ಪಾಟೇಕರ್, ಅಗ್ನಿಹೋತ್ರಿಯಿಂದ ತನುಶ್ರೀ ದತ್ತಾಗೆ ಲೀಗಲ್ ನೊಟೀಸ್
Team Udayavani, Oct 4, 2018, 12:15 PM IST
ಮುಂಬಯಿ : ಹಿರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಮತ್ತು ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರಿಂದ ನನಗೆ ಎರಡು ಲೀಗಲ್ ನೊಟೀಸ್ಗಳು ಬಂದಿವೆ ಎಂದು “ಲೈಂಗಿಕ ಕಿರುಕುಳ ಹಗರಣ’ದ ಸಂತ್ರಸ್ತೆ ನಟಿ ತನುಶ್ರೀ ದತ್ತ ಇಂದು ಗುರುವಾರ ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದೆ “ಹಾರ್ನ್ ಓಕೆ ಪ್ಲೀಸ್’ ಎಂಬ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣದ ವೇಳೆ ತನಗೆ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದರು ಇಂದು ತನುಶ್ರೀ ಅವರು ಈಚೆಗೆ ಟಿವಿ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು. ನನ್ನ ಈ ಆರೋಪಕ್ಕೆ ನಾನು ಇಂದಿಗೂ ಬದ್ಧನಿದ್ದೇನೆ ಎಂದು ತನುಶ್ರೀ ಇವತ್ತು ಪುನಃ ಹೇಳಿದ್ದಾರೆ.
2005ರಲ್ಲಿ ಚಾಕೋಲೇಟ್ ಎಂಬ ಸಿನೆಮಾ ನಿರ್ಮಾಣದ ವೇಳೆ ನಿರ್ಮಾಪಕ ಅಗ್ನಿಹೋತ್ರಿ ಕೂಡ ನನ್ನೊಂದಿಗೆ ಲೈಂಗಿಕವಾಗಿ ಅನುಚಿತ ವರ್ತನೆ ತೋರಿದ್ದರು ಎಂದು ತನುಶ್ರೀ ಆರೋಪಿಸಿದ್ದರು.
ಇದೀಗ ತನುಶ್ರೀ ಅವರಿಗೆ ಇಂದು ಗುರುವಾರ ಪಾಟೇಕರ್ ಮತ್ತು ವಿವೇಕ್ ಅಗ್ನಿಹೋತ್ರಿ ಅವರಿಂದ ಲೀಗಲ್ ನೊಟೀಸ್ ಬಂದಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?