ಇಂಡೊನೇಷ್ಯಾ ಸುನಾಮಿ: ಸಾವಿನ ಸಂಖ್ಯೆ 1,424
Team Udayavani, Oct 5, 2018, 8:45 AM IST
ಪಾಲು: ಇಂಡೊನೇಷ್ಯಾದಲ್ಲಿ ಕಳೆದ ವಾರ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದ ಸಾವಿಗೀಡಾದವರ ಸಂಖ್ಯೆ 1,424ಕ್ಕೆ ಏರಿದೆ ಎಂದು ಇಂಡೊನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಇನ್ನೂ ಅನೇಕ ಮಂದಿ ಮಣ್ಣು, ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ.