ಮಂಡ್ಯದಲ್ಲಿ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ


Team Udayavani, Oct 14, 2018, 6:40 AM IST

ban14101806medn.jpg

ಮಂಡ್ಯ: ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳ ನೇಮಕಾತಿ ರ‍್ಯಾಲಿಗೆ ಶನಿವಾರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ಕೊಡಗು, ರಾಮನಗರ, ಕೋಲಾರ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸೇರಿದ ಅರ್ಹ ಪುರುಷ ಅಭ್ಯರ್ಥಿಗಳಿಗೆ ಈ ರ್ಯಾಲಿ ಏರ್ಪಡಿಸಲಾಗಿದೆ. ಶನಿವಾರದಿಂದ ಆರಂಭವಾದ ಈ ರ್ಯಾಲಿ ಅ.19ರವರೆಗೆ ನಡೆಯಲಿದೆ. ರ್ಯಾಲಿಯಲ್ಲಿ ಭಾಗವಹಿಸಲು 11 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.

ಸೈನಿಕ ಸಾಮಾನ್ಯ, ಸೈನಿಕ ತಾಂತ್ರಿಕ, ಸೈನಿಕ ತಾಂತ್ರಿಕ (ಏವಿಯೇಷನ್‌ ಅಮ್ಯೂನಿಷನ್‌ ಎಕ್ಸಾಮಿನರ್‌), ಸೈನಿಕ ಶುಶ್ರೂಷಕ ಸಹಾಯಕ/ಸೈನಿಕ ತಾಂತ್ರಿಕ ಡ್ರೆಸ್ಸರ್‌, ಸೈನಿಕ ಟ್ರೇಡ್‌ಮನ್‌, ಚೆಫ್ ಮೆಸ್‌ ಕೀಪರ್‌, ಹೌಸ್‌ ಕೀಪರ್‌, ಟೈಲರ್‌, ಡ್ರೆಸ್ಸರ್‌, ಸಹಾಯಕ ಸಿಬ್ಬಂದಿ, ಸೈನಿಕ ಲಿಪಿಕ ಉಗ್ರಾಣ ಪಾಲಕ ತಾಂತ್ರಿಕ/ ದಾಸ್ತಾನು ನಿರ್ವಹಣೆ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮೊದಲ ದಿನ 1770 ಮಂದಿಗೆ ದೇಹದಾಡ್ಯìಪರೀಕ್ಷೆ ನಡೆಸಲಾಯಿತು. 1.6 ಕಿ.ಮೀ. ಓಟ, ಬೀಮ್‌ (ಫ‌ುಲ್‌ಅಪ್ಸ್‌), 9 ಅಡಿ ಕಂದಕದೊಳಗೆ ನುಸುಳುವುದು, ಜಿಗ್‌ಜಾಗ್‌ ಬ್ಯಾಲೆನ್ಸ್‌ ಪರೀಕ್ಷೆಗಳನ್ನು ನಡೆಸಲಾಯಿತು. ರ‍್ಯಾಲಿ ಸ್ಥಳದಲ್ಲಿ ನಿಗದಿಪಡಿಸಿದ ವೈದ್ಯಕೀಯ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಒಳಪಡಿಸಲಾಯಿತು.

ವೈದ್ಯಕೀಯವಾಗಿ ಸದೃಢವಾಗಿರುವ ಅಭ್ಯರ್ಥಿಗಳಿಗೆ ನಿಗದಿತ ಸ್ಥಳದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಲಿಖೀತ ಪರೀಕ್ಷೆ ನಡೆಸುವ ಸ್ಥಳ, ದಿನಾಂಕ ಮತ್ತು ವೇಳೆಯನ್ನು ರ‍್ಯಾಲಿ ಸ್ಥಳದಲ್ಲಿ ಪ್ರವೇಶಪತ್ರದ ಮೂಲಕ ತಿಳಿಸಲಾಗುತ್ತದೆ. ರ‍್ಯಾಲಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಿಇಇ ಪ್ರವೇಶ ಪತ್ರವನ್ನು ರ್ಯಾಲಿಯ ಸ್ಥಳದಲ್ಲೇ ನೀಡಲಾಗುವುದು. ಪುನರ್‌ ಪರಿಶೀಲನಾ ಸಂದರ್ಭದಲ್ಲಿ ಸಂಬಂಧಪಟ್ಟ ತಜ್ಞರು ಎಂಎಚ್‌/ಸಿಎಚ್‌/ಬಿಎಚ್‌ನಲ್ಲಿ ತಜ್ಞರಾದವರಿಂದ ವೈದ್ಯಕೀಯವಾಗಿ ತೇರ್ಗಡೆ ಹೊಂದಿದ ಪ್ರಮಾಣಪತ್ರ ನೀಡಿದ ನಂತರವೇ ಪ್ರವೇಶಪತ್ರ ನೀಡಲಾಗುವುದು.

ಅರ್ಹತೆ ಹೊಂದಿರದ ಅಭ್ಯರ್ಥಿಗಳನ್ನು ಎಂಎಚ್‌/ಸಿಎಚ್‌/ಬಿಎಚ್‌ ತಜ್ಞರ ಬಳಿ ಪುನರ್‌ ಪರಿಶೀಲನೆಗೆ ಕಳುಹಿಸಲಾಗುತ್ತದೆ. ತಜ್ಞರ ಬಳಿ ಪುನರ್‌ ಪರಿಶೀಲನೆಗಾಗಿ ಶಿಫಾರಸು ಮಾಡಿದ ಅಭ್ಯರ್ಥಿಗಳು ನೇಮಕ ಮಾಡಿದ ತಜ್ಞರ ಬಳಿ 14 ದಿನಗಳೊಳಗೆ ಖುದ್ದು ಹಾಜರಾಗಿ ಮತ್ತೆ ನೇಮಕಾತಿ ಕಚೇರಿ, ಬೆಂಗಳೂರು ಅವರಿಗೆ ವರದಿ ಮಾಡಿಕೊಂಡು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣ ರಾದಲ್ಲಿ ಸಿಇಇಗೆ ಪ್ರವೇಶ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಸೈನಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫ‌ುಟ್‌ಪಾತ್‌ನಲ್ಲೇ ಮಲಗಿದ ಅಭ್ಯರ್ಥಿಗಳು: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೊರ ಜಿಲ್ಲೆಗಳಿಂದ ಸಾವಿರಾರು ಅಭ್ಯರ್ಥಿಗಳು ನಗರಕ್ಕೆ ಆಗಮಿಸಿದ್ದು, ಅಭ್ಯರ್ಥಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಸಿಗದೆ ಫ‌ುಟ್‌ ಪಾತ್‌ ಹಾಗೂ ಉದ್ಯಾನವನದಲ್ಲೇ ಮಲಗುವ ಸ್ಥಿತಿ ನಿರ್ಮಾಣವಾಗಿತ್ತು. ಕೆಲವರಿಗೆ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣದಲ್ಲಿ ವ್ಯವಸ್ಥೆ ಮಾಡಿಕೊಡಲಾಯಿತು. ಉಳಿದವರು ಗುರುಭವನ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಫ‌ುಟ್‌ಪಾತ್‌ ಮೇಲೆ ರಟ್ಟಿನ ಸಹಾಯದೊಂದಿಗೆ ಫ‌ುಟ್‌ಪಾತ್‌ನ ಪಡಸಾಲೆಗಳ ಮೇಲೆ ಆಶ್ರಯ ಪಡೆದು, ನಿದ್ರೆಗೆ ಜಾರಿದರು.

ಸೇನಾ ನೇಮಕಾತಿಗೆ ಬಂದಿರುವ ನಮಗೆ ರಾತ್ರಿ ಕಳೆಯಲು ವಸತಿ ಸೌಲಭ್ಯವಿಲ್ಲ. ಸೊಳ್ಳೆಗಳ ಕಾಟ ಹೆಚ್ಚಿದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ಬೆಳಗಿನ ವ್ಯಾಯಾಮ ಮಾಡುವುದಾದರೂ ಹೇಗೆ?
– ಹರೀಶ್‌ ಬಳ್ಳಾರಿ

ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಮಗೆ ಯಾವುದೇ
ಅನುದಾನದ ವ್ಯವಸ್ಥೆಯಿಲ್ಲ. ಅವರು ಓನ್‌ ರಿಸ್ಕ್ನಲ್ಲಿ ಬರಬೇಕು. ಕುಡಿಯುವ ನೀರು,ಶೌಚಾಲಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ಸೌಲಭ್ಯ ಕಲ್ಪಿಸಿದೆ.ಇದರ ನಡುವೆಯೂ ಹಲವರಿಗೆ ಭಾರತ್‌ ಮತ್ತು ಸ್ಕೌಟ್ಸ್‌, ಬಿಆರ್‌ಸಿ ಕೇಂದ್ರದ ಆವರಣದಲ್ಲಿ ಆಶ್ರಯ ಒದಗಿಸಿದೆ.
ನಂದೀಶ್‌ 
ಸಹಾಯಕ ನಿರ್ದೇಶಕರು ಯುವಜನಸೇವಾ ಮತ್ತು ಕ್ರೀಡಾ ಇಲಾಖೆ

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

baby 2

Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

1-wqewqewqe

MLC Election; ಕೊರಿಯರ್‌ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್‌!!

school

RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.