ರೈತರ ಠೇವಣಿಯೇ 30 ಸಾವಿರ ಕೋಟಿ


Team Udayavani, Sep 25, 2018, 6:00 AM IST

rupees-2000-500.jpg

ಬೆಂಗಳೂರು: ರಾಜ್ಯದ 21 ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ 21 ಸಾವಿರ ಕೋಟಿ ಹಾಗೂ ಅಪೆಕ್ಸ್‌ ಬ್ಯಾಂಕ್‌ನಲ್ಲಿ 8 ಸಾವಿರ ಕೋಟಿ ರೈತರು ಠೇವಣಿ ಇಟ್ಟಿದ್ದು  ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಠೇವಣಿ ಹಾಗೂ ಚಿತ್ರದುರ್ಗ, ಕಲಬುರಗಿ, ಕೋಲಾರ ಜಿಲ್ಲಾ ಬ್ಯಾಂಕ್‌ಗಳಲ್ಲಿ ಕಡಿಮೆ ಠೇವಣಿ ಇಡಲಾಗಿದೆ.

ಜಿಲ್ಲಾ ಸಹಕಾರ ಬ್ಯಾಂಕುಗಳು ಹಾಗೂ ಅಪೆಕ್ಸ್‌ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟವರಷ್ಟೇ ಅಲ್ಲದೇ ಅನೇಕ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಯೂ ಸಾಕಷ್ಟು ಠೇವಣಿ ಇಟ್ಟಿದ್ದಾರೆ. ಹೀಗಾಗಿ, ಸಹಕಾರ ಸಂಘ ಹಾಗೂ ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರಿಗೆ ಸಾಲಮನ್ನಾ ಅನ್ವಯ ಆಗುವುದಿಲ್ಲ ಎಂಬ ಷರತ್ತು ಸರ್ಕಾರ ಸಡಿಲಿಸದಿದ್ದರೆ ಸುಮಾರು 20 ಲಕ್ಷ ರೈತರು ಸಾಲಮನ್ನಾದಿಂದ ವಂಚಿತರಾಗುತ್ತಿದ್ದರು.

ಅಷ್ಟೇ ಅಲ್ಲದೆ ರೈತರು ಸಹಕಾರ ಸಂಘ ಮತ್ತು ಬ್ಯಾಂಕುಗಳಲ್ಲಿ ಇಟ್ಟಿದ್ದ ಠೇವಣಿ ವಾಪಸ್‌ ಪಡೆಯುವುದು ಹೆಚ್ಚಾಗುತ್ತಿತ್ತು. 2018 ರ ಮಾರ್ಚ್‌ 31 ರಿಂದ ಜೂನ್‌ 30 ರ ವರೆಗೆ ಮೂರು ತಿಂಗಳಲ್ಲಿ ಡಿಸಿಸಿ ಬ್ಯಾಂಕ್‌ಗಳಲ್ಲಿ 310 ಕೋಟಿ ರೂಪಾಯಿ ಠೇವಣಿ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ 953 ಕೋಟಿ ರೂಪಾಯಿ ಠೇವಣಿ ವಾಪಸ್‌ ತೆಗೆಯಲಾಗಿದೆ.

ಆಗಸ್ಟ್‌ 9 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾಲಮನ್ನಾ ವ್ಯಾಪ್ತಿಗೊಳಪಡಲು ರೈತರಿಗೆ ಸುಮಾರು 10 ಷರತ್ತುಗಳನ್ನು ಹಾಕಲಾಗಿತ್ತು. ಈ ಬಗ್ಗೆ ಆಗಸ್ಟ್‌ 14 ರಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿ ಸಾಧ್ಯವಾದಷ್ಟು ರೈತರನ್ನು ಸಾಲ ಮನ್ನಾ ಯೋಜನೆಯಿಂದ ಹೊರಗಿಡಲು ತಾಂತ್ರಿಕ ಕಾರಣಗಳನ್ನು ನೀಡಿ ಷರತ್ತುಗಳನ್ನು ಹಾಕುವ ಜಾಣತನ ತೋರಿತ್ತು. ರಾಜ್ಯ ಸರ್ಕಾರದ ಠೇವಣಿ ಇಟ್ಟವರಿಗೆ ಮನ್ನಾ ಇಲ್ಲ ಎಂಬ ಷರತ್ತು ಶೇ. 90 ರಷ್ಟು ರೈತರನ್ನು ಯೋಜನೆಯಿಂದಲೇ ದೂರ ಇಡುವಂತಾಗಿತ್ತು.

“ಉದಯವಾಣಿ’ಗೆ ದೊರೆತ ಮಾಹಿತಿ ಪ್ರಕಾರ 2018 ರ ಜೂನ್‌ ವರೆಗೆ ರಾಜ್ಯದ 21 ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು 21,764 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದಾರೆ. ಅಲ್ಲದೇ ಅಪೆಕ್ಸ್‌ ನಲ್ಲಿಯೂ 8198 ಕೋಟಿ ರೂಪಾಯಿ ರೈತರು ಠೇವಣಿ ಇಟ್ಟಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘಗಳ ಹೊರತಾಗಿಯೂ ಸುಮಾರು 29,962 ಕೋಟಿ ರೂಪಾಯಿ ಸಹಕಾರ ಬ್ಯಾಂಕ್‌ಗಳಲ್ಲಿಯೇ ರೈತರು ಠೇವಣಿ ಇಟ್ಟಿದ್ದಾರೆ. ಜೂ.30ರ ವರೆಗೆ ಠೇವಣಿ ಇಟ್ಟವರ ಮಾಹಿತಿಯೂ ಸಿಕ್ಕಿದೆ.

ಡಿಸಿಸಿ ಬ್ಯಾಂಕುಗಳಲ್ಲಿನ ರೈತರ ಠೇವಣಿ ವಿವರ
ಜಿಲ್ಲೆಗಳು                    ಠೇವಣಿ ಹಣ(ಕೋಟಿಗಳಲ್ಲಿ)

ಬಾಗಲಕೋಟೆ                 1932
ಬೆಳಗಾವಿ                       3065
ಬಳ್ಳಾರಿ                          810
ಬೆಂಗಳೂರು                    574
ಬೀದರ್‌                         1317
ವಿಜಯಪುರ                    1695
ಚಿಕ್ಕಮಗಳೂರು                590
ಚಿತ್ರದುರ್ಗ                      178
ದಾವಣಗೆರೆ                     226
ಧಾರವಾಡ                     485
ಕಲಬುರಗಿ                     180
ಹಾಸನ                         774
ಕೊಡಗು                        769
ಕೋಲಾರ                     181
ಮಂಡ್ಯ                        993
ಮೈಸೂರು                    406
ರಾಯಚೂರು                 535
ಶಿವಮೊಗ್ಗ                     683
ದಕ್ಷಿಣ ಕನ್ನಡ                 3,534
ಉತ್ತರ ಕನ್ನಡ               2028
ತುಮಕೂರು                 820

ಸರ್ಕಾರ ಠೇವಣಿ ಷರತ್ತು ವಾಪಸ್‌ ತೆಗೆದುಕೊಂಡಿದ್ದು ಸ್ವಾಗತಾರ್ಹ. ಇದೇ ರೀತಿ ಆದಾಯ ತೆರಿಗೆ, ಸಂಬಳ ಪಡೆಯುವವರು ಎಂಬ ಷರತ್ತು ಹೇರದೇ ಹಿಂದೆ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ಜಾರಿಗೊಳಿಸಬೇಕು.
– ಲಕ್ಷ್ಮಣ  ಸವದಿ, ಬಿಜೆಪಿ ರೈತ ಮೋರ್ಚಾ  ರಾಜ್ಯಾಧ್ಯಕ್ಷ.

ಸಾಲಮನ್ನಾ: ಸಹಕಾರ ಸಂಘಗಳಿಗೆ ನಿಯಮಾವಳಿ ರವಾನೆ
ಬೆಂಗಳೂರು:
ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತ ನಿಯಮಾವಳಿಯನ್ನು ಎಲ್ಲ ಸಹಕಾರ ಸಂಘಗಳಿಗೆ ರವಾನಿಸಿದ್ದು ಅ.5 ರೊಳಗೆ ಜುಲೈ ಮತ್ತು ಆಗಸ್ಟ್‌ ತಿಂಗಳ ಕ್ಲೈಮ್‌ ಕಳುಹಿಸುವಂತೆ ಸೂಚನೆ ನೀಡಿದೆ.

9448 ಕೋಟಿ ರೂ. ಸಾಲ ಮನ್ನಾ ಪೈಕಿ ಎರಡು ತಿಂಗಳ ಕ್ಲೈಮ್‌ 312 ಕೋಟಿ ರೂ. ಅ.15 ರೊಳಗೆ ಚುಕ್ತಾ ಆಗಲಿದೆ. ದಸರಾ ಮತ್ತು ದೀಪಾವಳಿ ನಡುವೆ 22.65 ಲಕ್ಷ ರೈತರಿಗೂ ಋಣಮುಕ್ತ ಪತ್ರ ಸಹ ಸಾಲಮನ್ನಾ ಆಗುವ ದಿನಾಂಕದ ನಮೂದಿನೊಂದಿಗೆ ಮನೆ ಬಾಗಿಲಿಗೆ ತಲುಪಲಿದೆ.

ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌, ರೈತರು ಠೇವಣಿ ಇಟ್ಟಿದ್ದರೆ ಸಾಲಮನ್ನಾ ಅನ್ವಯ ಆಗುವುದಿಲ್ಲ ಎಂಬ ಷರತ್ತಿಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಅದನ್ನು ತೆಗೆದುಹಾಕಲಾಗಿದೆ. ಹೀಗಾಗಿ, ಸಾಲಮನ್ನಾ 22.65 ಲಕ್ಷ ರೈತರಿಗೆ ಅನ್ವಯ ಆಗಲಿದೆ ಎಂದು ಹೇಳಿದರು.

ಸಾಲಮನ್ನಾ ಜತೆಗೆ ರೈತರ ಇತರೆ ಸಾಲದ ಹಣ ಚುಕ್ತಾ ಆಗುತ್ತಿದ್ದಂತೆ ಹೊಸದಾಗಿ ಸಾಲ ನೀಡಲಾಗುವುದು. ಈ ವರ್ಷ ಹದಿನೈದು ಲಕ್ಷ ರೈತರಿಗೆ ಹೊಸದಾಗಿ ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

9448 ಕೋಟಿ ರೂ. ಪೈಕಿ ಜುಲೈ-ಆಗಸ್ಟ್‌- 312 ಕೋಟಿ ರೂ., ಸೆಪ್ಟೆಂಬರ್‌-236 ಕೋಟಿ ರೂ.,ಅಕ್ಟೋಬರ್‌ 203 ಕೋಟಿ ರೂ., ಫೆಬ್ರವರಿ-1100 ಕೋಟಿ ರೂ., ಮಾರ್ಚ್‌-2000 ಕೋಟಿ ರೂ., ಮೇ-1700 ಕೋಟಿ ರೂ., ಜೂನ್‌-1500 ಕೋಟಿ ರೂ. ಕ್ಲೈಮ್‌ ಬರಲಿದೆ ಎಂದು ವಿವರಿಸಿದರು.

ಸಾಲಮನ್ನಾ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಡಿಬಿಟಿ ಮೂಲಕ ಜಮಾ ನೀಡಲಾಗುವುದು ಎಂಬ ಷರತ್ತು ಸಡಿಲಿಸಿ ರೈತರ ಉಳಿತಾಯ ಖಾತೆಗೆ ಸಾಲ ಮನ್ನಾ ಮೊತ್ತ ಜಮಾ ನೀಡಿ ಡಿಸಿಸಿ ಬ್ಯಾಂಕುಗಳು  ಈ ಮೊತ್ತವನ್ನು ಸಹಕಾರ ಸಂಘ/ಬ್ಯಾಂಕಿನಲ್ಲಿ ರೈತರ ಸಾಲದ ಖಾತೆಗೆ ತಕ್ಷಣ ವರ್ಗಾಯಿಸುವುದು ಎಂದು ತಿಳಿಸಲಾಗಿದೆ ಎಂದರು.

ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 17613 ಕೋಟಿ ರೂ. ಸಹಕಾರ ಸಂಘಗಳಲ್ಲಿ ರೈತರು ಮಾಡಿದ್ದ ಸಾಲ ಮನ್ನಾ ಆಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ 8165 ಕೋಟಿ ರೂ., ಇದೀಗ ಸಮ್ಮಿಶ್ರ ಸರ್ಕಾರದಲ್ಲಿ 9448 ಕೋಟಿ ರೂ. ಎಂದು ಹೇಳಿದರು. ಹಿಂದಿನ ಸರ್ಕಾರದ ಸಾಲಮನ್ನಾ ಬಾಬಿ¤ನ ಕೊನೇ ಕಂತು 1495 ಕೋಟಿ ರೂ. ಸಹ ಪಾವತಿಸಲಾಗಿದೆ ಎಂದು ಹೇಳಿದರು.

ತಿದ್ದುಪಡಿ ಷರತ್ತು
ರೈತರು ಸಹಕಾರ ಸಂಗಗಳು ಅಥವಾ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದರೆ ಸಾಲಮನ್ನಾ ಅನ್ವಯವಾಗದು ಎಂಬ ಷರತ್ತಿಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಅದನ್ನು ಕೈ ಬಿಡಲಾಗಿದೆ. ರೈತರು ಸಹಕಾರ ಸಂಘಗಳು/ ಸಹಕಾರಿ  ಬ್ಯಾಂಕ್‌/ವಾಣಿಜ್ಯ ಬ್ಯಾಂಕ್‌ಗಳಲ್ಲಿ ಹೊಂದಿರುವ ಮುದ್ದತ್ತು ಠೇವಣಿ ಇದ್ದಲ್ಲಿ, ಅಂತಹ ಮೊತ್ತ ಹೊರಬಾಕಿಯಲ್ಲಿ ಕಳೆಯತಕ್ಕದ್ದು ಎಂಬ ಷರತ್ತು ಕೈ ಬಿಡತಕ್ಕದ್ದು ಎಂದು  ಇದೀಗ ಆದೇಶ ಹೊರಡಿಸಲಾಗಿದೆ. ಜತೆಗೆ 20 ಸಾವಿರ ರೂ. ಮಾಸಿಕ ವೇತನದಾರರು/ಆದಾಯ ತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣಾ ಪತ್ರ ಪಡೆದು ಯೋಜನೆ ಜಾರಿಗೊಳಿಸುವುದು ಎಂದು ತಿಳಿಸಲಾಗಿದೆ.

– ಶಂಕರ ಪಾಗೋಜಿ

ಟಾಪ್ ನ್ಯೂಸ್

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

jairam ramesh

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

15

ʼIndian 2ʼ ರಿಲೀಸ್ ಮುಂದೂಡಿಕೆ ಬೆನ್ನಲ್ಲೇ ಧನುಷ್‌ ʼರಾಯನ್‌ʼ ಬಿಡುಗಡೆಗೆ ಪ್ಲ್ಯಾನ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್

dvs

Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

jairam ramesh

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.