ರೂ. ಮೊತ್ತವನ್ನು ಸ್ವಿಸ್ ಬ್ಯಾಂಕ್ಗೆ ವರ್ಗಾವಣೆ ಮಾಡಿದ್ದನ್ನು ಮೊದಲು ಗುರುತಿಸಿ ಎಚ್ಚರಿಕೆ ನೀಡಿದ್ದೇ ಇಂಗ್ಲೆಂಡ್ನ ಅಧಿಕಾರಿಗಳು ಎಂಬುದು ಇದೀಗ ಬೆಳಕಿಗೆ ಬಂದಿದೆ. ಈ ನಂತರದಲ್ಲೇ ಮಲ್ಯಗೆ ಸಾಲ ನೀಡಿದ್ದ 13 ಬ್ಯಾಂಕ್ಗಳು ಒಟ್ಟಾಗಿ ಮಲ್ಯ ವಿರುದ್ದ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದವು. 2017 ಜೂನ್ 28 ರಂದು ಭಾರತೀಯ ತನಿಖಾ ಸಂಸ್ಥೆಗಳಿಗೆ ಇಂಗ್ಲೆಂಡ್ನ ಫೈನಾನ್ಸಿಯಲ್ ಇಂಟಲಿಜೆನ್ಸ್ ಯುನಿಟ್ ಎಚ್ಚರಿಕೆ ನೀಡಿತ್ತು. ಬಳಿಕ 13 ಬ್ಯಾಂಕ್ಗಳು ಒಟ್ಟಾಗಿ ಇಂಗ್ಲೆಂಡ್ನಲ್ಲಿರುವ ಮಲ್ಯ ಸ್ವತ್ತುಗಳನ್ನು ಜಪ್ತಿ ಮಾಡಲು ನಿರ್ಧರಿಸಿದ್ದವು. ಅದಕ್ಕೂ ಮೊದಲು 2015ರಲ್ಲಿ, ಸಿಬಿಐ ಹೊರಡಿಸಿದ ಸುತ್ತೋಲೆಯ ಪ್ರಕಾರ ಲಂಡನ್ನಿಂದ ದೆಹಲಿಗೆ ಮಲ್ಯ ಆಗಮಿಸಿದಾಗ ಬಂಧಿಸಬಾರದು ಎಂದು ಆದೇಶಿಸಿತ್ತು. ನಾಲ್ಕು ತಿಂಗಳ ನಂತರ ಕಾನೂನು ಕ್ರಮಗಳನ್ನು ಸಾಲಗಾರರು ಕೈಗೊಳ್ಳದೇ ಇದ್ದುದರಿಂದ, ಮಲ್ಯ ಪುನಃ ಲಂಡನ್ಗೆ ತೆರಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ