Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ

Team Udayavani, May 5, 2024, 1:13 PM IST

ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ

ಬೆಳಗಾವಿ: ಗ್ಯಾರಂಟಿ ಯೋಜನೆ ಜಾರಿಯಾದ ಮೇಲೆ ಕೋಮುವಾದ ಬಗ್ಗೆ ಮೋದಿಯವರು ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಜರಂಗದಳದ ಕಾರ್ಯಕರ್ತರ ಹಾಗೆ ಮಾತಾಡ್ತಿದ್ದಾರೆ. ಚುನಾವಣೆಯಲ್ಲಿ ಸೋಲುವ ಭಯ ಹಾಗೂ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂದು ಈಗ ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆಂದುನಿ ಬಿಜೆಪಿಯವರು ಹೇಳಿದ್ದರು. 400 ಸ್ಥಾನ ಕೊಟ್ಟರೆ ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಮೋಹನ್ ಭಾಗವತ್ ಕೂಡ ಹೇಳಿದ್ದಾರೆ ಎಂದರು.

ಈ ಗ್ಯಾರಂಟಿ ಯೋಜನೆಗಳು ನಿರಂತರ. ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆ ಕಂಡರೆ ಆಗಲ್ಲ. ಎನಾದರೂ ಮಾಡಿ ನಿಲ್ಲಿಸಬೇಕೆಂದು ಹುನ್ನಾರ ಮಾಡುತ್ತಿದ್ದಾರೆ. ದಲಿತರು, ಕಾರ್ಮಿಕರು, ಹಿಂದೂಳಿದವರ ವಿರೋಧಿಗಳು, ಸಾರ್ವಜನಿಕರ ಪರ ಮಾತಾಡುತ್ತಿಲ್ಲ ಎಂದರು.

ಈ ಚುನಾವಣೆ ಎರಡನೇ ಸ್ವಾತಂತ್ರ್ಯದ ಹೋರಾಟದ ಎಂದು ಕರೆಯಬಹುದು. ನಮ್ಮ ಸಂವಿಧಾನ ಎಲ್ಲರಿಗೂ ಸಮಾನತೆ, ಸರ್ವರಿಗೂ ಸಮವಾಳು ಸಮಪಾಲು ಆಗಬೇಕು ಎನ್ನುವಂತಿದೆ. ಇದಕ್ಕೆ ವಿರುದ್ಧವಾಗಿರುವವರು ಬಿಜೆಪಿಯವರು. ಪ್ರತಿಯೊಬ್ಬರಿಗೂ ಆರ್ಥಿಕ ಸಾಮಾಜಿಕ ಶಕ್ತಿ ಬರಬೇಕು. ಎಲ್ಲಾ ಅವಕಾಶಗಳಿಂದ ವಂಚನೆಗೊಳಗಾದ ಜನರಿಗೆ ಸಬಲತೆ ಕೊಡುವುದನ್ನ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ.

ಮೋದಿಯವರು ಹತ್ತು ವರ್ಷ ಪ್ರಧಾನಿಯಾದರೂ ಈವರೆಗೂ ಏನು ಸಾಧನೆ ಮಾಡಿದ್ದೇವೆಂದು ಪ್ರಧಾನಿ ಹೇಳಿಲ್ಲ. ಹತ್ತು ವರ್ಷದಲ್ಲಿ ಹತ್ತು ಸಾಧನೆ ಹೇಳಬೇಕಲ್ಲಾ, ಒಂದು ಸಾಧನೆಯನ್ನೂ ಹೇಳಿಲ್ಲ. ಅದರ ಬದಲು ದ್ವೇಷದ ಭಾಷಣ, ದೇಶ ಒಡೆಯುವ ಕೆಲಸ ಮಾಡ್ತಿದ್ದಾರೆ. ಹತ್ತು ವರ್ಷ ಮತಗಳ ಕ್ರೋಢೀಕರಣ ಧರ್ಮದ ಕ್ರೋಢೀಕರಣ ಮಾಡಿದ್ದಾರೆ ಎಂದರು.

ಮೋದಿ ಹತ್ತು ವರ್ಷದಲ್ಲಿ ಜನರ ಮನಸ್ಸು ಹಾಳು ಮಾಡಿದ್ದಾರೆ. ದೇಶ ಒಡೆಯುವ ಕೆಲಸ ಬಿಜೆಪಿಯರು ಮಾಡಿದ್ದಾರೆ. ಆದರೆ ಜನರ ಮನಸ್ಸು ಕೂಡಿಸುವ ಸಲುವಾಗಿ ರಾಹುಲ್ ಗಾಂಧಿ ಪಾದಯಾತ್ರೆ, ನ್ಯಾಯಯಾತ್ರೆ ಮಾಡಿದರು. ಇದರಿಂದ 25 ಗ್ಯಾರಂಟಿಗಳನ್ನು ರಾಹುಲ್ ಗಾಂಧಿ ಜಾರಿ ಮಾಡಿದ್ದಾರೆ. ನಾವು ತಿಂಗಳಿಗೆ ಮಹಿಳೆಗೆ ಎರಡು ಸಾವಿರ ಕೊಟ್ಟರೆ ಅವರು ಬಡ ಕುಟುಂಬದ ಮಹಿಳೆಗೆ ಒಂದು ಲಕ್ಷ ಕೊಡ್ತೇವಿ ಅಂದಿದ್ದಾರೆ. ಯುವ ನ್ಯಾಯ ಎಂದು ನಿರುದ್ಯೋಗಿ ಯುವಕರಿಗೆ ಒಂದು ಲಕ್ಷ ಕೊಡುತ್ತೇನೆ ಅಂದಿದ್ದಾರೆ ಎಂದರು.

ರೈತರಿಗೆ ಸಹಾಯ ಮಾಡಲು ರೈತ ನ್ಯಾಯ ಹೆಸರಲ್ಲಿ ರೈತರ ಸಾಲಾ ಮನ್ನಾ ಮಾಡುತ್ತೇವೆ. ನರೇಂದ್ರ ಮೋದಿಯವರು  ವರೆಗೂ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಿಲ್ಲ. ಇವರು ಅಂಬಾನಿ, ಅದಾನಿಯವರ ಸಾಲ ಮನ್ನಾ ಮಾಡಿದರು. ಉಗ್ರಪ್ಪನವರು ಕೌನ್ಸಿಲ್ ನಲ್ಲಿ ಯಡಿಯೂರಪ್ಪನವರಿಗೆ ಸಾಲ ಮನ್ನಾ ಮಾಡಿ ಎಂದಾಗ ಯಡಿಯೂರಪ್ಪ ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಮಷೀನ್ ಇಲ್ಲ ಎಂದು ಹೇಳಿದ್ದರು. ಅವರ ಹೇಳಿಕೆ ದಾಖಲೆಯಲ್ಲಿದೆ. ತೇಜಸ್ವಿ ಸೂರ್ಯ ರೈತರ ಸಾಲಮನ್ನಾ ಮಾಡೋದ್ರಿಂದ ದೇಶಕ್ಕೆ ಒಳ್ಳೆಯದಾಗಲ್ಲ ಎಂದಿದ್ದಾರೆ. ರೈತರ ಸಾಲ ಮನ್ನಾ ಮಾಡಬಾರದು ಎನ್ನುವುದು ಬಿಜೆಪಿಯ ಹಿಡನ್ ಅಜೆಂಡಾ ಎಂದು ಸಿಎಂ ಗುಡುಗಿದರು.

ದೇವೇಗೌಡರು ದೇಶ ಬಿಟ್ಟರೆ?: ಜೆಡಿಎಸ್‌ನವರು ಈ ಮೊದಲು ಕಮ್ಯುನಲ್ ಪಾರ್ಟಿ ಎಂದು ಹೇಳ್ತಿದ್ದರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಸೇರಲ್ಲ ಎನ್ನುತ್ತಿದ್ದರು. ಮೋದಿ ‌ಪ್ರಧಾನಿ ಆಗಲ್ಲ, ಆದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಗೌಡರು ಹೇಳುತ್ತಿದ್ದರು. ಮೋದಿ ಪ್ರಧಾನಿ ಆದ ಬಳಿಕ ದೇವೆಗೌಡರು ದೇಶ ಬಿಟ್ಟು ಹೋದರೆ ಎಂದು ಸಿಎಂ ಪ್ರಶ್ನಿಸಿದರು.

ರೇವಣ್ಣನ ವಿಡಿಯೋಗಳು ನಾಲ್ಕೈದು ವರ್ಷಗಳ ಹಿಂದಿನದು ಎಂಬ ಸಿಟಿ ರವಿ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಸಿ.ಟಿ ರವಿ ಸುಳ್ಳು ಹೇಳುತ್ತಿದ್ದಾರೆ ಎಂದರು.

ವಿಡಿಯೋ ನಾಲ್ಕೈದು ವರ್ಷಗಳ ಹಿಂದಿನದು ಎಂದು ‌ಸಿಟಿ ರವಿ ಹೇಳಿರಬಹುದು. ಆದರೆ ಆಗ ಯಾವ ಸಂತ್ರಸ್ತೆ ಕಂಪ್ಲಿಟ್ ಕೊಟ್ಟಿರಲಿಲ್ಲ, ಈಗ ಕೊಟ್ಟಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪ್ರಜ್ವಲ್ ರೇವಣ್ಣನಿಗೆ ಸೇರಿದ ಅಶ್ಲೀಲ ವಿಡಿಯೋಗಳಿವೆ ಸಂಗತಿ ಗೊತ್ತಿದ್ದರೂ ಬಿಜೆಪಿಯವರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರು. ಅಲ್ಲದೇ ಪ್ರಜ್ವಲ್ ರೇವಣ್ಣನಿಗೂ ಮೈತ್ರಿ ಅಭ್ಯರ್ಥಿ ಎಂದು ಟಿಕೆಟ್ ‌ಕೊಟ್ಟಿದ್ದಾರೆ. ಸಾಲದೆಂಬಂತೆ ಪ್ರಜ್ವಲ್ ಪರವಾಗಿ ಮೋದಿ ಹಾಗೂ ಅಮಿತ್ ಶಾ ಪ್ರಚಾರ ನಡೆಸಿದ್ದಾರೆ ಎಂದ ಸಿಎಂ, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.

ಟಾಪ್ ನ್ಯೂಸ್

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

RCB Coach Andy Flower Drops Big IPL 2025 Auction Hint

IPL: ಸಿರಾಜ್, ದಯಾಳ್, ವೈಶಾಖ್ ಗೆ ಮುಗಿಯಿತಾ ಆರ್ ಸಿಬಿ ಪಯಣ; ಕೋಚ್ ಫ್ಲವರ್ ಹೇಳಿದ್ದೇನು?

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ

Anwarul Azim Anwar; ಹನಿ ಟ್ರ್ಯಾಪ್ ಮಾಡಿ ಬಾಂಗ್ಲಾ ಸಂಸದನ ಹತ್ಯೆ; ಢಾಕಾದಲ್ಲಿ ಮಹಿಳೆ ಬಂಧನ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಬಾಲಕಿ

10km ದೂರದಲ್ಲಿರುವ ಪ್ರವಾಸಿತಾಣಕ್ಕೆ ಕರೆದೊಯ್ಯಲಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ

Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

Head Coach; ಬಿಸಿಸಿಐ ಆಫರ್ ತಿರಸ್ಕರಿಸಿದ್ದೇನೆ ಎಂದ ಪಾಂಟಿಂಗ್; ತಿರುಗೇಟು ನೀಡಿದ ಜಯ್ ಶಾ

ಸಿದ್ದರಾಮಯ್ಯ

Mysore; ಲೋಕಸಭೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi ಅಳವಾನ್ ಗಲ್ಲಿಯಲ್ಲಿ ಗುಂಪು ಘರ್ಷಣೆ; ಪೊಲೀಸರೆದುರೇ ತಲ್ವಾರ್ ಪ್ರದರ್ಶಿಸಿದ ಯುವಕರು

Belagavi ಅಳವಾನ್ ಗಲ್ಲಿಯಲ್ಲಿ ಗುಂಪು ಘರ್ಷಣೆ; ಪೊಲೀಸರೆದುರೇ ತಲ್ವಾರ್ ಪ್ರದರ್ಶಿಸಿದ ಯುವಕರು

Minchu

Belagavi; ಸಿಡಿಲು ಬಡಿದು ಇಬ್ಬರು ಸಾವು: ಐವರಿಗೆ ಗಾಯ

1-fdsfssdf

Belagavi; ಗುಂಪುಗಳ ಘರ್ಷಣೆ: ಮಾರಾಮಾರಿ-ಕಲ್ಲು ತೂರಾಟ

ಲೋಕಸಭೆ ಚುನಾವಣೆಯ ಫಲಿತಾಂಶದ ಕುರಿತು ಭವಿಷ್ಯವಾಣಿ ನುಡಿದ ಶ್ರೀ ಲೋಕನಾಥ ಸ್ವಾಮೀಜಿ

Belagavi; ಲೋಕಸಭೆ ಚುನಾವಣೆಯ ಫಲಿತಾಂಶದ ಕುರಿತು ಭವಿಷ್ಯವಾಣಿ ನುಡಿದ ಶ್ರೀ ಲೋಕನಾಥ ಸ್ವಾಮೀಜಿ

Belagavi: 10ತಿಂಗಳ ಗೃಹಲಕ್ಷ್ಮೀ ಹಣ ಕೂಡಿಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

Belagavi: 10ತಿಂಗಳ ಗೃಹಲಕ್ಷ್ಮೀ ಹಣ ಕೂಡಿಟ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

RCB Coach Andy Flower Drops Big IPL 2025 Auction Hint

IPL: ಸಿರಾಜ್, ದಯಾಳ್, ವೈಶಾಖ್ ಗೆ ಮುಗಿಯಿತಾ ಆರ್ ಸಿಬಿ ಪಯಣ; ಕೋಚ್ ಫ್ಲವರ್ ಹೇಳಿದ್ದೇನು?

ಮಂಗಳೂರು ಉತ್ತರ ವಲಯ: ಚಿಣ್ಣರು ಬರುತ್ತಿದ್ದಾರೆ, ಶಾಲೆಗಳು ಸುರಕ್ಷಿತವಾಗಿರಲಿ

ಮಂಗಳೂರು ಉತ್ತರ ವಲಯ: ಚಿಣ್ಣರು ಬರುತ್ತಿದ್ದಾರೆ, ಶಾಲೆಗಳು ಸುರಕ್ಷಿತವಾಗಿರಲಿ

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

Udupi; ಯಕ್ಷರಂಗಕ್ಕೆ ಜಿವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರರ ಕೈಮಗ್ಗದ ಸೀರೆ

Udupi; ಯಕ್ಷರಂಗಕ್ಕೆ ಜಿವ ತುಂಬುವ ಮಟ್ಟು ಲಕ್ಷ್ಮಣ ಶೆಟ್ಟಿಗಾರರ ಕೈಮಗ್ಗದ ಸೀರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.