ಪೋಳ್ಯ ಮಠದಲ್ಲಿ ಕಳ್ಳತನ
Team Udayavani, Nov 9, 2018, 2:19 PM IST
ಕಬಕ: ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಗುರುವಾರ ತಡ ರಾತ್ರಿ ಕಳ್ಳರು ನುಗ್ಗಿದ್ದು, ಸುಮಾರು 3 ಲಕ್ಷಕ್ಕೂ ಮಿಕ್ಕಿದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ.
ಗಣಪತಿ ವಿಗ್ರಹ, ಮಹಾವಿಷ್ಣು ಉತ್ಸವ ಮೂರ್ತಿ ಸೇರಿದಂತೆ ಹಲವು ಬೆಳ್ಳಿಯ ವಿಗ್ರಹ, ಚಿನ್ನ ಸೇರಿದಂತೆ 900 ವರ್ಷಗಳ ಪುರಾತನ ವಸ್ತುಗಳನ್ನು ಕಳವು ಮಾಡಲಾಗಿದೆ. ಮುಖ್ಯ ವಿಗ್ರಹ ಕಳವು ಮಾಡಿಲ್ಲ.
ಕಳ್ಳರು ತಗಡು ಮಾಡಿನ ಮುಖಾಂತರ ಒಳ ನುಗ್ಗಿರಬಹುದೆಂದು ಅಂದಾಜಿಸಲಾಗಿದೆ. ಮಠದ ಮುಖ್ಯ ದ್ವಾರದ ಚಿಲಕವನ್ನು ಒಳಗಿನ ತೆರೆದು ಕಳ್ಳರು ಹೊರಬಂದಿದ್ದಾರೆ. ಬೆಳಿಗ್ಗೆ 6.30ಕ್ಕೆ ಮುಖ್ಯ ಅರ್ಚಕರು ಪೂಜೆಗೆ ಬಂದಾಗ ಘಟನೆ ಗಮನಕ್ಕೆ ಬಂದಿದೆ. ಪುತ್ತೂರು ನಗರ ಠಾಣಾ ಪೋಲಿಸರು, ಬೆರಳಚ್ಚು ತಜ್ಞರು, ಶ್ವಾನ ದಳ ಸ್ಥಳಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.